fd42a2d4-8aa0-40eb-b8c3-e4999ef1a152

ದೇಶಕ್ಕೆ ಶರಣರು ವಚನ ಸಾಹಿತ್ಯವನ್ನು ಕೊಡುಗೆ ಅಪಾರ

ನಿವೃತ ಪಿಎಸ್ಐ ಬಸವನಗೌಡ ಪಾಟೀಲ್ ಅಭಿಮತ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 2 – ನಮ್ಮ ದೇಶಕ್ಕೆ ಶರಣರು. ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ ಮತ್ತು ಪುರುಷರು ಮತ್ತು ಮಹಿಳೆಯರು ಸಮಾನರು ನಮ್ಮ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಗೌರವವಿದೆ ಎಂದು ನಿವೃತ್ತ ಪಿಎಸ್ಐ ಬಸನಗೌಡ ಪಾಟೀಲ ಹೇಳಿದರು
ತಾಲೂಕಿನ ವನಜಭಾವಿ ಗ್ರಾಮದಲ್ಲಿ 87 ನೇ ಮಾಸಿಕ ಬಸವಾನುಭವ ಮತ್ತು ಶರಣ ಹನಮಂತಪ್ಪ ಗೂರಪ್ಪ ಮೇಟಿ ರವರ ಮೊಮ್ಮಗಳ ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರಾಸ್ತಾವಿಕವಾಗಿ ಬಸವರಾಜ ಹೂಗಾರ ಮಾತನಾಡಿ, ಇಂದಿನ ದಿನಮಾನದ ಗ್ರಾಮೀಣ ಮಟ್ಟದಲ್ಲಿ ವಿಜ್ಞಾನಕ್ಕೆ ಹತ್ತಿರವಿಲ್ಲದ ಅವೈಜ್ಞಾನಿಕವಾದ ಮೂಢನಂಬಿಕಗಳ ಮೌಢ್ಯಾಚರಣೆಗಳು ಹೆಚ್ಚುತಲಿವೆ ವಚನ ಸಾಹಿತ್ಯದ ಸಾರ ಅರಿಯದೇ ಇರುವುದರಿಂದ. ಅದಕ್ಕಾಗಿ ಕುಮಾರಿ ರಕ್ಷಿತಾ ಎಂಬ ಕುವರಿಯು ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ನೆಪಮಾಡಿಕೊಂಡು, ನಿಜವಾದ ಆಚರಣೆಗಳನ್ನೊಳಗೊಂಡ ಗುರು ಬಸವಣ್ಣನವರ ವಚನ ಸಾಹಿತ್ಯ ಬಿತ್ತರಿಸುವ ಕಾರ್ಯವೆ ವೃತುಮತಿಯಾದ ಕುವರಿಯ ಪುಷ್ಪವೃಷ್ಟಿ ಕಾರ್ಯಕ್ರಮ.

ಸಹಜವಾಗಿ ವಯೋಮಾನದ ಹಂತದಲ್ಲಿ ಮುಟ್ಟಾಗುವದು ಸಹಜವಾದ ಕ್ರೀಯೆ. ಅದನ್ನೇ ನಾವು ನಮ್ಮ ಮನೆಯಲ್ಲಿ ಮುಟ್ಟಾದ ಮಕ್ಕಳ ಮಟ್ಟದೆ ಒಂದು ಮೂಲೆಯಲ್ಲಿ ಕುಳ್ಳಿರಿಸಿ, ಅವರನ್ನ ಹೀನಸ್ಥಿತಿಯಲ್ಲಿ ಕಾಣುವುದ ಮಾನವೀಯ ಸಂಸ್ಕೃತಿ ಅಲ್ಲ. ಸರ್ವಜ್ಞ ಕವಿ ಹೇಳುವಂತೆ ಮುಟ್ಟಾದ ಮೂರು ದಿನಕೆ ಗಟ್ಟಿಗೊಂಡಿಹುದು ಈ ಜೀವ, ಅದೇಗೆ ಮೈಲಿಗೆ ಆಗಲು ಸಾದ್ಯ? ಎಂಬ ಪ್ರಶ್ನೆ ಮಾಡುವುದರ ಜೊತೆಗೆ, ಉತ್ತರವಾಗಿ ಸುಸಂಸ್ಕೃತಿಯ ಸಾಹಿತ್ಯ ಹೊಂದಿರುವ ಈ ನಾಡಿಗೆ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ, ಅದಕ್ಕಾಗಿ ನಾವು ಶರಣರ ಸಂತರ ಸಂಸ್ಕಾರಗಳನ್ನ ಅರಿತು ನಮ್ಮ ಮನೆಯಲ್ಲಿ ಬರುವ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದಾಗ ಮಾತ್ರ ಮೌಢ್ಯತೆಯಿಂದ ಹೊರ ಬರುಲು ಸಾದ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ ಪಿಎಸ್ಐ ಶರಣ ಬಸವನಗೌಡ ಪೋಲಿಸ್ ಪಾಟೀಲ್ ಮಾತನಾಡಿ, ಮುಟ್ಟಾದ ಹೊಲೆಯೊಳಗೆ ಹುಟ್ಟಿಹದು ಜಗವೆಲ್ಲ. ಎನ್ನುವ ಮೂಲಕ ಬಸವಾದಿ ಶಿವಶರಣರು, ಮಡಿ, ಮೈಲಿಗೆ, ಕಂದಾಚಾರ, ಮೂಢನಂಬಿಕೆಗಳನ್ನು ದಿಕ್ಕರಿಸಿದ್ದಾರೆ. ನಾರಿ ಪರೋಪಕಾರಿ, ನಾರಿ ಸ್ವರ್ಗಕ್ಕೆ ದಾರಿ, ನಾರಿ ಸಕಲರಿಗೆ ಹಿತಕಾರಿ, ಮುನಿದರೆ ನಾರಿಯೆ ಮಾರಿ ಎನ್ನುವ ನುಡಿಗಳನ್ನ ಕವಿ ಕಾದಂಬರಿಗಳಲ್ಲಿ ನಾವು ಕಾಣಬಹುದು. ಗುರು ಬಸವಣ್ಣನವರು, 12 ನೇ ಶತಮಾನದಲ್ಲಿ, ತಾನು ಎಂಟು ವರ್ಷದಲ್ಲಿದ್ದಾಗ ತನ್ನ ಅಕ್ಕನಾದ ಅಕ್ಕನಾಗಲಾಂಬಿಕೆ ಮುಟ್ಟಾದಾಗ, ಅವರ ತಂದೆ ತಾಯಿಗಳು ಹೊರಗಿಟ್ಟು, ಊಟೋಪಚಾರ ನೀಡುವುದನ್ನು ಕಂಡ ಬಸವಣ್ಣ, ಶೋಷಣೆಗೊಳಗಾದ ತನ್ನ ಅಕ್ಕನ ಕುರಿತಾಗಿ ತನ್ನ ತಂದೆಯವರಿಗೆ ಪ್ರಶ್ನಿಸಿ, ಪುರುಷರಷ್ಟೆ ಸ್ತ್ರೀಯರಿಗೂ ಕೂಡ ಸಮಾನತೆ ಕಾಣಬೇಕು ಎಂಬ ಮಾತಿಗೆ ಒಪ್ಪದ ತಂದೆ ತಾಯಿಗಳನ್ನು ಧಿಕ್ಕರಿಸಿ, ಬಸವನ ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಬಂದು ಮುಟ್ಟು, ಮೈಲಿಗೆ ಎಂಬ ಕಳಂಕಕ್ಕೆ ತಿಲಾಂಜಲಿ ನೀಡಿ, ಪುರುಷರಷ್ಟೇ ಸ್ತ್ರೀಯರಿಗೆ ಕೂಡ ಸಮಾನತೆ ಇದೆ ಎಂಬುದನ್ನು ಮೊಟ್ಟೆ ಮೊದಲು ಜನ ಮನ ಮನಗಳಿಗೆ ತಿಳಿಸಿಕೊಟ್ಟವರು ವಿಶ್ವಗುರು ಬಸವಣ್ಣನವರು ಎಂದು ನುಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶರಣ ಶಿವನಾಗಯ್ಯ ಶಾಸ್ತ್ರಿಗಳು ನಿಲೋಗಲ್ ಮಾತನಾಡಿ, ಇಂದಿನ ದಿನಮಾನದಲ್ಲಿ ಯಾರು ಅಂಗದ ಮೇಲೆ ಲಿಂಗ ಧರಿಸಿ, ಬಸವ ನಾಮಸ್ಮರಣೆ ಮಾಡುತಿರುತ್ತಾರೋ ಅಂಥವರಿಗೆ ಯಾವುದೆ ಮುಟ್ಟು ಮೈಲಿಗೆ ಇರುವುದಿಲ್ಲಾ. ಅಸ್ಪೃಶ್ಯತೆ ನಿವಾರಣೆ, ಸ್ತ್ರೀ ಸಮಾನತೆ, ಅಹಿಂಸೆ, ಸ್ವಾತಂತ್ರ್ಯ, ಶಾಂತಿ, ಪ್ರಜಾಪ್ರಭುತ್ವ ಸೇರಿದಂತೆ ಎಲ್ಲ ಪ್ರಗತಿ ಪರ ತತ್ತ್ವಗಳನ್ನು ಜಾರಿಗೆ ತರಲು ಈ ಆಧುನಿಕ ಕಾಲದಲ್ಲೂ ಕಷ್ಟ ಸಾಧ್ಯ. ಆದರೆ, 12ನೇ ಶತಮಾನದಲ್ಲೇ ಅವುಗಳನ್ನು ಅಕ್ಷರಶಃ ಜಾರಿಗೆ ತರಲು ವಿಶ್ವಗುರು ಬಸವಣ್ಣನವರು ಪ್ರಯತ್ನಿಸಿದರು. ಸಮಾನತೆಯ ಸಮಾಜ ಕಟ್ಟಲು ಪಣತೊಟ್ಟವರು ಅವರು. ಇಂದಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಾ ಮಾನವತಾವಾದಿಯ ವಿಚಾರ ಬಿತ್ತರಿಸುವದರ ಮೂಲಕ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯವಾದದ್ದು ಎಂದರು. ಶಿವಾನಂದ ಸ್ವಾಮಿಗಳು ಶಿವಾನಂದ ಮಠ
ಮಕ್ಕಳ್ಳಿ ಅವರು ಆಶಿ೯ವಚನ ನೀಡಿದರು,

ಈ ಕಾರ್ಯಕ್ರಮದಲ್ಲಿ ಅಮರೇಶಪ್ಪ ಗಡಿಹಳ್ಳಿ , ಬಸವರಾಜಪ್ಪ ಇಂಗಳದಾಳ, ಅಮರೇಶಪ್ಪ ಬಳ್ಳಾರಿ. ಕಾರ್ಯಕ್ರಮದಲ್ಲಿ ಶರಣ ಶಿವಬಸಯ್ಯ ಹಿರೇಮಠ , ಕಳಕಪ್ಪ ವಿವೇಕಿ, ಪರಪ್ಪ ಗೊಂದಿ, ರೇಣುಕಪ್ಪ ಮಂತ್ರಿ ಅಧ್ಯಕ್ಷರು, ನಾಗನಗೌಡ ಜಾಲಿಹಾಳ, ಅಮರಪ್ಪ ಅಳ್ಳಳ್ಳಿ ದೇವಪ್ಪ ಕೋಳೂರು, ಗಿರಿಮಲ್ಲಪ್ಪ ಪರಂಗಿ, ವಿರುಪಣ್ಣ ಮೇಟಿ, ಚಿದಾನಂದಪ್ಪ ಗೊಂದಿ, ವೀರನಗೌಡ ಪಾಟೀಲ್, ನಿಂಗಪ್ಪ ಪರಂಗಿ, ಯಲ್ಲಪ್ಪ ಆಡಿನ್, ಶೇಖಪ್ಪ ನಿಡಶೇಸಿ, ಶರಣಪ್ಪ ಗೊಂದಿ, ಜಗದೀಶ ಗೌಡರ, ಓಂಕಾರಪ್ಪ ಮೇಟಿ ಅಕ್ಕನಾಗಲಾಂಬಿಕೆ ಮಹಿಳಾ ಗಣದ ಶರಣೆ ಯಮನಮ್ಮ ಗೌಡ್ರ, ಬಸಮ್ಮ ಹನಮಂತಪ್ಪ ಮೇಟಿ, ನಾಗಮ್ಮ ಜಾಲಿಹಾಳ, ಮಲ್ಲಮ್ಮ ಮಂತ್ರಿ, ಯಮನಮ್ಮ ಮೇಟಿ ಮತ್ತು ಹಲವಾರು ಗ್ರಾಮಗಳಾದ ಗುಳೆ, ಮರಕಟ್ಟ ಚವಡಾಪುರ ತಾಳಕೇರಿ, ಯಡ್ಡೋಣಿ, ಟಣಕನಕಲ್, ತರಲಕಟ್ಟಿ ಕಲಭಾವಿ, ಮಾಟಲದಿನ್ನಿ ಗ್ರಾಮಗಳ ಗ್ರಾಮಸ್ಥರು ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!