ಗೌತಮ ಬುದ್ದನ ಶಾಕ್ಯೆ ವಂಶ ವಿಶ್ವದ ಮೊದಲ ಪ್ರಜಾಪ್ರಭುತ್ವ ರಾಜ್ಯ : ಪ್ರೊ.ಚಂದ್ರಶೇಖರ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 23- ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಗುರುವಾರ ಇಲ್ಲಿನ ಗೌತಮಬುದ್ದ ಫಂಕ್ಷನ್ ಹಾಲ್ ನಲ್ಲಿ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮಹಾ ಮಾನವತಾದಿ ಬುದ್ದ ಜಯಂತಿಯನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಪ್ರೊಫೆಸರ್ ಚಂದ್ರಶೇಖರ್ ಮಾತನಾಡಿ, ಗೌತಮಬುದ್ದರು ಶಾಕ್ಯೆ ವಂಶಸ್ಥರು. ಶಾಕ್ಯೆವರಲ್ಲಿ 5 ವರ್ಷಕ್ಕೊಮ್ಮೆ ಕೈಎತ್ತಿ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಇತ್ತು. ಇದನ್ನೇ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸರ್ವಜನಾಂಗಕ್ಕೂ ಮತದಾನದ ಹಕ್ಕನ್ನು ಕೊಡಿಸಿ, ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಸಂವಿಧಾನಿಕ ಅಧಿಕಾರವನ್ನು ನೀಡಿದರು ಎಂದರು.
ಯಾವುದೇ ಸಮುದಾಯ ತನ್ನ ನೈಜ ಇತಿಹಾಸದ ಬೇರುಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಮೂಲಕ ಹೊಸ ಚರಿತ್ರೆಯೊಂದನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಮಾದಿಗ ಸಮುದಾಯ ಶಿಕ್ಷಣ ಪಡೆದು ಸುಸಂಸ್ಕೃತರಾಗಿ, ರಾಜಕೀಯ ಅಧಿಕಾರವನ್ನು ಪಡೆದು ಮುಂದುವರೆಯುವ ಮೂಲಕ ಇಂದು ಕಾಡುತ್ತಿರುವ ಸಮುದಾಯಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯ ಮುಖಂಡರಾದ ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ಎಂ.ಸಿ.ವೀರಸ್ವಾಮಿ, ತಿಪ್ಪಣ್ಣ, ರಾಮಚಂದ್ರ, ಶೇಷು, ಗ್ಯಾನಪ್ಪ ಬಡಿಗೇರ, ಬಸವರಾಜ, ವೆಂಕಪ್ಪ. ಶ್ರೀನಿವಾಸ .ಹೆಚ್, ನಿಂಬಗಲ್ ರಾಮಕೃಷ್ಣ, ಬಿ ಮಾರೆಣ್ಣ, ಮರಿದಾಸ, ಭರತ್ ಕುಮಾರ್, ಸಿ ಆರ್, ಲಕ್ಷ್ಮೀ, ಕರಿಯಪ್ಪ, ಹನುಮಂತಪ್ಪ, ವಿಜಯ್ ಕುಮಾರ್, ಮಾರೇಶ, ಮಂಜುನಾಥ, ರಾಜಣ್ಣ,ವೀರೇಶ,ಹೆಚ್ ಬಿ ಶ್ರೀನಿವಾಸ, ಜೆ ಬಿ ರಾಘು,ಓಬಳೇಶ, ಶಿವಕುಮಾರ, ನಾಗರಾಜ, ಕಲ್ಲಪ್ಪ, ಪಂಪಾಪತಿ, ರವಿ, ಶೇಖರ್, ಕನ್ನೇಶ ಸೇರಿದಂತೆ ವಿಜಯನಗರ ಜಿಲ್ಲೆ ಮಾದಿಗ ಮಹಾಸಭಾ(ರಿ) ಪದಾಧಿಕಾರಿಗಳು ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಸಂಘ ಪದಾಧಿಕಾರಿಗಳು ಇದ್ದರು.
