ಇರುವುದೊಂದೇ ಭೂಮಿ” – ಪರಿಸರ ಜಾಗೃತಿ ಮೂಡಿಸುವುದು ಬಹುಮುಖ್ಯ : ಅನ್ನಪೂರ್ಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 6- ಸಖಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಖಿ ಒನ್ ಸ್ಟಾಪ್ ಸೆಂಟರ್ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಇನ್ನರ್ವಿ ಕ್ಲಬ್ ನ ಸಹಯೋಗದಲ್ಲಿ ಮಮತೆಯ ತೊಟ್ಟಿಲಿನ ಯೋಜನೆ ಹಾಗೂವವಿಶ್ವ ಪರಿಸರ ದಿನಾಚರಣೆ ಯಶಸ್ವಿಯಾಗಿ ಆಚರಣೆ ಮಾಡಲಾಯಿತು.
ವಿಶ್ವ ಪರಿಸರ ದಿನಾಚರಣೆಯನ್ನು ಜಿಲ್ಲಾ ಆಸತ್ರೆಯಲ್ಲಿನ ಸಖಿ ಘಟಕದ ಮುಂದೆ ಗಿಡ ನೆಡುವುದರ ಮೂಲಕ ಚಾಲನೆ “ಕೊಟ್ಟು ಮಾತಾಡಿದರು.
ಪರಿಸರವನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದು ಬಹುಮುಖ್ಯ ಉದ್ದೇಶದಿಂದ ಪರಿಸರ ದಿನವನ್ನು ಆಚರಿಸಲಾಗುತ್ತದೆ, ಮಮತೆಯ ತೊಟ್ಟಿಲು ಯೋಜನೆಯ ಮಾದರಿ ತೊಟ್ಟಿಲಿಗೆ ಆಶ್ರಯ ಚಪ್ಪರವನ್ನು ಮಾಡಿ ಸಾರ್ವಜನಿಕರಿಗೆ ಪರಿತ್ಯಕ್ತ ಅಥವಾ ಬೇಡವಾದ ಮಕ್ಕಳ ರಕ್ಷಣೆ ಮಾಡುವಲ್ಲಿ ಮಮತೆಯ ತೊಟ್ಟಿಲಿನ ಮಾದರಿಯ ಜಿಲ್ಲಾ ಆಸ್ಪತ್ರೆಯಲ್ಲಿನ ಸಖಿ ಘಟಕದ ಮುಂದೆ ನಿಯೋಜನೆ ಮಾಡುವಲ್ಲಿ ಸಹಯೋಗ ತೋರಿದ ಇನ್ನರ್ ವೀಲ್ ಕ್ಲಬ್ ನ ಶಾರದಾ ಪಾನಘಂಟಿ ಮತ್ತು ಕಾರ್ಯದರ್ಶಿ ಸುವರ್ಣ ಘಂಟಿ ರವರಿಗೆ ಅಭಿನಂದನೆ ಸಲ್ಲಿಸಿದರು.
ಶಾರದಾ ಪಾನ್ ಗಂಟೆ ಇವರು ಮಾತನಾಡಿ ಮಮತೆಯ ತೊಟ್ಟಿಲು ಯೋಜನೆಯು ನಿರ್ಗತಿಕ ತಂದೆ ತಾಯಿ ಪ್ರೀತಿ ವಂಚಿತ ಮಕ್ಕಳ ಬದುಕಿಗೆ ಸಹಾಯವಾಗುತ್ತದೆ. ತೊಟ್ಟಿಲನ್ನು ನೋಡಿ ತಮ್ಮ ಮಗುವನ್ನು ಕುರಿತು ವಿಚಾರಣೆ ಮಾಡುವಂತ ಕಾರ್ಯ ಕೂಡ ಸಖಿ ಘಟಕದಲ್ಲಿ ನಡೆಯುತ್ತಿದೆ ಈ ಮಾದರಿಯನ್ನು ಮಾಡುವಲ್ಲಿ ನಮಗೆ ತುಂಬಾ ಸಂತೋಷವನ್ನು ನೀಡಿತ್ತೆಂದು ಹರ್ಷವನ್ನು ವ್ಯಕ್ತಪಡಿಸಿದರು.
ಸುವರ್ಣ ಗಂಟಿ ಇನ್ನರ್ವಿ ಕ್ಲಬ್ ರವರು ಮಮತೆಯ ತೊಟ್ಟಿಲು ಯೋಜನೆ ಮಕ್ಕಳಿಲ್ಲದ ತಂದೆ ತಾಯಿಗಳಿಗೆ ಇಲಾಖೆಯ ಮೂಲಕ ಇಲ್ಲಿ ರಕ್ಷಿಸಲಾದ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸುವ ಯೋಜನೆಯು ಮಹತ್ವಪೂರ್ಣವಾಗಿದೆ ಎಂದು ತಿಳಿಸಿದರು.
ಸದರಿ ಕಾರ್ಯಕ್ರಮದ ನಿರ್ವಹಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯಮುನಾ ಬೆಸ್ತರು ಸಖಿ ಘಟಕದ ಆಡಳಿತಾಧಿಕಾರಿಗಳು ಮತ್ತು ತಂಡ ನಿರ್ವಹಿಸಿದರು. ಶ್ರೀಮತಿ ಫಾತಿಮಾ ಸಂಯೋಜಕರು, ಜಿಲ್ಲಾ ಮಹಿಳಾ ಘಟಕ ಕೊಪ್ಪಳ, ಕುಮಾರಿ ಸುಜಾತ ಮಹಿಳಾ ಘಟಕ ಸಂಯೋಜಕರು ಇನ್ನರ್ ವೀಲ್ ಕ್ಲಬ್ ನ ಶಾಂತಾ ಗೌರಿ ಮಠ್, ನಿರ್ಮಲ ಪಾಟೀಲ್ರವರು ಭಾಗವಹಿಸಿದರು.
