2c136fae-be38-4577-97e1-318669006cc9

ಫಿಜಿಯೋಥೆರೆಪಿಸ್ಟ್ ಹುದ್ದೆ : ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 15- 2024-25ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಹಾಗೂ ಸಮನ್ವಯ ಶಿಕ್ಷಣ ಶಿರ್ಷಿಕೆ ಅಡಿಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಫಿಜಿಯೋತೆರೆಪಿ ಚಿಕಿತ್ಸೆ ನೀಡಲು ಫಿಜಿಯೋಥೆರಪಿಸ್ಟ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಬ್ಯಾಚುಲರ್ ಆಫ್ ಫಿಜಿಯೋಥೆರೆಪಿ (ಬಿಪಿಟಿ) ಅಥವಾ ಡಿಪ್ಲೋಮಾ ಇನ್ ಫಿಜಿಯೋಥೆರೆಪಿ (ಡಿಪಿಟಿ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಅರ್ಹರು ಜುಲೈ 20ರೊಳಗೆ ಕ್ಷೇತ್ರಸಮನ್ವಯಾಧಿಕಾರಿಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸ್ಟೇಷನ್ ರಸ್ತೆ, ಕೊಪ್ಪಳ ಈ ಶಾಲೆಯ ಆವರಣದಲ್ಲಿರುವ ಕಚೇರಿಗೆ ಸಲ್ಲಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕೊಪ್ಪಳ ಕ್ಷೇತ್ರ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!