
ಪೋಷಣ ಅಭಿಯಾನ ಯೋಜನೆಯಡಿ ಹುದ್ದೆಗಳಿಗೆ ಅರ್ಜಿ ಅಹ್ವಾನ
ಕರುನಾಡ ಬೆಳಗು ಸುದ್ದಿ
ವಿಜಯನಗರ, 27- ಕೇಂದ್ರ ಸರ್ಕಾರದ ಪೋಷಣ ಅಭಿಯಾನ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಜಯನಗರ ಜಿಲ್ಲೆಗೆ 2 ಹುದ್ದೆಗಳನ್ನು ಹಾಗೂ ಹೊಸಪೇಟೆ ಮತ್ತು ಕೂಡ್ಲಿಗಿ ತಾಲ್ಲೂಕಿಗೆ 1 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ನಿಗದಿಪಡಿಸಿದ ನಿಬಂಧನೆಗೊಳಪಟ್ಟು ಸ್ಥಳೀಯ ಅಭ್ಯರ್ಥಿಗಳನ್ನು ಗೌರವಧನ ಆಧಾರದಲ್ಲಿ ಪೋಷಣ ಅಭಿಯಾನ ಯೋಜನೆಯ ಮಾರ್ಗಸೂಚಿಯಂತೆ ತಾತ್ಕಾಲಿಕವಾಗಿ ನೇರಗುತ್ತಿಗೆ ಮೂಲಕ ಸಂದರ್ಶನ ಮಾಡಿ ನೇಮಕಾತಿ ಮಾಡಲಾಗುತ್ತದೆ. ಭರ್ತಿಮಾಡಿದ ಅರ್ಜಿಗಳನ್ನು ಜುಲೈ 10ರೊಳಗಾಗಿ ಸಂಬಂಧಪಟ್ಟ ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಪ್ತಗಿರಿ ಶಾಲೆಯ ಹತ್ತಿರ ಮೆಟ್ರೋ ಫ್ಯಾಶನ್ ಮೇಲಿನ ಮಹಡಿ ಬಸವೇಶ್ವರ ಬಡಾವಣೆ ವಿಜಯನಗರ ಮೊ.8310717479ಗೆ ಸಂಪರ್ಕಿಸಬಹುದು ಎಂದು ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವಿಧ ಹುದ್ದೆಗಳು ಮತ್ತು ವಿದ್ಯಾರ್ಹತೆಯ ವಿವರ ಈ ಮುಂದಿನಂತಿರುತ್ತದೆ.
ಜಿಲ್ಲಾ ಕಾರ್ಯಕ್ರಮ ಸಂಯೋಜಕರು 1 ಹುದ್ದೆ : ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ ಹೊಂದಿರಬೇಕು, ಅಪ್ಲಿಕೇಷನ್ ನಿರ್ವಹಣೆ ವಿಷಯದಲ್ಲಿ 2 ವರ್ಷ ಸೇವಾನುಭವ ಹೊಂದಿರಬೇಕು, ಸ್ಥಳೀಯ ಭಾಷೆಯಲ್ಲಿ ಉತ್ತಮ ಸಂವಹನ ಮತ್ತು ಬರವಣೆಗೆ ಕೌಶಲ್ಯ ಹೊಂದಿರಬೇಕು, ಸ್ಥಳೀಯ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ, ಕೆಲಸ ನಿರ್ವಹಿಸಲು ಜಿಲ್ಲೆಯಾದ್ಯಂತ ಪ್ರಯಾಣ ಮಾಡುವುದು ಕಡ್ಡಾಯವಾಗಿರುತ್ತದೆ.
ಜಿಲ್ಲಾ ಯೋಜನಾ ಸಹಾಯಕರು 1 ಹುದ್ದೆ : ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಇನ್ ಮ್ಯಾನೆಜಮೆಂಟ್, ಸಮಾಜ ವಿಜ್ಞಾನ, ಪೋಷಣೆ ಹೊಂದಿರಬೇಕು. 2 ವರ್ಷ ಸೇವಾನುಭವ. ಸ್ಥಳೀಯ ಅಭ್ಯರ್ಥಿಗಳಿಗೆ ಪ್ರಥಮ ಆಧ್ಯತೆ, ಕೆಲಸ ನಿರ್ವಹಿಸಲು ಜಿಲ್ಲೆಯಾದ್ಯಂತ ಪ್ರಯಾಣ ಮಾಡುವುದು ಕಡ್ಡಾಯ, ಮೇಲ್ವಿಚಾರಣಾ ಕೌಶಲ ಹೊಂದಿರಬೇಕು. ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವ ಬರೆಯುವ ಕೌಶಲ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ, ಇಂಟರ್‌ನೆಟ್ ಜ್ಞಾನ ಹೊಂದಿರಬೇಕು. ತಂಡದಲ್ಲಿ ಕಾರ್ಯನಿರ್ವಹಿಸುವ ಹಾಗೂ ಪ್ರಯಾಣ ಮಾಡುವುದು ಕಡ್ಡಾಯವಾಗಿರುತ್ತದೆ.
ತಾಲೂಕಾ ಯೋಜನಾ ಕಾರ್ಯಕ್ರಮ ಸಂಯೋಜಕರು 2 ಹುದ್ದೆ: ಪದವಿ ಹೊಂದಿರಬೇಕು, ತಂತ್ರಜ್ಞಾನದಲ್ಲಿ 2 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು, ಸ್ಥಳೀಯ ಭಾಷೆಯಲ್ಲಿ ಉತ್ತಮ ಸಂವಹನ ಮತ್ತು ಬರವಣೆಗೆ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ, ಇಂಟರ್‌ನೆಟ್ ಜ್ಞಾನ ಹೊಂದಿರಬೇಕು, ತಂಡದಲ್ಲಿ ಕಾರ್ಯನಿರ್ವಹಿಸುವ ಹಾಗೂ ಪ್ರಯಾಣ ಮಾಡುವುದು ಕಡ್ಡಾಯವಾಗಿರುತ್ತದೆ, ಸ್ಥಳೀಯ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.