
ಗಾಳಿ ಮಾರೆಮ್ಮ ದೇವಸ್ಥಾನಕ್ಕೆ ಶಾಸಕ ಬಿ.ಎಂ.ನಾಗರಾಜ ಭೇಟಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,30- ನಗರದ ಶ್ರೀ ದೇವಿ ಕಾಳಿ ಮಾರೆಮ್ಮ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡರಾದ ಮೆಕಾನಿಕ್ ರಾಜಣ್ಣ ಹಾಗೂ ಸಹೋದರರು ದೇವರ ಕಾರ್ಯಕ್ರಮ ಏರ್ಪಡಿಸಿದ್ದರು.
ಶಾಸಕ ಬಿ ಎಂ ನಾಗರಾಜ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ವೈ ರಾಮಸ್ವಾಮಿ, ಸಾಹುಕಾರ್ ಮೆಕಾನಿಕ್ ರಾಜಣ್ಣ, ಗೊರವರ ಶ್ರೀನಿವಾಸ್, ಬಿ ಎಂ ಬಸವರಾಜ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.