WhatsApp Image 2024-07-06 at 2.55.22 PM

ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ : ಡಾ.ಬಿ.ಈರಣ್ಣ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 6- ವಾರಕ್ಕೊಂದು ದಿನ-ಪ್ರತಿ ಶುಕ್ರವಾರ ಈಡಿಸ್ ಲಾರ್ವ ತಾಣಗಳ ನಾಶ ದಿನ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಇವರ ಆದೇಶದಂತೆ ಇತರೆ ಇಲಾಖೆಗಳ ಸಮನ್ವಯ ಸಾಧಿಸಿ ಡೆಂಗ್ಯೂ ಜ್ವರ ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಬಿ ಈರಣ್ಣ, ತಾಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕರನ್ನು, ಕೃಷಿ ಸಹಾಯಕ ನಿರ್ದೇಶಕ ಕಚೇರಿಯ ಸಿಬ್ಬಂದಿ ವರ್ಗದವರನ್ನು ಸಾರ್ವಜನಿಕರನ್ನು ಮತ್ತು ಪತ್ರಿಕಾ ಮಾಧ್ಯಮದವರನ್ನು ಇಲಾಖಾವಾರು ಭೇಟಿ ಮಾಡಿ ಡೆಂಗ್ಯೂ ಜ್ವರ ಹರಡುವ ಈಡಿಸ್ ಈಜಿಪ್ಟೈ ಸೊಳ್ಳೆಗಳ ಲಾರ್ವಗಳನ್ನು ಪ್ರಾತ್ಯೇಕ್ಷಿತವಾಗಿ ತೋರಿಸಿ, ಸೊಳ್ಳೆಗಳ ಜೀವನ ಚಕ್ರ ಸಂತಾನೋತ್ಪತ್ತಿ ತಾಣ ವಾರಕ್ಕೊಮ್ಮೆ ನೀರಿನ ಪರಿಕರಗಳಾದ ಡ್ರಮ್, ಗಚ್ಚು, ಸಂಪು, ಮುಂತಾದವು ತೊಳೆದಿಟ್ಟು ನೀರು ತುಂಬಿದ ಮೇಲೆ ಮುಚ್ಚಿಡಲು, ಹೂವಿನ ಕುಂಡ ಏರ್ ಕೂಲರ್, ಮನಿ ಪ್ಲಾಂಟ್ ನಲ್ಲಿ ಡೆಂಗ್ಯೂ ಹರಡುವ ಸೊಳ್ಳೆ ಬೆಳೆಯುವ ಸಾಧ್ಯತೆ ಇರುವುದರಿಂದ ಮನೆಯಲ್ಲಾಗಲಿ ಕಚೇರಿಯಲ್ಲಾಗಲಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಸ್ವಚ್ಛತೆ ಕಾಪಾಡಿಕೊಂಡು ಡೆಂಗು ಜ್ವರ ಬರದಂತೆ ಮುಂಜಾಗ್ರತೆ ವಹಿಸಲು ಮಾಹಿತಿ ನೀಡಿ ಆರೋಗ್ಯ ಇಲಾಖೆಗೆ ಸಹಕರಿಸಲು ಕೋರಿದರು.

ನಂತರದಲ್ಲಿ ವಿವಿಧ ವಾರ್ಡಿನಲ್ಲಿ ಆಶಾ ರವರು ಮಾಡಿದ ಲಾರ್ವ ತಾಣಗಳ ಸಮೀಕ್ಷೆಯನ್ನು ಅಡ್ಡ ಪರಿಶೀಲನೆ ಮಾಡಿ ಲಾರ್ವ ಕಂಡು ಬಂದ ತಾಣಗಳನ್ನು ಖಾಲಿ ಮಾಡಿಸಿ ಡೆಂಗ್ಯೂ ಜಾಗೃತಿ ಮೂಡಿಸಲಾಯಿತು

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ನಗರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್ ಸಾಕ್ಷರತಾ ಅಬ್ದುಲ್ ನಬಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!