ದೇಶದನ ಸರ್ವೋತುಮುಖ ಅಭಿವೃದ್ದಿ ಕಾಂಗ್ರೆಸನಿಂದ ಸಾಧ್ಯ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 26- ದೇಶದ-ಸರ್ವೋತುಮುಖ ಅಭಿವೃದ್ದಿ ಕಾಂಗ್ರೇಸ ಪಕ್ಷದಿಂದ ಮಾತ್ರ ಸಾಧ್ಯ ಎಂದು ವಿಧಾನಪರಿಷತ ಸದಸ್ಯ ಕಾಂಗ್ರೇಸ ಮುಖಂಡ ಹೆಚ್.ಆರ್.ಶ್ರೀನಾಥ ಹೇಳಿದರು.
ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಸಿಪಿಐ(ಎಂ) ಪಕ್ಷದ ರಾಜಕೀಯ ಸಮಾವೇಶದಲ್ಲಿ ಮಾತನಾಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೇಸ ಪಕ್ಷದ ನಿಯೋಜಿತ ಅಭ್ಯರ್ಥಿ -ರಾಜಶೇಖರ ಹಿಟ್ನಾಳ ಗೆಲುವು ಖಚಿತವಾಗಿದೆ.
ಜಾತ್ಯಾತೀತ ನಿಲುವು ಹೊಂದಿರುವ ಸಿಪಿಐ(ಎಂ) ಪಕ್ಷ ದೇಶದ ಹಿತ ದೃಷ್ಟಿಯಿಂದ ಕಾಂಗ್ರೇಸ ಪಕ್ಷಕ್ಕೆ ಬೆಂಬಲಿಸುತ್ತಿರುವುದು ಔಚಿತ್ಯ ಪೂರ್ಣವಾಗಿದೆ ಎಂದರು.
ಸಿಪಿಐ(ಎಂ) ಪಕ್ಷದ ರಾಜ್ಯ ಸದಸ್ಯೆ ಮತ್ತು ಅಂಗನವಾಡಿ ಕಾರ್ಯಕರ್ತೇಯರ ಸಂಘದ ಎಸ್,ವರಲಕ್ಷ್ಮೀ ಮಾತನಾಡಿ ದೇಶದಲ್ಲಿ ಮಾತ್ರ ಸಿದ್ದಾಂತದ ತಳಹದಿಯ ಮೇಲೆ ಸಿಪಿಐ(ಎಂ) ಪಕ್ಷ ನಿರಂತರ ಹೋರಾಟ ನಡೆಸುತ್ತಿದೆ.
ಕೇಂದ್ರ ಸರ್ಕಾರ ಶ್ರೀಮಂತರ,ದಲ್ಲಾಳಿಗಳ ಕೈಗೊಂಬೆ ಯಾಗಿ ಕೇವಲ ಅದಾನಿ,ಅಂಬಾನಿಯವರು ಹೇಳಿದಂತೆ ಕುಣಿಯುತ್ತಿದೆ.
ಕಾರ್ಮಿಕರ ಬಡವರ,ಹಿತ ರಕ್ಷಣೆ ಕಾಯುವಲ್ಲಿ ವಿಫಲವಾಗಿದೆ.
ಕಾಂಗ್ರೇಸ ಪಕ್ಷದ ಇಂಡಿಯಾ ಒಕ್ಕೂಟ ಸೇರಿದ್ದಕ್ಕೆ ಕಾಂಗ್ರೇಸ ಪಕ್ಷವನ್ನು ಬೆಂಬಲಿಸುತ್ತಿದ್ದವೆ. ಕೇಂದ್ರದಲ್ಲಿ ಕಾಂಗ್ರೇಸ ಪಕ್ಷ ಅಧಿಕಾರಕ್ಕೆ ಬಂದರೆ ಅವರ ಕೆಲವೋಂದು ಮಾರ್ಪಾಡು ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ನಿರುಪಾದಿ ಬೆಣಕಲ್, ಎಂ ಬಸವರಾಜ, ಹುಸೇನಪ್ಪ ,ಮಂಜುನಾಥ, ಗಂಗಾಧರಸ್ವಾಮಿ, ಗ್ಯಾನೇಶ ಕಡಗದ, ಸುಂಕಪ್ಪ, ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.
