
ಬಳ್ಳಾರಿ : ಮಧ್ಯಮ ಗಾತ್ರದ ಸಮಸ್ಯೆಗಳ ಪರಿಹಾರದ ಜಾಗೃತಿ ಶಿಬಿರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,29- ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ ಹಾಗೂ ಬಳ್ಳಾರಿ ಬ್ರಾಂಚ್ ಆಫ್ ಎಸ್‌ಐಆರ್‌ಸಿ ಆಫ್ ಐಸಿಎಐ ಇವರ ಸಂಯುಕ್ತಾಶ್ರಯದಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್‌ಎಂಇ) ಸಮಸ್ಯೆಗಳ ಪರಿಹಾರದ ಜಾಗೃತಿ ಶಿಬಿರ ನಡೆಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಬಿ.ಮಹಾರುದ್ರಗೌಡ ಅವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಉದ್ಯಮಿಗಳು ಪಾವತಿ ಮಾಡುವಲ್ಲಿ ಎದುರಾಗುವ ಸಮಸ್ಯೆಗಳು, 43ಬಿ.ಹೆಚ್ ಹಾಗೂ ಆದಾಯ ತೆರಿಗೆ ಮಾಸಿಕ ಲೆಕ್ಕಪತ್ರಗಳ ಇತ್ಯರ್ಥ, ಚುನಾವಣಾ ಸಂದರ್ಭದಲ್ಲಿ ನಗದು ಹಣ ನಿರ್ವಹಣೆ-ಸಾಗಾಣಿಕೆ ಸೇರಿ ಇನ್ನಿತರೆ ವಿಷಯಗಳ ಕುರಿತು ತಜ್ಞರು ಮಾಹಿತಿ ನೀಡುತ್ತಾರೆ ಎಂದರು.
ಯಶವಂತರಾಜ್ ನಾಗಿರೆಡ್ಡಿ, ಹಿರಿಯ ಉಪಾಧ್ಯಕ್ಷರು, ಮಾತನಾಡಿ, ಸಿಡ್ಜಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕಾಸಿಯಾದ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಮಾರ್ಚ 1 ಸೋಮವಾರ ರಾಯಲ್ ಪೊರ್ಟ್ ಸಭಾಂಗಣದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು – ರಫ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಿಎ ರಾಜೇಶ ಬಾಗ್ರೇಚ್ ಇವರು ೪೩ಬಿಹೆಚ್ ಬಗ್ಗೆ ಉಪನ್ಯಾಸ ನೀಡಿದರು, ಎಂ.ಎಸ್.ಎಂ.ಇ ಪಾವತಿ ಮಾಡುವುದು ವಿಳಂಬವಾದರೆ ಯಾವ ಪದ್ದತಿಗಳನ್ನು ಅನುಸರಿಸಬೇಕು ಎಂದು ಉಪನ್ಯಾಸ ನೀಡಿದರು.
ಸಿ. ಶ್ರೀಧರ ಪಾರ್ಥಸಾರದಿ ಇವರು ಖಾತೆಗಳ ಪುಸ್ತಕಗಳನ್ನು ಮಾರ್ಚ ತಿಂಗಳ ಅಂತ್ಯಕ್ಕೆ ಯಾವ ರೀತಿ ಖಾತೆಗಳನ್ನು ಮುಚ್ಚವುದರಲ್ಲಿ ಅನುಸರಿಸಬೇಕಾದ ಪದ್ದತಿಗಳನ್ನು ಮನಮುಟ್ಟುವಂತೆ ಉಪನ್ಯಾಸವನ್ನು ನೀಡಿದರು.
ಸಿಎ ಕೆ ರಾಜಶೇಖರ ಇವರು ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಅವಧಿಯಲ್ಲಿ ತೆಗದುಕೊಳ್ಳುವ ಮುನ್ನೆಚ್ಚರಿಕೆಗಳು ಹಾಗೂ ಯಾವ ಪದ್ದತಿಯನ್ನು ಅನುಸರಿಸಬೇಕು ಹಾಗೂ ಯಾವ ಪದ್ದತಿಯನ್ನು ಅನುಸರಿಸಬಾರದು ಎನ್ನವ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ಕೆ.ಸಿ.ಸುರೇಶಬಾಬು, ಗೌರವ ಕಾರ್ಯದರ್ಶಿಗಳು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದ ಸಂಯೋಜಕರಾದ ಸಿಎ ವೆಂಕಟನಾರಾಯಣ ಸಿ, ಚೇರ್ಮನ್, ಬಳ್ಳಾರಿ ಬ್ರಾಂಚ್ ಆಫ್ ಎಸ್‌ಐಆರ್‌ಸಿ ಆಫ್ ಐಸಿಎಐ ಸಿಎ ಸ್ವಪ್ನಪ್ರಿಯಾ ಕೆ.ವಿ, ಕಾರ್ಯದರ್ಶಿಗಳು, ಬಳ್ಳಾರಿ ಬ್ರಾಂಚ್ ಆಫ್ ಎಸ್‌ಐಆರ್‌ಸಿ ಆಫ್ ಐಸಿಎಐ, ಬಳ್ಳಾರಿ. ಸಂಸ್ಥೆಯ ಉಪಾಧ್ಯಕ್ಷರಗಳಾದ ಎಸ್.ದೊಡ್ಡನಗೌಡ, ಸೊಂತಗಿರಿಧರ, ಜಂಟಿಕಾರ್ಯದರ್ಶಿಗಳಾದ, ಡಾ ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ನಮ್ಮ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಕಮಟಿಗಳ ಚೇರ್ಮನ್‌ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ರೈಸ್‌ಮಿಲ್ ಅಸೋಸಿಯೇಷನ್, ಕಾಟನ್ ಅಸೋಸಿಯೇಷನ್, ಎಪಿಎಂಸಿ ವರ್ತಕರು, ಇಂಡಸ್ಟ್ರಿಯಲ್ ಅಸೋಸಿಯೇಷನ್, ಸ್ಪಾಂಜ್ ಐರನ್ ಅಸೋಸಿಯೇಷನ್, ಗಾರ್ಮೆಂಟ್ಸ್ ಅಸೋಸಿಯೇಷನ್, ಕೋಲ್ಡ್ ಸ್ಟೊರೇಜ್ ಅಸೋಸಿಯೇಷನ್‌ನ ಹಾಗೂ ಇತರೆ ಸಂಘ-ಸಂಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಈ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.