
ಚರಂಡಿ ಪಾಲಾಗುತ್ತಿರುವ ಕುಡಿಯುವ ನೀರುಕ
ಕಣ್ಣು ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು
ಕರುನಾಡ ಬೆಳಗು ಸುದ್ದಿ
ಗಂಗಾವತಿ.28- ಕಳೆದ ಒಂದು ವಾರದಿಂದ ಕುಡಿಯುವ ನೀರು ರಸ್ತೆ ತಂಬಾ ಹರಿದು ಚರಂಡಿ ಪಾಲಾಗಿ ಪೋಲಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಂತಕಲ್ ರೋಡ್ ನ ಬೈ ಪಾಸ್ ರಸ್ತೆಯ ಬಳಿ ಕುಡಿಯುವ ನೀರು ಪೂರೈಕೆಯ ಪೈಪ್ ಒಡೆದು ಒಂದು ವಾರ ಕಳೆದಿದೆ. ನೀರು ಪೋಲಾಗುತ್ತಿರುವ ಬಗ್ಗೆ ಸ್ಥಳೀಯರು ನಗರಸಭೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಕ್ಯಾರೇ ಎಂದಿಲ್ಲ. ಮಳೆಯ ಕೊರತೆಯಿಂದಾಗಿ ಕೆರೆ, ಜಲಾಶಯಗಳು ಒಣಗುತ್ತಿವೆ. ಜಿಲ್ಲೆಯಲ್ಲಿ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಜಿಲ್ಲಾಡಳಿತ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದೆ. ಆದರೆ ನಗರಸಭೆ ಸಿಬ್ಬಂದಿ ಮಾತ್ರ ಇದ್ಯಾವುದೂ ತಮಗೆ ಸಂಬಂಧವಿಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ನಗರಸಭೆ ಸಿಬ್ಬಂದಿ ಇತ್ತ ಗಮನ ಹರಿಸಿ ಒಡೆದು ಹೋದ ಕುಡಿಯುವ ನೀರು ಪೂರೈಕೆಯ ಪೈಪ್ ನ್ನು ಕೂಡಲೇ ಬದಲಾಯಿಸಿ ಅತ್ಶಮೂಲ್ಶವಾದ ಜೀವಜಲ ರಸ್ತೆಗೆ ಹರಿದು ಪೋಲಾಗುವುದನ್ನ ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.