WhatsApp Image 2024-02-11 at 7.38.47 PM

ಪ್ರಾಣಕ್ಕೆ ಕಂಠಕವಾಗಿರುವ ಗೋಬಿ ಮಂಚೂರಿ 

ಕರುನಾಡ ಬೆಳಗು ಸುದ್ದಿ

ಯಲಬುಗಾ,11- ಆ ಒಂದು ಐಟೆಮ್ ಕಂಡರೆ ಎಲ್ಲರಿಗೂ ಪಂಚಪ್ರಾಣ, ಅದರಲ್ಲು ಚಿಕ್ಕ ಮಕ್ಕಳಿಗೆ ಅದೆಂದರೆ ಅಚ್ಚುಮೆಚ್ಚು, ಹೊರಗಡೆ ಸುತ್ತಾಡೊಕೆ ಹೊದವರೆಲ್ಲ ಅದನ್ನು ತಿನ್ನದೇ ಬಂದಿರುವುದಿಲ್ಲ, ಬಾಯಿಗೆ ಬಲುರುಚಿ, ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವ ಬಯಕೆ. ಮಕ್ಕಳ ಹಠ ಬಿಡಿಸೋಕೆ ಅದೊಂದೆ ಸುಲಭ ಮಾರ್ಗವಾಗಿ ಬಿಟ್ಡಿದೆ. ಅದೇ ಈಗೀನ ಪಿಳಿಗೆಯ ನೆಚ್ಚಿನ ಲಘು ಆಹಾರ “ಗೋಬಿ ಮಂಚೂರಿ” ಚಿಕ್ಕ ವಯಸ್ಸಿನವರಿಂದ ಇಡಿದು ವಯೋವೃಧ್ದರವರೆಗೆ ಪ್ರತಿ ದಿನ‌ ಗೋಬಿ ಮಂಚೂರಿ ನೆಚ್ಚಿನ ಉಪಹಾರವಾಗಿದೆ.

ಕೇಲವರಿಗಂತು ಗೋಬಿ ಇಲ್ಲದೇ ಇದ್ದರೆ ಊಟ ಹೋಗುವುದಿಲ್ಲ, ಈಗ ಗೋಬಿ ಸವಿಯುವದು ಪ್ಯಾಷನ್ ತರ ಆಗಿದೆ. ಸಾಯಂಕಾಲ ಆದರೆ ಸಾಕು ಅದನ್ನು ಸವಿಯಲು ಕಾತುರದಿಂದ ಕಾಯುತ್ತಾರೆ. ನಾವೂ ಸೇವಿಸುತ್ತಿರುವ ಗೋಬಿ ಮಂಚೂರಿ ಬಗ್ಗೆ ಆತಂಕಕಾರಿ ವಿಷಯಗಳು ಈಗ ಚರ್ಚೆಯಲ್ಲಿವೆ. ಅದು ಕೇವಲ ಬಾಯಿ ಚಟಕ್ಕೆ ಮಾತ್ರ ಸೀಮಿತ ಎನ್ನತ್ತಿದ್ದಾರೆ.‌

