ಪ್ರವಾಹ ಎದುರಿಸಲು ಜಿಲ್ಲಾ ಆಡಳಿತ ಸನ್ನದ್ಧ ಜಿಲ್ಲಾಧಿಕಾರಿ ಮಿಶ್ರಾ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 18- ಕರ್ನಾಟಕ ರಾಜ್ಯದಲ್ಲಿ ಭೀಕರ ಬರಗಾಲದಿಂದ ಜನರು ಬಸವಳಿದಿದ್ದಾರೆ ಈಗಾಗಲೇ ಹಲವಡೆ ಮುಂಗಾರು ಪೂರ್ವ ಮಳೆ ಆರಂಭವಾಗಿದೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಹೀಗಾಗಿ ಬಳ್ಳಾರಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೆರೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಬಳ್ಳಾರಿ ವಿಜಯನಗರ ರಾಯಚೂರು ಹಾಗೂ ಕೊಪ್ಪಳದ ಜೀವನಾಡಿ ಯಾಗಿರುವ ತುಂಗಭದ್ರಾ ಜಲಾಶಯ ಭರ್ತಿಯಾದರೆ ನೀರನ್ನು ವೇದಾವತಿ ನದಿಗೆ ಹರಿಸಲಾಗುತ್ತದೆ ನದಿಗೆ ನೀರು ಹರಿಸುವುದರಿಂದ ಸುತ್ತಲಿನ ಗ್ರಾಮಗಳು ಪ್ರವಾಹ ಎದುರಿಸಲಿವೆ ಆದ್ದರಿಂದ ಬಳ್ಳಾರಿ ಜಿಲ್ಲಾ ಆಡಳಿತ ನೆರೆಪೀಡಿತ ಹಳ್ಳಿಗಳನ್ನು ಈಗಾಗಲೇ ಗುರುತಿಸಿ ಮೂಲ ಸೌಕರ್ಯ ಒದಗಿಸಲು ಸಕಲ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಸಿರುಗುಪ್ಪ ತಾಲೂಕಿನಲ್ಲಿ 4 ಬಳ್ಳಾರಿ 2 ಕಂಪ್ಲಿ ತಾಲೂಕಿನ ಒಂದು ಗ್ರಾಮ ಪಂಚಾಯತ್ ಅನ್ನು ನೆರೆಪೀಡಿತ ಹಳ್ಳಿಗಳೆಂದು ಗುರುತಿಸಲಾಗಿದೆ.
ಈ ಗ್ರಾಮಗಳಿಗೆ ಸೂಕ್ತ ನೆರವು ನೀಡಲು ಒಟ್ಟು 16 ಕಮಿಟಿಗಳನ್ನು ರಚಿಸಲಾಗಿದೆ ಪ್ರತಿ ಸಮಿತಿಯಲ್ಲಿ ಸ್ಥಳೀಯ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಇರಲಿದ್ದಾರೆ ಕಮಿಟಿಯು ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಗಳ ರಕ್ಷಣೆಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಿವೆ ನೆರೆಪೀಡಿತ ಕೇಂದ್ರಗಳಲ್ಲಿ ವಾಸಿಸುವ ಹಿರಿಯರು ಮಕ್ಕಳಿಗೆ ಆರೋಗ್ಯ ತಪಾಸಣೆ ಸಹಾಯವಾಣಿ ಮೂಲಕ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಳೆ ಮಾಹಿತಿ ಹಾಗೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ವ್ಯವಸ್ಥೆ ಮಾಡಲಿದೆ.
