ಪಾಲಕರು ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ : ಸಚಿವ ಮಧು ಬಂಗಾರಪ್ಪ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 11- ಎಲ್ಲಾ ಪಾಲಕರು ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಶಿಕ್ಷಣ ಕೂಡಿಸಬೇಕು ರಾಜ್ಯ ಸರಕಾರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸರ್ಕಾರದಿಂದ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟಕ್ಕೆ ಹಲವಾರು ಉಚಿತ ಯೋಜನೆಗಳನ್ನು ಜಾರಿಗೊಳಿಸಿದೆ ಆ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು .
ತಾಲೂಕಿನ ಕರಮುಡಿ ಗ್ರಾಮದಲ್ಲಿ ನ್ಯೂತನ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸರಕಾರಿ ಶಾಲೆಗೆ ಉತ್ತಮ ಶಿಕ್ಷಕರನ್ನು ಸರ್ಕಾರವೇ ನೇಮಕ ಮಾಡಿಕೊಳ್ಳುವುದರಿಂದ ಅವರು ಗುಣಮಟ್ಟದ ಶಿಕ್ಷಣ ನೀಡುತ್ತಾರೆ ಪಾಲಕರು ತಪ್ಪು ಕಲ್ಪನೆಯಿಂದ ಖಾಸಗಿ ಶಿಕ್ಷಣ ಒಲವು ತೋರಿಸಬಾರದು ಎಂದರು.
ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ ಈ ಹಿಂದೆ ಬಿಜೆಪಿ ಬೊಮ್ಮಾಯಿ ಸರ್ಕಾರದಲ್ಲಿ 53 ಸಾವಿರ ಅತಿಥಿ ಶಿಕ್ಷಕರ ಕೊರತೆ ಇತ್ತು ಆದರೆ ಮೂರುವರೆ ವರ್ಷದಲ್ಲಿ ಕೇವಲ 4,900 ಶಿಕ್ಷಕರನ್ನು ನೇಮಕ ಮಾಡಿಕೊಂಡರು ಆದರೆ ನಾನು ಸಚಿವರಾದ ಮೇಲೆ 13 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ ಇನ್ನು ಮುಂದಿನ ದಿನಮಾನಗಳಲ್ಲಿ 10ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ನಿಮ್ಮ ಕ್ಷೇತ್ರದಲ್ಲಿ ಒಳ್ಳೆಯ ಶಾಸಕರನ್ನು ಆಯ್ಕೆ ಮಾಡಿದಿರಿ ಅವರು ನಿಮ್ಮ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ.
ಒಟ್ಟಾರೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣಕ್ಕೆ ನಮ್ಮ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮಹತ್ವ ನೀಡಿದ್ದು ಇನ್ನೂ ಉತ್ತಮ ಉನ್ನತ ಶಿಕ್ಷಣ ನೀಡುವ ಗುರಿಹೂಂದಿದೆ ಮತ್ತು ನಿಟ್ ಕ್ಲಾಸ್ ಮತ್ತು ಸಿಇಟಿ ಕ್ಲಾಸ್ ಗಳನ್ನು ಸರ್ಕಾರದಿಂದ ಉಚಿತವಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ನಮ್ಮ ಅಭಿವೃದ್ಧಿ ಸಹಿಸದ ಬಿಜೆಪಿಯವರು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಬಿಜೆಪಿ ಅವರಿಗೆ ತಪ್ಪು ಹುಡುಕುವುದೇ ದೊಡ್ಡ ಕೆಲಸ ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು ನಂತರ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಬಂದ ಆಗುವದಿಲ್ಲ ನಮ್ಮ ಸರಕಾರ ಇರುವರಿಗೆ ಯೋಜನೆ ಇರುತ್ತವೆ ಬಿಜೆಪಿ ಯವರಿಗೆ ಮಾಡುವದಕ್ಕೆ ಕೆಲಸವಿಲ್ಲದೆ ಸುಮ್ಮನೆ ಮಾತನಾಡುತ್ತಾರೆ.
