2c136fae-be38-4577-97e1-318669006cc9

ತಳಕಲ್‌ ಐಟಿಐ ಸಂಸ್ಥೆ : ಆನ್‌ ಲೈನ್‌ ಅಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 23-  ತಳಕಲ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿನಲ್ಲಿ ಬಹು ಬೇಡಿಕೆ ಇರುವ ವಿವಿಧ ವೃತ್ತಿಗಳಲ್ಲಿ ಸೀಟುಗಳು ಲಭ್ಯವಿದ್ದು, ಆಸಕ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ವಿದ್ಯುತ್‌ಶಿಲ್ಪಿ, ವಿದ್ಯುನ್ಮಾನ ದುರಸ್ಥಿಗಾರ, ಜೋಡಣೆಗಾರ, ಉದ್ಯೋಗ ಯೋಜನೆ ಅಡಿಯಲ್ಲಿ ಅಡ್ವಾನ್ಸ್ ಸಿಎನ್‌ಸಿ ಮಷಿನಿಂಗ್ ಸೀಟುಗಳು ಹಾಗೂ ಪಿಪಿಪಿ ಅಡಿಯಲ್ಲಿ ಪ್ರತಿಯೊಂದು ವೃತ್ತಿಯಲ್ಲಿ 04 ಸೀಟುಗಳು ಲಭ್ಯವಿವೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಹ ಪ್ರವೇಶ ಪಡೆಯಬಹುದಾಗಿದೆ. ಆಸಕ್ತರು ಜೂನ್ 03 ರೊಳಗೆ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ತಮ್ಮ ಎಲ್ಲ ಮೂಲ ದಾಖಲೆಗಳನ್ನು ಪರಿಶೀಲಿಸಿಕೊಂಡು ಪ್ರವೇಶ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ : 7975676394, 9902840748, 9902852362, 9538991007, 9741744109, 8217063363, 8147811887, 8951596076 ಗೆ ಸಂಪರ್ಕಿಸಬಹುದು  ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಐಟಿಐ ಸಂಸ್ಥೆ : ಆನ್‌ಲೈನ್ ಅರ್ಜಿ ಆಹ್ವಾನ :  ಕುಕನೂರು ತಾಲ್ಲೂಕಿನ ಮಂಗಳೂರಿನ  ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೆರಿಟ್ ಕಂ ರಿಜರ್ವೇಶನ್ ಆಧಾರದ ಮೇಲೆ ಆಗಸ್ಟ್-2024ನೇ ಸಾಲಿನ ಐಟಿಐ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಯಲ್ಲಿ ಎಲೆಕ್ಟಿçಷಿಯನ್ ಮತ್ತು ಫಿಟ್ಟರ್ ಕೋರ್ಸ್ಗಳು ಅನುಷ್ಠಾನಗೊಂಡಿದ್ದು, ಪ್ರತಿ ಕೋರ್ಸಿನಲ್ಲಿ 16 ಸೀಟುಗಳು ಲಭ್ಯವಿರುತ್ತವೆ. 10ನೇ ತರಗತಿ ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳು ಜೂನ್ 03 ರೊಳಗಾಗಿ ಇಂಟರ್‌ನೆಟ್ ಸೆಂಟರ್‌ಗಳಲ್ಲಿ ಅಥವಾ ಖುದ್ದಾಗಿ ಸಂಸ್ಥೆಗೆ ಭೇಟಿ ನೀಡಿ ವೆಬ್‌ಸೈಟ್ :  www.cite.karnataka.gov.in     ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಸ್ಥೆಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!