2

ಗವಿಸಿದ್ದೇಶ್ವರ ಶ್ರೀಗಳ ಪ್ರವಚನ – ಭಾಗ ೨
ದೇಹ, ಮನ, ಆತ್ಮ ಪ್ರಸನ್ನತೆಯೇ ಬದುಕಿನ ಸತ್ಯ

ಕರುನಾಡ ಬೆಳಗು ಸುದ್ದಿ
ಗದಗ, ೨೭ – ದೇಹ, ಮನ ಹಾಗೂ ಆತ್ಮಪ್ರಸನ್ನತೆ ಹೊಂದಿದ ಬದುಕೇ ಸತ್ಯವಾದ ಬದುಕಾಗಿದ್ದು, ವಸ್ತುಗಳಲ್ಲಿ ಸುಖ, ಸಂತಸ ಅರಿಸುತ್ತಿರುವ ಕಾರಣ ಮಾನವ ಬದುಕು ಗೊಂದಲಮಯವಾಗಿದೆ ಎಂದು ಕೊಪ್ಪಳ ಗವಿಮಠದ ಜ. ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಅವರು ಸೋಮವಾರ ಸಂಜೆ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಜರುಗುತ್ತಿರುವ ಆಧ್ಯಾತ್ಮ ಪ್ರವಚನದಲ್ಲಿ ಮಾತನಾಡದರು. ದೇಹ, ಮನ, ಆತ್ಮದ ಅವಶ್ಯಕತೆಗಳು ಮತ್ತು ನೈಜ ಕಾರ್ಯಗಳ ಕುರಿತು ಅರಿತುಕೊಳ್ಳುವಲ್ಲಿ ವಿಫಲವಾದ ಕಾರಣ ಮಾನವ ಸಮಾಜ ಜ್ಯೋತಿರ್ಲಿಂಗ ಕಾಣುವ ಸಂದರ್ಭದಲ್ಲಿ ದಾರ್ಜಿಲಿಂಗ ಕಾಣುವ ಆಸೆ ವ್ಯಕ್ತಪಡಿಸುವ ದುಸ್ಥಿತಿ ತಲುಪಿದೆ.
ಮಾನವ ದೇಹ ಅದ್ಭುತವಾದದ್ದು ಎಂದು ಅಲ್ಲಮರು ಸ್ಪಷ್ಟಪಡಿಸಿದ್ದು ಹಿತಬುಕ್ ಹಾಗೂ ಋತಬುಕ್ ಅರಿತು ಬದುಕು ಕಟ್ಟಿಕೊಳ್ಳಬೇಕಿದೆ. ಶ್ರಮಭರಿತ ದುಡಿಮೆಯ ಅನ್ನ ಅಮೃತ ಸಮಾನವಾಗಿದ್ದು, ಉತ್ಸಾಹ, ಚೈತನ್ಯ ಆತ್ಮಾನಂದ ದೇಹದೊಳಗೆ ಮನಸ್ಸಿನೊಳಗೆ ಸುಸ್ಥಿರವಾದಾಗ ಆನಂದ ಕಾಣಲಿದೆ. ವಸ್ತುಗಳ ವ್ಯಾಮೋಹಕ್ಕೆ ಒಳಗಾದ ನಾವು ಸಂತಸ ಮರೆತಿದ್ದೇವೆ. ಆದಾಯದ ಬೆನ್ನು ಹತ್ತಿ ಆರೋಗ್ಯ, ಸಂಪತ್ತಿನ ಬೆನ್ನು ಹತ್ತಿ ಸಂತಸ ಕಳೆದುಕೊಳ್ಳುತ್ತಿದ್ದೇವೆ. ಇಂದು ಹಸಿವು ವುಳ್ಳವನೇ ಭಾಗ್ಯವಂತನಾಗಿದ್ದಾನೆ. ನಿದ್ದೆಯುಳ್ಳವನು ಭಾಗ್ಯವಂತನೆAದು ಪರಿಗಣಿಸಲ್ಪಡುತ್ತಿದ್ದು, ಹಾಸಿಗೆ ಇದ್ದವನು ನಿರ್ಬಾಗ್ಯತೆ ಅನುಭವಿಸುತ್ತಿದ್ದಾನೆ.
ಅನ್ನ, ನೀರು, ನಿಸರ್ಗ ನೀಡಿದ ಉತ್ತಮ ಕೊಡುಗೆಗಳಾಗಿದ್ದು, ನಾವೆಲ್ಲ ಬದುಕುತ್ತಿರುವ ಭೂಮಿ ಅತ್ಯಂತ ಅದ್ಭುತವಾಗಿದ್ದು, ಉತ್ತಮವಾದ ಬದುಕಿಗೆ ಸರ್ವವಿಧದಲ್ಲಿಯೂ ಅವಕಾಶಗಳ ಕಲ್ಪಿಸಿರುವ ಭೂಮಿಯಲ್ಲಿ ಮಾನವ ಕುಲ ಸಂತಸದಿAದ ಬದುಕಲು ಸಾಧ್ಯವಾಗದೇ ಇದ್ದಲ್ಲಿ ಮಾನವರು ಮತ್ತೆಲ್ಲಿ ಬದುಕಬಲ್ಲರು ಎಂಬ ಪ್ರಶ್ನೆ ಸಹಸವಾಗಿ ಉದ್ಭವವಾಗುತ್ತದೆ. ಪುಸ್ತಕ ಖರೀದಿಸಬಹುದು ಜ್ಞಾನವನ್ನಲ್ಲ. ಔಷಧಿ ಖರೀದಿಸಬಹುದು ಆರೋಗ್ಯವನ್ನಲ್ಲ. ವಸ್ತು, ಸರಕು, ಸರಂಜಾಮುಗಳನ್ನು ಖರೀದಿಸಬಹುದು. ಆದರೆ ಸಂತಸವನ್ನಲ್ಲ ಎನ್ನುವುದನ್ನು ಅರಿತು ಬದುಕು ರೂಪಿಸಿಕೊಳ್ಳುವುದೇ ಆಧ್ಯಾತ್ಮದ ಮೂಲವಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!