ಮಾಜಿ ಸಿಎಂ ಬಂಗಾರಪ್ಪನವರು ನಮ್ಮ ರಾಜಕೀಯ ಗುರು ಇವರು ಆಡಳಿತ ಅವದಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಯೋಜನೆ ನೀಡಿದ್ದು ಅದು ಇಂದಿಗೂ ಪ್ರಸ್ತುತವಾಗಿದೆ ನಮ್ಮ ಸಿ.ಎಂ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನುಡಿದಂತೆ ನಡೆಯುತ್ತಿದೆ ಅನ್ನಭಾಗ್ಯ, ಸ್ತ್ರೀಶಕ್ತಿ ಯೋಜನೆ, ಗೃಹಲಕ್ಷ್ಮಿಯೋಜನೆ, ಉಚಿತ ಗ್ರಹಜೋತಿ ಯೋಜನೆ ಇಂತಹ ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ನೀಡುತ್ತಿದೆ.ನಮ್ಮ ಕ್ಷೇತ್ರಕ್ಕೆ ಇನ್ನೂ 12 ಸರಕಾರಿ ಪ್ರೌಢಶಾಲೆ 5 ಜೂನಿಯರ್ ಕಾಲೇಜು.3 ಮೊರಾಜಿ೯ ವಸತಿ ಶಾಲೆ. ಇಟಗಿ ಕಾಮರ್ಸ್ ಆಂಡ್ಯ ಸೈನ್ಸ್ ಕಾಲೇಜು ಮಂಜೂರಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಡಿಸಿ ಮಹೇಶ್ ಮಾಲಗಿತ್ತಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿರಾದರ್, ರಿತೇಶಕುಮಾರ ಸಿಂಗ್ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಂದರೇಶ ಬಾಬು ಕೆಕೆಆರ್ ಡಿಬಿ ಕಲಬುರ್ಗಿ.ಆಕಾಶ ಎಸ್ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ನಲೀನ್ ಅತುಲ್ . ಜಿಲ್ಲಾಧಿಕಾರಿಗಳು ಕೂಪ್ಪಳ, ರಾಹುಲ್ ರತ್ನಂ ಪಾಂಡ್ಯೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ. ಕೊಪ್ಪಳ.ತಹಶೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಸಿಪಿಐ ಮೌನೇಶ್ವರ ಪಾಟೀಲ್ ಪಿಎಸ್ಐ ವಿಜಯ ಪ್ರತಾಪ್ ನವಲಿ ಹಿರೇಮಠ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೋರ.ವೀರನಗೌಡ ಪೋಲಿಸ್ ಪಾಟೀಲ್. ಯಂಕಣ್ಣ ಯರಾಶಿ,ಅಡಿವಪ್ಪ ಬಾವಿಮನಿ.ಕೆರಿಬಸಪ್ಪ ನಿಡಗುಂದಿ, ರಾಮಣ್ಣ ಸಾಲಬಾವಿ. ಶರಣಮ್ಮ ಪೂಜಾರ.ಫರೀದಾಬೇಗಂ ಗಿರೀಜಾ ಸಂಗಟಿ. ಜಯಶ್ರೀ ಕೆ. ತುಮ್ಮರಗುದ್ದಿ. ಗ್ರಾ.ಪಂ.ಅದ್ಯಕ್ಷ ಹೊಳಿಯಮ್ಮ ಹಳ್ಳಿಕೇರಿ! ಮಲ್ಲಮ್ಮ ಗೂಂದಿ .ಪಕ್ಷದ ವಕ್ತಾರ ಡಾಕ್ಟರ್ ಶಿವನಗೌಡ ದಾನರೆಡ್ಡಿ. ಶರಣಪ್ಪ ಗಾಂಜಿ ಸುಧೀರ್ ಕೂಲ೯ಹಳ್ಳಿ. ಮತ್ತು ಇತರರು ಭಾಗವಹಿಸಿದ್ದರು.
