ನಾಡಂಗ ಕೃಷಿ ಭಾಗ್ಯ ಯೋಜನೆಯ ಕೃಷಿಹೊಂಡ ನಿರ್ಮಾಣದ ಕಾರ್ಯಕ್ರಮ ಚಾಲನೆ ಫಲಾನುಭವಿಗಳಿಗೆ ಆದೇಶ ಪತ್ರ ಜನಪ್ರಿಯ ಶಾಸಕ ಬಿ. ಎಂ . ನಾಗರಾಜ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,10- ತಾಲೂಕು ಬಿ .ಎಂ . ಸೂಗೂರು ಗ್ರಾಮ ಪಂಚಾಯತ್ ನಾಡಂಗ ಗ್ರಾಮದಲ್ಲಿ ಕೃಷಿ ಇಲಾಖೆಯ 2023-24 ನೇ ಸಾಲಿನ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡವನ್ನು ಫಲಾನುಭವಿಗಳಾದ ನಾಡಂಗ ಮಲ್ಲಿಕಾರ್ಜುನ ತಂದೆ ಶಂಕ್ರಪ್ಪ ಅವರಿಗೆ ಆದೇಶ ಪತ್ರವನ್ನು ನೀಡಿ ಜೆಸಿಬಿ ಯಂತ್ರದ ಆಪರೇಟ್ ಮಾಡುವ ಮೂಲಕ ಜನಪರ ಜನಪ್ರಿಯ ಶಾಸಕ ಬಿ ಎಂ ನಾಗರಾಜ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಎನ್ ಕರಿಬಸಪ್ಪ ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಹನಿಫಾ ಮೌಲಾಲಿ ಉಪಾಧ್ಯಕ್ಷೇ ನಿರ್ಮಲ ಹನುಮೇಶ್ ಮುಖಂಡರಾದ ಮಾರುತಿ ವರಪ್ರಸಾದ ರೆಡ್ಡಿ ಶಂಕ್ರಪ್ಪ ಮಲ್ಲಯ್ಯ ಸಿರುಗುಪ್ಪ ನಗರ ಸಭಾ ಸದಸ್ಯರಾದ ಹೆಚ್ ಗಣೇಶ್ ಉಮೇಶ್ ಗೌಡ ಕೃಷಿ ಇಲಾಖೆಯ ಅಧಿಕಾರಿ ಗರ್ಜಪ್ಪ ಕೃಷಿ ಇಲಾಖೆ ಸಿಬ್ಬಂದಿ ವರ್ಗದವರು ನಾಡಂಗ ಗ್ರಾಮದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು
