ಡಾ.ಕ್ಯಾವಟರ್ ಪರ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಪ್ರಚಾರ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 16- ತಾಲೂಕು ತೆಕ್ಕಲಕೋಟೆ ಮತ್ತು ಕರೂರು ಮಹಾಶಕ್ತಿ ಕೇಂದ್ರಗಳಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅವರ ಪರವಾಗಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿಜೆಪಿಯ ಹಿರಿಯ ಮುಖಂಡ ಎಂಎಸ್ ಸೋಮಲಿಂಗಪ್ಪ ಮತಯಾಚನೆ ಮಾಡಿದರು.
ಸಿರುಗುಪ್ಪ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಅಭ್ಯರ್ಥಿ ಬಸವರಾಜ, ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ, ಗಾಲಿ ಲಕ್ಷ್ಮಿ ಅರುಣಾ, ಮುಖಂಡರಾದ ದರಪ್ಪ ನಾಯಕ, ಸಿದ್ಧರಾಮ ಗೌಡ ,ಕೋಟೇಶ್ವರ ರೆಡ್ಡಿ, ಚಿರಂಜೀವಿ ರೆಡ್ಡಿ, ಶಂಕರ್ ರೆಡ್ಡಿ, ರಾಮನಗೌಡ, ಶೇಖರ್ ಗೌಡ, ವೀರನಗೌಡ, ಎಂ ಆರ್ ಗೌಡ, ಮೋಹನ್ ರೆಡ್ಡಿ, ವಿಕ್ರಂ ಜೈನ್, ನವೀನ್ ರೆಡ್ಡಿ, ಸೇರಿ ದರಪ್ಪ ನಾಯಕ ಅವರು ಮಾತನಾಡಿ ಮತ್ತೊಮ್ಮೆ ದೇಶದಲ್ಲಿ ಮೋದಿ ಅಧಿಕಾರಕ್ಕೆ ಬರಬೇಕು ಕಾಂಗ್ರೆಸ್ ಗ್ಯಾರಂಟಿಗಳನ್ನು ನಂಬಿ ಮೋಸ ಹೋಗಬೇಡಿ ಎಲ್ಲರೂ ಡಾ ಬಸವರಾಜ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