ಎರಡು ವರ್ಷದ ಹಿಂದೆ ತುಂಗಭದ್ರಾ ಜಲಾಶಯದ ಹೊರ ಅರಿವು ನೀರಿನ ಪ್ರಮಾಣ ಹೆಚ್ಚಾಗಿ ಹಾಗೂ ಜಿಲ್ಲಾಧ್ಯಂತ ತೀವ್ರ ಮಳೆ ಸುರಿದ ಪರಿಣಾಮ ವೇದಾವತಿ ಹಗರಿ ನದಿ ನೀರಿನ ಪ್ರಮಾಣ ಹೆಚ್ಚಾಗಿತ್ತು ಎಲ್ಲಾಪುರ ಹಳ್ಳದ ಸೇತುವೆ ಮೇಲೆ ನೀರು ಹರಿದು ವ್ಯಕ್ತಿಯೊಬ್ಬರು ದಾಟುವ ವೇಳೆ ಹಳ್ಳದಲ್ಲಿ ಬಿದ್ದಿದ್ದರು ಅಗತ್ಯ ಬೋಟುಗಳ ವ್ಯವಸ್ಥೆ ಇಲ್ಲದ ಪರಿಣಾಮ ಆತನನ್ನು ಉಳಿಸಲು ಆಗಲಿಲ್ಲ ಆಗಿನ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಾ ಪಾಟೀಲ್ ಅವರು ತಕ್ಷಣ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 4ಬೋಟುಗಳನ್ನು ಖರೀದಿಸಿದರು ಕೆಲ ದಿನಗಳ ನಂತರ ಸಿರುಗುಪ್ಪ ಸಮೀಪದ ಹಳ್ಳ ಒಂದರಲ್ಲಿ ಲಾರಿ ಹಾಗೂ ಚಾಲಕ ಸಿಲುಕಿದಾಗ ಅಗ್ನಿಶಾಮಕ ದಳವು ಬೋಟ್ ಮೂಲಕ ರಕ್ಷಣೆ ಮಾಡಿತು ಇದು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿತ್ತು.
ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ 4 ಬೋಟ್ ಗಳಿವೆ ಬಳ್ಳಾರಿ ಸಿರುಗುಪ್ಪ ಕುರುಗೋಡು ಹಾಗೂ ಕಂಪ್ಲಿಯ ಅಗ್ನಿಶಾಮಕ ದಳ ಕಚೇರಿಗಳಲ್ಲಿ ಇಡಲಾಗಿದೆ ಕಳೆದ ವರ್ಷ ಭೀಕರ ಬರದಿಂದ ಜಿಲ್ಲೆಯ ಹಲವು ಕೆರೆಗಳು ಹಾಗೂ ಕೃಷಿ ಹೋಂಡಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದೆ ಖಾಲಿಯಾಗಿವೆ ಸದ್ಯ ಮಹಾತ್ಮ ಗಾಂಧಿ ಉದ್ಯೋಗ ಯೋಜನೆಯಡಿ ನರೇಗಾ ಯೋಜನೆಯ ಹೂಳು ತೆಗೆಯಲಾಗಿದೆ ಕೆಲ ಬೂದುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಲಾಗಿದೆ ನೆರೆ ಪೀಡಿತ ಗ್ರಾಮಗಳಾದ ನಡವಿ ಹೆರಕಲ್ಲು ಬಾಗೇವಾಡಿ ಹೊನ್ನರಹಳ್ಳಿ ಚಿಕ್ಕಬಳ್ಳಾರಿ ಹಚ್ಚೋಳ್ಳಿ ಚಳ್ಳೆ ಕೂಡ್ಲೂರು ವತ್ತು ಮುರುವಣಿ ಮುದೇನೂರು ಉತ್ತನೂರು ಮಾಟಸುಗೂರು ಕೂರಿಗನೂರು ಕಂಪ್ಲಿ ಬಸರಗೂಡು ಮೋಕ ನೇರೆ ಪೀಡಿತ ಗ್ರಾಮಗಳನ್ನು ಗುರುಜಿಸಲಾಗಿದೆ ಪ್ರವಾಹ ಹಾಗೂ ನೆರೆ ಎದುರಿಸಲು ಬಳ್ಳಾರಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಗತ್ಯ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ವಿವರಿಸಿದರು.
