IMG-20240329-WA0013

ಯಲಬುರ್ಗಾ ತಾಲೂಕ ಮಟ್ಟದ ಭೋವಿ ಸಮಾಜದ ಜನ ಜಾಗೃತಿ ಜಾಥಾ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ,29-  ಇತರೆ ಜಾತಿಯವರು ಭೋವಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ನಮ್ಮ ಸಮಾಜಕ್ಕೆ ವಂಚಿತವಾಗುತ್ತಿದ್ದು ಇತ ಕಡೇ ಸರಕಾರ ಗಮನ ಹರಿಸುತ್ತಿಲ್ಲ ಇಂದಿನ ಆಧುನಿಕ ತಂತ್ರಜ್ಞಾನ ದ ತರಬೇತಿ ಉದ್ಯೋಗ ಸೃಷ್ಠಿ ನಮ್ಮ ಸಮಾಜದ ವರಿಗೆ ಇಲ್ಲದಂತಾಗಿದೆ ಮತ್ತು ಇನ್ನಿತರ ಹಲವಾರು ಸಮಸ್ಯಗಳ ಬಗ್ಗೆ ಸರಕಾರದ ಮತ್ತು ಜನ ಪ್ರತಿನಿಧಿಗಳ ಗಮನ ಸೆಳೆಯಲು ಹಾಗೂ ಮುಂದಿನ ಹೋರಾಟ ರೂಪಿಸಲು ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಸಮಾಜದ ತಾಲೂಕು ಅಧ್ಯಕ್ಷ ದುರಗಪ್ಪ ಈರಪ್ಪ ಕರಮುಡಿ ಹೇಳಿದರು.

ಕೊಪ್ಪಳ ಜಿಲ್ಲೆಯಲ್ಲಿ ಭೋವಿ (ವಡ್ಡರ) ಸಮಾಜದ ಜನಾಂಗವು 1.80 ಲಕ್ಷಕಿಂತಲೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು ಸರಕಾರದ ಸೌಲಭ್ಯಗಳಿಂದ ವಂಚಿತಗೊಂಡಿದೆ.

ನಮ್ಮ ಮೂಲಕಸಬುಗಳು ಅನ್ಯ ಜನಾಂಗದ ಪಾಲಾಗಿವೆ ಗುಡ್ಡಗಳನ್ನು ಆಶ್ರಯಿಸಿ ಕಲ್ಲು ಬಂಡಿ ಒಡೆದು ಜೀವನ ಸಾಗಿಸುವುದು ನಮ್ಮ ಮೂಲ ಕಸಬುವಾಗಿದೆ ಇದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ ಕಲ್ಲು ಬಂಡಿ ವಡಿದು ಬದುಕುತ್ತಿದ್ದ ಜನಾಂಗಕ್ಕೆ ಗಣಿಗಾರಿಕೆಯಿಂದ ನಮ್ಮ ಕುಲ್ಕ,ಕಸುಬು ನಾಶವಾಗಿ ಅಲ್ಲಿ ಬೃಹತ ಯಂತ್ರಗಳು ಬಂದು ನಮ್ಮವರ ಬದುಕು ಬೀದಿಗೆ ಬಂದಿದೆ.

ಕಟ್ಟಡ ಹಾಗೂ ಗಣಿ ಕಾರ್ಮಿಕರನ್ನು ಸರ್ಕಾರ ಗುರುತಿಸದೆ ಕಾರ್ಮಿಕರಲ್ಲದವರು ಸಹ ಲಾಭ ಪಡೆಯುತ್ತಿದ್ದಾರೆ ಜನಾಂಗದ ಪ್ರಗತಿ ಕೇವಲ ಕಾಗದದಲ್ಲಿ ಮಾತ್ರ ಕಂಡುಬರುತ್ತದೆ.

ಯಲಬುರ್ಗಾ ತಾಲೂಕಿನ ಭೋವಿ ಸಮಾಜವನ್ನು ಒಟ್ಟುಗೂಡಿಸಿ ಎಲ್ಲರೂ ಸಮಾಜದ ಸಂಘಟಿಸುವ ಸಲುವಾಗಿ ಕಂಕಣ ಬದ್ದರಾಗಬೇಕು ಈ ಜಾಗೃತಿ ಜಾಥಾ ಕಾರ್ಯಕ್ರಮವು ಈ ಕೆಳಗಿನ ಗ್ರಾಮಗಳಲ್ಲಿ ಸಂಘಟನೆ ಸಭೆಗಳನ್ನು ನಡೆಸುವದು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಎಲ್ಲಾ ಭೋವಿ ಸಮಾಜದ ಬಂಧುಗಳು ಹಾಜರಿದ್ದು ಒಗ್ಗಟ್ಟುನ್ನು ಪ್ರದರ್ಶಿಸಿ ನಮ್ಮ ಸಂಘಟನೆಯನ್ನು ಬಲಪಡಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ಈ ಸಭೆಯ ಜಾಥಾ ಗಜೇಂದ್ರಗಡ ಪಟ್ಟಣದ ಶ್ರೀದುಗಾ೯ದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ನಂತರ ಹಿರೇಮ್ಯಾಗೇರಿ, ಕರಮುಡಿ, ತೂಂಡಿಹಾಳ, ಬಂಡಿಹಾಳ, ಮುಧೋಳ, ಚಿಕ್ಕೋಪ, ಬಳೂಟಗಿ, ಕುದುರಿಕೋಟಗಿ, ವಜ್ರಬಂಡಿ, ಮಾರನಾಳ, ಮಲಕಸಮುದ್ರ, ವಣಗೇರಿ ಮತ್ತು ಇತರ ಗ್ರಾಮಗಳಲ್ಲಿ ಭೋವಿ ಜನಜಾಗೃತಿ ಕಾರ್ಯಕ್ರಮ ನಡೆಯುತ್ತವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!