WhatsApp Image 2024-03-30 at 4.06.40 PM

ತಂಗಡಿಗೆ ತಾಯಿಯ ನಿಂದನೆ ರೀತಿಯ ಮಾತು, ಸಿ.ಟಿ ರವಿ ಕ್ಷಮೆಯಾಚಿಸಲಿ : ವಿ ಜಲಾಲ್‌ ಕುಮಾರ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,30- ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿಯವರನ್ನು ನಿಂದಿಸುವಾಗ ತಾಯಿಯನ್ನು ಅವಹೇಳನ ಮಾಡುವ ರೀತಿಯ ಪದಗಳನ್ನು ಬಳಸಿದ್ದು, ಇದು ಅವರಿಗೆ ಶೋಭೆ ತರುವಂತದ್ದಲ್ಲ, ಶಿಸ್ತಿನ ಮತ್ತು ಸಂಸ್ಕೃತಿವುಳ್ಳ ಪಕ್ಷ ಎಂದು ಹೇಳಿಕೊಳ್ಳುವ ಬಿ.ಜೆ.ಪಿ ಇಂತ ಕೊಳಕು ಬಾಯಿ ರಾಜಕಾರಣಿಗಳನ್ನು ಇಟ್ಟುಕೊಂಡು ಇಡೀ ಪಕ್ಷವೇ ಹೊಲಸಾಗಿದೆ ಸಿ.ಟಿ ರವಿ ಕೂಡಲೆ ತಂಗಡಿಗಿ ತಾಯಿಯವರ ಮತ್ತು ಭೋವಿ ಸಮಾಜದವರ ಕ್ಷಮೆಯಾಚಿಸಬೇಕೆಂದು ಬಳ್ಳಾರಿ ಜಿಲ್ಲಾ ಭೋವಿ ವಡ್ಡರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ ಜಲಾಲ್ ಕುಮಾರ್ ಅಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜಕಾರಣದಲ್ಲಿ ಒಬ್ಬರಿಗೊಬ್ಬರು ಟೀಕೆ, ನಿಂದನೆ ಮಾಡುವುದು ಸಹಜವಾದದ್ದೆ, ಆದರೆ ಟೀಕೆ ಅಥವಾ ನಿಂದನೆ ಆರೋಗ್ಯಕರ ರೀತಿಯಲ್ಲಿರಬೇಕು, ಅದುಬಿಟ್ಟು ಪೂರ್ವಗ್ರಹ ಪೀಡಿತರಾಗಿ ಅಕ್ಕನ್ ಅಮ್ಮನ್ ರೀತಿಯ ಪದ ಬಳಕೆ ಮಾಡುವುದು ಅಸಹ್ಯಕರವಾದುದು, ಬಿ.ಜೆ.ಪಿ ಯ ಸಿ.ಟಿ ರವಿ ಇಂತ ಪದಗಳನ್ನು ಬಳಸಿ ತಾನು ಹೊಲಸಿನಲ್ಲಿ ಬದುಕುವ ಪ್ರಾಣಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಖಾರವಾಗಿ ನುಡಿದರು.

ಆದಷ್ಟು ಶೀಘ್ರದಲ್ಲಿ ಶಿವರಾಜ್ ತಂಗಡಗಿ ತಾಯಿ ಮತ್ತು ಭೋವಿ ಸಮಾಜದ ಕ್ಷಮೇ ಕೇಳಬೇಕೆಂದು ಒತ್ತಾಯಿಸಿದರು, ಇದೇ ರೀತಿಯಲ್ಲಿ ಹಗುರವಾದ ಹೇಳಿಕೆ ನೀಡಿದ ರವಿಯವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ, ಆದರೂ ಬುದ್ದಿ ಕಲಿಯದೆ ಹೀಗೆ ಮುಂದುವರಿಸಿದಲ್ಲಿ ರಾಜಕಾರಣದಿಂದ ಶಾಶ್ವತವಾಗಿ ಮೂಲೆ ಸೇರಸಲು ನಮ್ಮ ಸಮಾಜದಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಮತ್ತು ರಾಜ್ಯದಲ್ಲಿ ಎಲ್ಲಿ ಹೋದರೂ ಸಹ ಭೋವಿ ಸಮಾಜದಿಂದ ಕಪ್ಪು ಬಾವುಟ ಪ್ರದರ್ಶಿಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಭೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷ ವಿ ರಾಮಾಂಜಿನೇಯಲು, ಬಂಡಿಹಟ್ಟಿ ರಾಮಾಂಜಿನೇಯಲು, ಗೋನಾಲ್ ಹುಲುಗಪ್ಪ, ಗುಡುದೂರು ಹನುಮಂತಪ್ಪ, ಸಂಗನಕಲ್ಲು ವೆಂಕಟೇಶ್ ಮತ್ತು ಉಮೇಶ್ ಸೇರಿದಂತೆ ಹಲವಾರು ಜನ ಭೋವಿ ಸಮಾಜದ ಮುಖಂಡರಿದ್ದರು.

Leave a Reply

Your email address will not be published. Required fields are marked *

error: Content is protected !!