2c136fae-be38-4577-97e1-318669006cc9

ಪುನರ್ವಸತಿ ಕಾರ್ಯಕರ್ತರ ಹುದ್ದೆ : ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 25- ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುತ್ತಿದ್ದು, ಖಾಲಿ ಹುದ್ದೆ ವ್ಯಾಪ್ತಿಯ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಕಾರಟಗಿ ಪುರಸಭೆಯಲ್ಲಿ ಒಂದು ನಗರ ಪುನರ್ವಸತಿ ಕಾರ್ಯಕರ್ತ ಹಾಗೂ ಕೊಪ್ಪಳ ತಾಲ್ಲೂಕಿನ ಕಲಕೇರಾ, ವನಬಳ್ಳಾರಿ, ಹಾಲವರ್ತಿ, ಬೇವನಹಳ್ಳಿ ಗ್ರಾಮ ಪಂಚಾಯತಿ, ಕುಷ್ಟಗಿ ತಾಲ್ಲೂಕಿನ ಕೇಸೂರು, ಹಿರೇನಂದಿಹಾಳ, ಅಂಟರಠಾಣ, ಲಿಂಗದಹಳ್ಳಿ, ಗುಮಗೇರಾ, ಬಿಳೇಕಲ್, ತುಮರಿಕೊಪ್ಪ, ಹಾಬಲಕಟ್ಟಿ, ಶಿರಗುಂಪಿ ಗ್ರಾಮ ಪಂಚಾಯತಿ, ಗಂಗಾವತಿ ತಾಲ್ಲೂಕಿನ ಸಣಾಪುರ, ಜಂಗಮರಕಲ್ಗುಡಿ ಗ್ರಾಮ ಪಂಚಾಯತಿ, ಕನಕಗಿರಿ ತಾಲ್ಲೂಕಿನ ಬಸರಿಹಾಳ, ಜೀರಾಳ ಗ್ರಾಮ ಪಂಚಾಯತಿ, ಕಾರಟಗಿ ತಾಲೂಕಿನ ಬರಗೂರು, ಮೈಲಾಪುರ ಗ್ರಾಮ ಪಂಚಾಯತಿ, ಯಲಬುರ್ಗಾ ತಾಲೂಕಿನ ತುಂಬರಗುದ್ದಿ, ಸಂಕನೂರು, ಬೋದೂರು ಗ್ರಾಮ ಪಂಚಾಯತಿ, ಕುಕನೂರು ತಾಲೂಕಿನ ಮಸಬಹಂಚಿನಾಳ, ನೆಲಜೇರಿ ಗ್ರಾಮ ಪಂಚಾಯತಿಗಳಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ತಾತ್ಕಾಲಿಕವಾಗಿ ಮಾಸಿಕ ರೂ.9000/-ಗಳ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18-45 ವರ್ಷ ಒಳಗಿನ ನಿರುದ್ಯೋಗಿ ಅಂಗವಿಕಲರಾಗಿರಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣದೊಂದಿಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ವಿಶೇಷ ಶಿಕ್ಷಣ, ಆರ್.ಸಿ.ಐ ತರಬೇತಿ, ದಿವ್ಯಾಂಗ ಮಿತ್ರ ತರಬೇತಿ, ಸನ್ನೆ ಭಾಷೆ ತರಬೇತಿ, ದೈಹಿಕ ವ್ಯಾಯಾಮ ತರಬೇತಿ ವಿಶೇಷ ಜ್ಞಾನಗಳನ್ನು ಪಡೆದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಅಂಗವಿಕಲರ ಯು.ಡಿ.ಐ.ಡಿ ವಿಶಿಷ್ಟ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿದವರಾಗಿರಬೇಕು. ಅಂಗವಿಕಲತೆಯು ಕನಿಷ್ಠ ಶೇ.40 ರಷ್ಟಿರಬೇಕು. (ಭಾಗಶಃ ಅಂಧರಿಗೆ, ಭಾಗಶಃ ಶ್ರವಣ ದೋಷವುಳ್ಳವರಿಗೆ ಮತ್ತು ದೈಹಿಕ ಅಂಗವಿಕಲರಿಗೆ), ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯಾಗಿರಬೇಕು.(ಗ್ರಾಮ ಪಂಚಾಯತಿ ದೃಢೀಕರಣ), ತಹಶೀಲ್ದಾರರಿಂದ ಪಡೆದ ಜಾತಿ, ಆದಾಯ ಮತ್ತು ವಾಸಸ್ಥಳ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ವಿಕಲಚೇತನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಅನುಭವವಿದ್ದಲ್ಲಿ ಸಂಬAಧಪಟ್ಟ ದಾಖಲೆಗಳನ್ನು ಲಗತ್ತಿಸಬೇಕು. ಮಹಿಳಾ ವಿಕಲಚೇತನರಿಗೆ ಆದ್ಯತೆ ನೀಡಲಾಗುವುದು.

ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಜುಲೈ 12 ರೊಳಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯ ಆವರಣ, ಕೊಠಡಿ ಸಂಖ್ಯೆ 31, 32 ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ, ಹೊಸಪೇಟ್ ರಸ್ತೆ, ಕೊಪ್ಪಳ ರವರಿಗೆ ಕಛೇರಿ ಅವಧಿಯಲ್ಲಿ ಸಲ್ಲಿಸಬೇಕು.

ಹುದ್ದೆಯು ಸಂಪೂರ್ಣವಾಗಿ ಗೌರವಧನದ ಆಧಾರದ ಮೇಲೆ ಹಾಗೂ ತಾತ್ಕಾಲಿಕ ಹುದ್ದೆಯಾಗಿರುತ್ತದೆ. ನಿಗದಿಪಡಿಸಿದ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆ:08539-295496 ಅಥವಾ ಕಛೇರಿ ಅವಧಿಯಲ್ಲಿ ಕಾರ್ಯಲಯಕ್ಕೆ ಭೇಟಿ ನೀಡಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!