2c136fae-be38-4577-97e1-318669006cc9

ತಳಕಲ್ : ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 12- ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ 2024-25ನೇ ಸಾಲಿನ ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಎಲೆಕ್ಟ್ರಾನಿಕ್ ಮ್ಯಾಕನೀಕ್ (ವಿದ್ಯುನ್ಮಾನ ದುರಸ್ತಿಗಾರ) ವೃತ್ತಿಯಲ್ಲಿ 14 ಸ್ಥಾನ ಹಾಗೂ ಫಿಟ್ಟರ್ (ಜೋಡಣೆಗಾರ) 07 ಸ್ಥಾನ, ಅಡ್ವಾನ್ಸ್ ಸಿ.ಎನ್.ಸಿ ಮೆಕ್ಯಾನಿಂಗ್ ಟೇಕ್ನಿಷಿಯನ್ 12 ಸ್ಥಾನ, ಮ್ಯಾಕನೀಕ್ ಎಲೆಕ್ಟ್ರಿಕ್ ವೆಹಿಕಲ್ ವೃತ್ತಿಯಲ್ಲಿ 11 ಸ್ಥಾನಗಳು ಲಭ್ಯವಿದ್ದು, ಆಸಕ್ತ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಅರ್ಜಿಯನ್ನು ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಿದವರಿಗೆ ಪ್ರವೇಶವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ,. ತಳಕಲ್, ಮೂ.ಸಂ: 7975676394, 9902850748, 9902852362, 9538991007, 9741744109, 8217063363, 8147811887, 8951596076 ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!