WhatsApp Image 2024-06-03 at 4.40.09 PM

ಬಳ್ಳಾರಿ ಜಿಲ್ಲೆಯಲ್ಲಿ 36 ಮಿ.ಮೀ. ಪ್ರಮಾಣದ ಮಳೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 4- ಜಿಲ್ಲೆಯ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದಿದೆ. ಗುಡುಗು ಮತ್ತು ಸಿಡಿದ ಸಮಯದವಾಗಿ ಸುಮಾರು ಒಂದು ಗಂಟೆಗೆ ಹೆಚ್ಚು ಸುರುದ ಮಳೆ ಪ್ರಮಾಣ 36 ಮಿಲ್ಲಿ ಮೀಟರ್ ಆಗಿದೆ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ.

ಬಿರುಗಾಳಿ ಇಂದಾಗಿ ಪ್ರಾರಂಭವಾದ ಮಳೆ ಅತಿ ಭೀಕರವಾಗಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರೆ, ಕೆಲವಾಗ ಗುಡಿಸಲು ಮೇಲಿನ ಜಿಂಕ್ ಶೀಟ್ ಗಳು ಗಾಳಿಗೆ ಹೊಡೆದುಕೊಂಡು ಹೋಗಿದ್ದವೇ.

ಸ್ಲಂ ಏರಿಯಾ ಗಳಲ್ಲಿ ನೀರು ಕೊಚ್ಚಿ ಬಂದು ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಳೆಯಿಂದ ವ್ಯವಸಾಯ ಮಾಡಲು, ಹಿಂಗಾರು ಮತ್ತು ಮುಂಗಾರು, ಬೆಳೆಗಳು ಹಾಕಲು ಅನುಕೂಲವಾಗುತ್ತದೆ ಎಂದು ವ್ಯವಸಾಯಾಧಿಕಾರಿಗಳು ಹೇಳುತ್ತಿದ್ದಾರೆ. ಸುಡುಬಿಸಲಿನಿಂದ ಬೆಂದು ಬೇಸತ್ತು ಹೋದ ಸಾರ್ವಜನಿಕರಿಗೆ ಈ ಮಳೆಯಿಂದ ಸ್ವಲ್ಪ ಉಪಶಮನ ವಾಗಿದೆಎಂದು ಹೇಳಲಾಗುತ್ತದೆ.

ಸಿಡಿಲಿಗೆ ಆಕಳು ಬಲಿ : ಭಾನುವಾರ ರಾತ್ರಿ ಮತ್ತು ಸಿಡಿಲು ಗುಡುಗಿನ ಸಮೇತ ಬಂದಮಳೆಯಿಂದಾಗಿ, ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೂಡ್ಲಿಗಿ ಪಟ್ಟಣದಲ್ಲಿ ಸಿಡಲಿಗೆ ಒಂದು ಆಕಳು ಬಲಿಯಾಗಿದ್ದು, ತಾಲೂಕಿನ ಕೆಲವಾಡೆ ಮನೆಗಳ ಮೇಲ್ದಾವಣೆ ಗೋಡೆ ಕುಸುದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!