IMG-20240329-WA0016

ನೀರಿನ ಅಭಾವ 8 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ : ಪೌರಾಯುಕ್ತ ಎಚ್.ಎನ್ ಗುರುಪ್ರಸಾದ್

ಕರುನಾಡ ಬೆಳಗು ಸುದ್ದಿ 

ಸಿರುಗುಪ್ಪ,29- ನಗರದಲ್ಲಿ ಕುಡಿಯುವ ನೀರನ್ನು 8 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುವುದು ಎಂದು ನಗರಸಭಾ ಪೌರಯುಕ್ತ ಹೆಚ್ ಏನ್ ಗುರುಪ್ರಸಾದ್ ಅವರು ತಿಳಿಸಿದ್ದಾರೆ ಸಮರ್ಪಕವಾಗಿ ಮಳೆಯಾಗದೆ ಬರಗಾಲ ಉದ್ಭವಿ ಸಿರುವುದರಿಂದ ತುಂಗಭದ್ರ ನದಿಯಲ್ಲಿ ನೀರು ಬತ್ತಿ ಹೋಗಿರುತ್ತದೆ.

ನಗರದ ಬಳ್ಳಾರಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಕೆರೆಯಲ್ಲಿಯೂ ನೀರಿನ ಸಂಗ್ರಹಣೆ ಕಡಿಮೆ ಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಸಿರುಗುಪ್ಪ ನಗರಕ್ಕೆ ಭೀಕರ ಕುಡಿಯುವ ನೀರಿನ ಅಭಾವ ಉಂಟಾಗುವ ಸಂಭವವಿರುತ್ತದೆ ಹೀಗಾಗಿ ಇದಕ್ಕೂ ಮುನ್ನ ಸಿರುಗುಪ್ಪ ನಗರ ವ್ಯಾಪ್ತಿಯಲ್ಲಿ ಕೆರೆಯಲ್ಲಿರುವ ನೀರನ್ನು 5 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿತ್ತು ಏಪ್ರಿಲ್ 2ರಿಂದ ಕೆರೆಯ ನೀರನ್ನು 5ದಿನಗಳ ಬದಲಾಗಿ 8 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತದೆ ಮುಂದೆ ಎದುರಾಗ ಬಹುದಾದ ಭೀಕರ ಕುಡಿಯುವ ನೀರಿನ ಅಭಾವವನ್ನು ನೀಗಿಸುವ ಹಿತ ದೃಷ್ಟಿಯಿಂದ ನಗರ ಸಭೆಯು ಈ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದರು.

Leave a Reply

Your email address will not be published. Required fields are marked *

error: Content is protected !!