b7f2889b-66d1-4516-b60f-78e8cd713475

ಫೆಬ್ರವರಿ 24 ರಂದು, ಎಸ್ಸಿ ಎಸ್ಟಿ ಅಲೆಮಾರಿಗಳ ಜಾಗೃತಿ ಸಮಾವೇಶ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ: ಇದೇ ತಿಂಗಳು 24 ನೇ ತಾರೀಕು ಕರ್ನಾಟಕ ರಾಜ್ಯ ಎಸ್ ಸಿ ಎಸ್ ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ವಾಲ್ಮೀಕಿ ಭವನದಲ್ಲಿ ಬೃಹತ್ ಜಾಗೃತಿ ಸಮಾವೇಶವನ್ನು ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ, ವೈ ಶಿವಕುಮಾರ್, ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ರಂಗಯ್ಯ ಹೇಳಿದರು.

ಇಂದು ಪತ್ರಿಕಾ ಭವನ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಯಾವುದೇ ಸರ್ಕಾರ ಆಡಳಿತದಲ್ಲಿ ಇದ್ದರೂ ತಮಗೆ ಸಂಪೂರ್ಣ ನ್ಯಾಯ ಸಿಗುತ್ತಿಲ್ಲ ಎಂದರು. ದಶಕಗಳು ಕಳೆದರೂ ತಮ್ಮ ಜೀವನದ ಹಣೆಬರ ಬದಲಾಗಿಲ್ಲ ಎಂದು, ತಮಗೆ ಭಾರತ ರಾಜಾಂಗ ಕಲ್ಪಿಸಿರುವ ಯಾವುದೇ ಸಂಪೂರ್ಣ ಸೌಲಭ್ಯಗಳು ಸಿಗುತ್ತಿಲ್ಲ ಎಂದರು.

ಉದ್ಯೋಗ, ವಸತಿ, ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಆರೋಗ್ಯ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿದೆ ಎಂದರು. ಕರ್ನಾಟಕದಲ್ಲಿ ವಿಧಾನಸಭಾ ಮತ್ತು ವಿಧಾನ ಪರಿಷತ್ತುಗಳು ರಚನೆ ಆದಾಗಿನಿಂದ ಹೋರಾಟ ಮಾಡುತ್ತಲೇ ಬಂದಿದ್ದರೂ ಎಂದಿಗೂ ಈ ಸಮುದಾಯಗಳನ್ನು ಎಲ್ಲಾ ಸರ್ಕಾರಗಳು ಕಡೆಗಣಿಸುತ್ತಲೇ ಬಂದಿವೆ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 3.5 ಲಕ್ಷ ಜನಸಂಖ್ಯೆ ಇದ್ದು, ಇಂದಿಗೂ ಟೆಂಟ್ ಗಳಲ್ಲಿ ಗುಡಾರ ಗುಡಿಸಲಗಳಲ್ಲಿ ಊರೂರು ಅಲದು ಜೀವಿಸುವ ಸಮುದಾಯ ಎಂದು ಹೇಳಿದರು. ಕೇಂದ್ರ ರಾಜ್ಯ ಸರ್ಕಾರಗಳು ಕೂಡಲೇ ಕಾಂತರಾಜು ಆಯೋಗ ವರದಿ ಜಾರಿಗೊಳಿಸುವುದು ಮತ್ತು ಎಸ್ಸಿ ಎಸ್ಟಿ ಅಲಮಾರಿಗಳಿಗೆ ಹೊಸ ಸೌಕರ್ಯ ಕಲ್ಪಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್ಸಿ ಎಸ್ಟಿ ಅಲೆಮಾರಿಗಳಿಗಾಗಿ ಪ್ರತ್ಯೇಕ ಆಯೋಗ ರಚಿಸುವುದು, ರಾಜಕೀಯ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಹಾಗೂ ಔದ್ಯೋದಗಿ ತ ಮೀಸಲಾತಿ ಕಲ್ಪಿಸುವದು, ಎಸ್ ಸಿ ಎಸ್ ಟಿ ಹಲವಾರಿಗಳ ಅಭಿವೃದ್ಧಿಗಾಗಿ 2024 ಮತ್ತು 25ನೇ ಸಾಲಿನ ಬಜೆಟ್ ನಲ್ಲಿ 1000 ಕೋಟಿ ಅನುದಾನವನ್ನು ಮೀಸಲು ಇಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಮುಖಂಡರು ಮತ್ತು ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!