WhatsApp Image 2024-06-17 at 4.09.05 PM

ದುಷ್ಟ ಶಕ್ತಿಗಳಿಂದ ರಕ್ಷಿಸಿಕೊಳ್ಳಲು, ಅಪರಾಧ ತಡೆಗಟ್ಟಲು ಕರಾಟೆ ಅತ್ಯವಶ್ಯಕ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 17- ದುಷ್ಟ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಹಾಗೂ ಪ್ರತಿ ದಿನ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಕರಾಟೆ ಹಾಗೂ ಸ್ಕಾಯ್ ಮಾರ್ಷಲ್ ನಂತಹ ಆತ್ಮ ರಕ್ಷಣಾ ಕಲೆಗಳು ಬಹಳ ಮುಖ್ಯ ಎಂದು ಬರಹಗಾರ ಕುಬೇರ ಮಜ್ಜಿಗಿ ಹೇಳಿದರು.

ಬ್ರೂಸ್ ಲೀ ಕರಾಟೆ ಅಕಾಡೆಮಿ ಕೊಪ್ಪಳ ಹಾಗೂ ಸ್ಕಾಯ್ ಮಾರ್ಷಲ್ ಆರ್ಟ್ಸ್ ಸಂಯುಕ್ತಾಶ್ರಯದಲ್ಲಿ ಹಲಗೇರಿಯ ಶ್ರೀ ರಾಜರಾಜೇಶ್ವರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿ ದಿನ ಬೆಳಗಾದರೆ ಬರೀ ಅಪರಾಧ ಸುದ್ದಿಗಳನ್ನೇ ಕೇಳುತ್ತೇವೆ. ಇತ್ತೀಚಿನ ದಿನಗಳಲ್ಲಿ ದುಷ್ಟ ಶಕ್ತಿಗಳ ಅಟ್ಟಹಾಸ ಮಿತಿ ಮೀರಿದೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರು ಇದರಿಂದ ಪಾರಾಗಬೇಕಾದರೆ ಕರಾಟೆಯಂತಹ  ಆತ್ಮ ರಕ್ಷಣಾ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು ಎಂದರು.

ಸ್ಕಾಯ್ ಮಾರ್ಷಲ್ ಆರ್ಟ್ಸ್ ತರಬೇತುದಾರ ಮಂಜುನಾಥ ಭಜಂತ್ರಿ ಮಾತನಾಡಿ ಕರಾಟೆ ಮಹತ್ವ ವಿವರಿಸಿದರು.

ಶಾಲೆಯ ಸಂಸ್ಥಾಪಕ ವೀರಣ್ಣ ಕಂಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೊಲೀಸ್ ಇಲಾಖೆಯ ಶಿವಾನಂದ ಪ್ಯಾಟಿ, ಈಶ್ವರ ಶಾಲೆಯ ಸಂಸ್ಥಾಪಕ ನಾಗರಾಜ ಗುಡಿ, ಕರಾಟೆ ತರಬೇತುದಾರರಾದ ಮಹಾಂತೇಶ ಮಂಗಳೂರು, ರಾಮು ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!