ನಾವೂ ದಿನನಿತ್ಯ ಸೇವಿಸುತ್ತಿರುವ ಗೋಬಿಮಂಚೂರಿ ಆರೋಗ್ಯಕ್ಕೆ ಏಷ್ಟು ಹಿತ ಎಂಬುದರ ಬಗ್ಗೆ ಆತ್ಮ‌ವಿಮರ್ಶೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಬಂದಿದೆ. ಕೇವಲ ಬಾಯಿರುಚಿಗೆ ಸೀಮಿತವಾಗಿರುವ ಗೋಬಿ ಮಂಚೂರಿ ನಮ್ಮ ಪ್ರಾಣಕ್ಕೆ ಕುತ್ತು ತರುತ್ತಿದೆ ಎಂಬ ಸತ್ಯಸಂಗತಿ ಹೊರಬಿಳುತ್ತಿದೆ. ಗೋಬಿ ಮಂಚೂರಿ ತಯಾರಿಕೆಯಲ್ಲಿ”ಸಿಂತೆಟಿಕ್’ ಎಂಬ ಬಣ್ಣದ ವಸ್ತುಗಳನ್ನು ಬಳಸಲಾಗುತ್ತದೆ. ಇದು ತುಂಬಾ ಅಪಾಯಕಾರಿ. ಮತ್ತು ಮಾರಾಟಗರರು ಗುಣಮಟ್ಟ ವಲ್ಲದ ಸಾಸ್ ಮತ್ತು ಲವಣಗಳನ್ನು ಮಿಶ್ರಣ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಬಿರುವ ಲಕ್ಷಣಗಳಿವೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI ) ಲಘು ಉಪಹಾರದಲ್ಲಿ ಒಂದಾದ ಗೋಬಿ ಮಂಚೂರಿಯನ್ನು ನಿಷೇಧಿಸಿದೆ. ಈ ಆಹಾರ ಪದಾರ್ಥವು ಅಧ್ಬುತ ರುಚಿ ಹೊಂದಿದ್ದರಿಂದ ಜನ ಹೆಚ್ಚು ಸವಿಯಲು ಉತ್ಸಹ ಹೊಂದಿದ್ದಾರೆ.ಆದರೆ ಇದರ ಅಡ್ಡ ಪರಿಣಮಗಳ ಬಗ್ಗೆ ಜಾಗೃತಿ ಮೂಡಬೇಕಿದೆ.

ಬಟ್ಟೆಗಳನ್ನು ಒಗೆಯಲು ಬಳಸುವ ರಾಸಾಯನಿಕ ವಸ್ತುಗೊಂದಿಗೆ ಗೋದಿ ಹಿಟ್ಟು ಮತ್ತು ಜೋಳದ ಹಿಟ್ಟನ್ನು ಮಿಶ್ರಣ ಮಾಡಿ ಹೂಕೋಸಿನೊಂದಿಗೆ ಬೆರೆಸಿ ಗೋಬಿ ತಯಾರು ಮಾಡಲಾಗುತ್ತದೆ.

ಈ ಹೂಕೋಸುಗಳು ಬಹಳ ದಿನ ಸಂಗ್ರಹವಾಗಿರುತ್ತವೆ. ಹಾಗೂ ಇಲ್ಲಿ ಬಳಸಲಾಗುವ ಸಾಸ್ ದೀರ್ಘಕಾಲದ ವರೆಗೂ ಸಂಗ್ರಹಿಸಿ ಇಡುವುದರಿಂದ ಬ್ಯಾಕ್ಟೇರಿಯಾಗಳು ಉತ್ಪತ್ತಿಯಾಗಿ ಅದನ್ನು ಸೇವಿಸಿದಾಗ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಂಭವವಿದೆ. ಆದ್ದರಿಂದ ಆರೋಗ್ಯಕ್ಕೆ ಮಾರಕವಾಗಿರುವ ಗೋಬಿ ಮಂಚೂರಿ ಪ್ರೀಯರಿಗೆ ಇದೊಂದು ಎಚ್ಚರಿಕೆಯ ಗಂಟೆ.

ಗೋಬಿ ಮಂಚೂರಿ ಮಾರಟಗಾರರು ಬಹುತೇಕ ನಮ್ಮ ಇಲಾಖೆಯಿಂದ ಉದ್ಯಮ ಪರವಾನಗಿ ತೆಗೆದುಕೊಂಡಿರುವುದಿಲ್ಲ ಈಗಾಗಿ ನಾವೇ ತಾಲೂಕಿನ ತುಂಬ ಸಂಚರಿಸಿ, ಪರಿಶೀಲನೆ ಮಾಡಿ, ಲಘು ಆಹಾರೋತ್ಪಾ ದನೆಯಲ್ಲಿ ಟೆಸ್ಟಿಂಗ್ ಪೌಡರ್ ಬಳಕೆಯ ಬಗ್ಗೆ ಮತ್ತು ಸಿಂಥೇಟಿಕ್ ಬಣ್ಣಗಳ ಬಳಕೆಯ ಬಗ್ಗೆ ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿದ್ದೆವೆ. ಗೋಬಿ ಮಂಚೂರಿ ಸೇವನೆಯಿಂದ ಆರೋಗ್ಯಕ್ಕೆ ಹಾನಿ ಸಂಭವಿಸಬಹುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!