IMG-20240329-WA0011

ದೇಶದಲ್ಲಿ ಎಲ್ಲಾ ಮಹಿಳೆಯರು ಶಿಕ್ಷಣವಂತರಾಗಬೇಕು ದೇಶದ ಪ್ರಗತಿಗೆ ಶಿಕ್ಷಣ ಬಹಳ ಮುಖ್ಯ : ಶರಣಮ್ಮ

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ,29- ದೇಶದಲ್ಲಿ ಮಹಿಳೆಯ ಅನಕ್ಷರತೆ ಹೋಗಲಾಡಿಸಲು ಸಾಕಷ್ಟು ಸರಕಾರ ಮತ್ತು ಸಂಘ ಸಂಸ್ಥೆಗಳು ಜನ ಜಾಗೃತಿ ಮೂಡಿಸಿವೆ ಅದಕ್ಕೋಸ್ಕರ ಎಲ್ಲರೂ ಶಿಕ್ಷಣವಂತರಾಗಬೇಕು ಎಂದು ಪ್ರಥಮ ಸಂಸ್ಥೆಯ ಸಿಬ್ಬಂದಿ ಶರಣಮ್ಮ ಹೇಳಿದರು.

ದೇಶದ ಪ್ರಗತಿಗೆ ಶಿಕ್ಷಣ ಬಹಳ ಪ್ರಮುಖವಾಗಿದ್ದು ಪ್ರಥಮ ಸಂಸ್ಥೆ ಹಾಗೂ ಬಾನಾಪುರ್ ಗೊಂಬೆ ತಯಾರಿಕಾ ಕಂಪನಿ ಜೊತೆಗೂಡಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರ ತಾಲೂಕಿನ ಸುಮಾರು 85 ಮಕ್ಕಳಿಗೆ ಹಾಗೂ ವಯಸ್ಕರಿಗೆ ಉಚಿತ ಶಿಕ್ಷಣ ನೀಡಿ ನೇರವಾಗಿ 10ನೇ ತರಗತಿ ಪರೀಕ್ಷೆ ಬರೆಯುವುದಕ್ಕೆ ಪ್ರಥಮ ಸಂಸ್ಥೆ ಮುಂದಾಗಿದೆ ಎಂದು ಪ್ರಥಮ ಸಂಸ್ಥೆಯ ಸಿಬ್ಬಂದಿ ಶರಣಮ್ಮ ಹೇಳಿದರು.

ಕುಕನೂರು ಪಟ್ಟಣದ ಹತ್ತನೇ ತರಗತಿ ಪರೀಕ್ಷಾ ಕೇಂದ್ರದ ಮುಂದೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಿಶೇಷವಾಗಿ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಭಾಗ್ಯ ನೀಡುವ ಹಿನ್ನೆಲೆಯಲ್ಲಿ ನಮ್ಮ ಪ್ರಥಮ ಸಂಸ್ಥೆ ಮೂಲಕ ಅಕ್ಷರ ಜ್ಞಾನದ ಭಾಗ್ಯವನ್ನು ನೀಡಲಾಗುತ್ತಿದ್ದು ಮಹಿಳೆಯರು ಶಿಕ್ಷಣ ಪಡೆದುಕೊಳ್ಳುವುದಕ್ಕೆ ಮುಂದೆ ಬರಬೇಕು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಅಕ್ಷರ ಕಲಿಕೆಯ ಅಭ್ಯಾಸಕ್ಕೆ ಹಿನ್ನಡೆ ಉಂಟಾಗುತ್ತಿದೆ ಮಹಿಳೆಯರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆಗೆ ಅಕ್ಷರವನ್ನು ಕಲಿಸಿ ಅವಳನ್ನು ಸಮಾಜದಲ್ಲಿ ಶಕ್ತಿಯನ್ನಾಗಿ ರೂಪಿಸಲು ನಮ್ಮ ಪ್ರಥಮ ಸಂಸ್ಥೆ ಮುಂದೆ ಬಂದಿದೆ.

ಸಮಾಜದಲ್ಲಿ ಮಹಿಳೆಯರು ಅಕ್ಷರವಂತರಾದಲ್ಲಿ ಮಾತ್ರ ಸಮಾಜದಲ್ಲಿ ಉತ್ತಮ ಗೌರವವನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ ಅಕ್ಷರ ಕಲಿತ ಮಹಿಳೆ ಮಾತ್ರ ಎಲ್ಲಾ ರಂಗದಲ್ಲಿ ಅಧಿಕಾರ ನಡೆಯುವ ಸಾಮಥ್ರ್ಯವನ್ನು ಪಡೆಯುತ್ತಾಳೆ ಎಂದರು.

ಈ ಸಂದರ್ಭದಲ್ಲಿ ಸುಮಾರು 85 ಮಕ್ಕಳು ಹಾಗೂ ವಯಸ್ಕರು ಪರೀಕ್ಷೆ ಬರೆಯಲು ಪರೀಕ್ಷೆ ಕೇಂದ್ರದ ಮುಂದೆ ಇದ್ದರು.

Leave a Reply

Your email address will not be published. Required fields are marked *

error: Content is protected !!