ದೇಶನೂರು : ಕಾಲುವೆಯಲ್ಲಿ ಭಾರಿ ಗಾತ್ರದ ಮೊಸಳೆ ಪ್ರತ್ಯಕ್ಷ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 12- ತಾಲೂಕು ದೇಶನೂರು ಗ್ರಾಮದ ಕಾಲುವೆಯಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಬಂದು ಸೇರಿಕೊಂಡಿತ್ತು ಇದನ್ನು ಕಂಡ ಗ್ರಾಮದ ಜನತೆ ಭಯ ಭೀತ ಗೊಂಡು ಅರಣ್ಯ ಅಧಿಕಾರಿ ಗಿರೀಶ್ ಅವರಿಗೆ ತಿಳಿಸಿದರು.
ರಾಜ್ಯದಲ್ಲಿ ಅನೇಕ ಉತ್ತಮ ಮಳೆ ಯಾಗುತ್ತಿದ್ದು ಮಳೆ ಇಲ್ಲದಿದ್ದಾಗ ನದಿ ಮತ್ತು ನದಿ ಪಾತ್ರಗಳಲ್ಲಿ ನೀರಿನ ಮಡಗುಗಳು ನಿರ್ಮಾಣ ಗಳಲ್ಲಿ ಮೊಸಳೆ ಹಾವು ಮತ್ತು ಇನ್ನಿತರ ಜಲ ಚರಗಳು ಸೇರಿಕೊಂಡಿದ್ದವು ಇದೀಗ ನದಿಗೆ ನೀರು ಹರಿದು ಬರುತ್ತಿರುವುದರಿಂದ ಮಡಗು ಮತ್ತು ಅನೇಕ ಕಡೆ ಸೇರಿಕೊಂಡ ಹಾವು ಮೊಸಳೆಗಳು ಹೊರ ಬರುತ್ತಿವೆ ಅರಣ್ಯ ಅಧಿಕಾರಿ ಗಿರೀಶ್ ಅವರು ತಕ್ಷಣ ಕಾರ್ಯ ಪರ್ವತರಾಗಿ ಹಳೆಕೋಟೆ ವೇಷಗಾರ ಮಲ್ಲಯ್ಯನಿಗೆ ಕರೆಯ ಮೂಲಕ ಮಾಹಿತಿ ನೀಡಿದ ತಕ್ಷಣ ಕೂಡಲೇ ಎಲ್ಲರೂ ಅಲ್ಲಿಗೆ ಆಗಮಿಸಿ ಕಾರ್ಯಾಚರಣೆ ನಡೆಸಿ ಹರ ಸಾಹಸದಿಂದ ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಹಳೆಕೋಟಿ ವೇಷಗಾರ ಮಲ್ಲಯ್ಯ ತನ್ನ ಚಾಣಾಕ್ಷ್ಣತನದಿಂದ ಬರಿ ಗೈಯಿಂದಲೇ ಮೊಸಳೆ ಹಿಡಿದು ಗುರುವಾರ ತುಂಗಭದ್ರಾ ನದಿಗೆ ಬಿಡುವ ಮೂಲಕ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ ವೇಷಗಾರ ಮಲ್ಲಯ್ಯನವರು ಇದಕ್ಕೆ ಮುಂಚೆ 118 ಮೊಸಳೆಗಳನ್ನು ಹಿಡಿದು ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ ಇವರ ಕಾರ್ಯ ಮೆಚ್ಚುಗೆ ವ್ಯಕ್ತವಾಯಿತು.
