
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿರೋಧಿಸಿ ಉಗ್ರ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,28- ಕಾಂಗ್ರೆಸ್ ನ ಸೈಯದ್ ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆಯಾದ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ನಾಸೀರ್ ಹುಸೇನ್ ಪಕ್ಕದಲ್ಲೇ ಇರುವಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ..ಪಾಕಿಸ್ತಾನ್ ಜಿಂದಾಬಾದ್ ಎಂಬ ರಾಷ್ಟ್ರ ವಿದ್ರೋಹದ ಉಗ್ರ ಘೋಷಣೆ ಭಾರತದ ಪ್ರಜಾಪ್ರಭುತ್ವದ ದೇಗುಲ ವಿಧಾನ ಸೌಧದಲ್ಲೇ ಮೊಳಗಿದೆ ಎಂದರೆ ಕಾಂಗ್ರೆಸ್ ಇನ್ನೆಷ್ಟು ದೇಶ ಸುಡುವ ವಿಷಜಂತುಗಳನ್ನು ತನ್ನ ಮಡಿಲಲ್ಲಿ ಕಟ್ಟಿ ಕೊಂಡಿರಬಹುದು ಎಂದು ಅಂದಾಜಿಸಲು ಈ ಘಟನೆ ಸಾಕ್ಷಿ ಒದಗಿಸಿದೆ.
ರಾಜ್ಯ ಸಭೆಗೆ ಆಯ್ಕೆಮಾಡಿ ಕಳುಹಿಸಿರುವ ಸೈಯದ್ ನಾಸೀರ್ ಹುಸೇನ್ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಇರಬೇಕು, ‘ತನ್ನನು ರಕ್ಷಿಸಲು ತಮ್ಮ ಮನಃಸ್ಥಿತಿಯ ಕಾಂಗ್ರೆಸ್ ಸರ್ಕಾರ ಇರುವಾಗ ನಾವ್ಯಾರಿಗೆ ಹೆದರಬೇಕು’ ಎಂಬ ದುಷ್ಟ ಮನಸ್ಸಿನಿಂದ ಘೋಷಣೆ ಕೂಗಿರುವ ದೇಶ ವಿರೋಧಿ ನೀಚರನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಾಕ್ಷಿಗಳೆಲ್ಲವೂ ಕಣ್ಣೆದುರಿಗೇ ಇರುವಾಗ ದೇಶ ವಿರೋಧಿಗಳನ್ನು ರಕ್ಷಿಸಲು ಯತ್ನಿಸುವ ಪ್ರಯತ್ನ ನಡೆದರೆ ಮುಂದಾಗುವ ಪರಿಣಾಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಲಿದೆ.
ರಾಜ್ಯದ ರಕ್ಷಣೆಗಾಗಿ ಕಾಂಗ್ರೆಸ್ಸಿಗರೇ ವಿಧಾನ ಸೌಧ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಬುಧವಾರ ಇಂದು ಬಳ್ಳಾರಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ನಗರದ ಮೋತಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮಾನವ ಸರ್ಪಳಿ ನಿರ್ಮಿಸಿ ರಸ್ತೆ ತಡೆ ಮಾಡಲಾಯಿತು ನಂತರ ಮೋದಿ ವೃತ್ತದ ಹತ್ತಿರದಲ್ಲಿರುವ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಮುಂದೆ ಧರಣಿಕೂಡಲಾಯಿತು ನಂತರ ಅವರ ಕಚೇರಿಗೆ ಮುತ್ತಿಗೆ ಹಾಕಿ ಅವರ ನಾಮಫಲಕಕ್ಕೆ ಕಪ್ಪುಮಸಿ ಹಾಕುವ ಪ್ರಯತ್ನದಲ್ಲಿ ಪೊಲೀಸರು ತಡೆದು ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ತಳ್ಳಾಟ ನಡೆಯಿತು ಪಕ್ಷದ ಎಲ್ಲಾ ಸ್ತರದ ನಾಯಕರು ಕಾರ್ಯಕರ್ತರು ಹಾಗೂ ದೇಶಭಕ್ತರು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಗುರುಲಿಂಗ್ ಗೌಡ. ಮುರಾರಿಗೌಡ .ವೀರಶೇಖರ್ ರೆಡ್ಡಿ .ಡಾಕ್ಟರ್ ಮೈಪಾಲ್ . ಓಬಳೇಶ್. ಐನಾಥ ರೆಡ್ಡಿ. ಯುವ ಮೋರ್ಚ ರಾಜ್ಯ ಕಾರ್ಯದರ್ಶಿ ಅಡವಿಸ್ವಾಮಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಎಂಎಸ್ ಸಿದ್ದಪ್ಪ,ಪ್ರಧಾನ ಕಾರ್ಯದರ್ಶಿ ಎಸ್ ರಾಘವೇಂದ್ರ ಚಲವಾದಿ, ಓಬಿಸಿ ಮೋರ್ಚಾ ಸಿದ್ದೇಶ್,ರಾಘವೇಂದ್ರ ಯಾದವ್. ಮಹಿಳಾ ಮೋರ್ಚಾದ ಸುಗುಣ, ನಾಗವೇಣಿ,ಎಸ್ ಟಿ ಮೋರ್ಚಾ ರಘು, ಮಂಡಲ ಪದಾದಿಕಾರಿಗಳಾದ ವೆಂಕಟೇಶ, ರಾಮಾಂಜನಿ, ಎಸ್ ಸಿ ಮೋರ್ಚ ಮೆಕಲ್ ವೀರೇಶ್,ಮುಖಂಡರಾದ ಮದಿರೆ ಕುಮಾರಸ್ವಾಮಿ. ಮಾರುತಿ ಪ್ರಸಾದ್ ಕೆ ಆರ್ ಮಧು ಪ್ರಕಾಶ್ ಗೌಡ ನಟರಾಜ್ ಗೌಡ ಸುದರ್ಶನ್ ರೆಡ್ಡಿ ಸುಮಾ ರೆಡ್ಡಿ ಕೆಆರ್ ಮಲ್ಲೇಶ್ ಗಿರೀಶ್ ಕಾರ್ನಾಡ್ ಶಿವರಾಜ್ ತಿಮ್ಮಪ್ಪ ಅಕ್ಷಯ್ ಗೌಡ ಸತೀಶ್ ಅಜಯ್ ಹಿತೇಶ್ ಗಾದಿಲಿಂಗ ಮತ್ತಿತರ ನೂರಾರು ಕಾರ್ಯಕರ್ತರು ಉಪಸ್ಥಿತಿ ಇದ್ದರು.