
ನವ ವೃಂದಾವನ ಗಡ್ಡೆಯಲ್ಲಿ ಸುದೀಂದ್ರತೀರ್ಥರ ಆರಾಧನೆ
ಸುಬುಧೇಂದ್ರತೀರ್ಥ ಶ್ರೀಗಳಿಂದ ಮಧ್ಯಾರಾಧನೆ ಪೂಜೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,27- ತಾಲೂಕಿನ ಐತಿಹಾಸಿಕ ನವವೃಂದಾವನಗಡ್ಡೆಯಲ್ಲಿ ಶ್ರೀ ಸುದೀಂದ್ರತೀರ್ಥ ಯತಿಗಳ ಮಧ್ಯಾರಾಧನೆ ನಡೆಯಿತು. ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧೀಶರಾದ ಶ್ರೀ ಸುಬುದೇಂದ್ರತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಮಧ್ಯಾರಾಧನೆ ವಿಶೇಷ ಪೂಜೆ ಜರುಗಿತು.
ನವವೃಂದಾವನಗಡ್ಡೆಯಲ್ಲಿನ ಶ್ರೀ ಸುದೀಂಧ್ರತೀರ್ಥ ಯತಿಗಳು ಸೇರಿ ಒಂಬತ್ತು ಯತಿಗಳ ವೃಂದಾನಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮತ್ತು ಮಹಾಮಂಗಳಾರತಿ ನಡೆಸಿದರು.
ನಂತರ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆಯನ್ನು ಶ್ರೀಗಳು ನೇರವೇರಿಸಿ ಆರಾಧನೆಗೆ ಬಂದ ಭಕ್ತರಿಗೆ ಅನುಗ್ರಹಿಸಿದರು.
ದೇಶಕ್ಕೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರನ್ನು ತಮ್ಮ ಶಿಷ್ಯರನ್ನಾಗಿ ನೀಡಿರುವ ಶ್ರೀ ಸುದೀಂದ್ರತೀರ್ಥರು ಅನೇಕ ಗ್ರಂಥಗಳನ್ನು ರಚಿಸಿ ನವವೃಂದಾವನದಲ್ಲಿ ವೃಂದಾವನಸ್ಥರಾಗಿ ಸಕಲ ಭಕ್ತರಿಗೆ ಅನುಗ್ರಹಿಸುತ್ತಿದ್ದಾರೆ. ಇಂದು ಅವರ ಮಧ್ಯರಾಧನೆ ಅತ್ಯಂತ ಶ್ರದ್ದೇಯಿಂದ ನಡೆಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ನಂತರ ಸುಬುದೇಂದ್ರ ಶ್ರೀಗಳು ಭಕ್ತರಿಗೆ ತಪ್ತ ಮುದ್ರಧಾರಣೆ ಮಾಡಿದರು.
ಆರಾಧನೆ ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಪಂಡಿತರಾದ ದ್ವರಕನಾಥ ಆಚಾರ, ನರಹರಿ ಆಚಾರ, ಕಂಬಾಲೂರ ಆಚಾರ, ಆನೆಗೊಂದಿ ಶ್ರೀರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಮಠದ ವಿಚಾರಣಕರ್ತ ಡಾ. ಮಧಸೂಧನ, ಗಂಗಾವತಿ ಮಠದ ವ್ಯವಸ್ಥಾಪಕ ಸಾಮವೇಧ ಗುರುರಾಜಾಚಾರ, ಪ್ರಮುಖರಾದ ಗೋಪಾಲರಾವ್ ಹೇರೂರು, ನವಲಿ ಪ್ರಹ್ಲಾದರಾವ್ ಹೇರೂರು, ಉದಯ ಜಹಗೀರದಾರ, ಯರಡೋಣಿ ರಾಮಕೃಷ್ಣ, ಶ್ಯಾಮಾಚಾರ ರಾಯಸ್ತ, ನವಲಿ ಸುದೀಂದ್ರ, ವಿಜಯ ಹೇರೂರು ಸೇರಿದಂತೆ ವಿವಿಧ ಭಕ್ತರು ಇದ್ದರು.