
ಚಿಕ್ಕವಂಕಲಕುಂಟಾ ಶ್ರೀ ಆಂಜನೇಯ ಸ್ವಾಮಿಯ ಹುಂಡಿಯ ಹಣ ಎಣಿಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,28- ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಸುಕ್ಷೇತ್ರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಲಾಯಿತು.
ಶ್ರೀ ಮಾರುತೇಶ್ವರ ಟ್ರಸ್ಟ್ ಸಮಿತಿಯ ಕಾರ್ಯದರ್ಶಿ ಹಾಗು ತಹಶೀಲ್ದಾರ್ & ವಿಜಯಕುಮಾರ್ ಗುಂಡೂರು ನೇತೃತ್ವದಲ್ಲಿ ಶ್ರೀ ಆಂಜನೇಯ ದೇವಸ್ಥಾನ ಹುಂಡಿಯ ಹಣ ಎಣಿಕೆ ಮಾಡಲಾಯಿತು ಎರಡು ತಿಂಗಳಲ್ಲಿ ಸುಮಾರು ಒಟ್ಟು ಹಣ 191000 ಸಾವಿರ ರೂಪಾಯಿ ಹಣ ಸಂಗ್ರಹವಾಗಿದೆ.
ಹಣ ಎಣಿಕೆ ಕಾರ್ಯದಲ್ಲಿ ಗ್ರಾಮ ಆಡಳಿತಾಧಿಕಾರಿ ಶಿವಶರಣಪ್ಪಗೌಡ ಮಾಲಿ ಪಾಟೀಲ, ಆರ್. ಎಂ. ಅಂಜುಮ. ಮಾರುತಿ ಪೊಜಾರ, ಸಿಬ್ಬಂದಿಗಳಾದ ಬಸವರಾಜ ತಳವಾರ, ಭೀಮಣ್ಣ ಕಂಬಳಿ, ಮಂಜುನಾಥ ತಳವಾರ, ರಸೂಲಸಾಬ ಕಾತರಕಿ, ಶೇಬಿರಪಾಷ ವಾಲಿಕಾರ, ಚಂದಪ್ಪ ಕುರಿ, ವಿಜಯ ಮತ್ತು ಇತರರು ಭಾಗವಹಿಸಿದ್ದರು.