05 Gvt 02

ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ ಗಂಗಾವತಿ ಬಸ್ ಡಿಪೋ ಮುತ್ತಿಗೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 6- ಉಚಿತ ಬಸ್ ಪ್ರಯಾಣದಿಂದ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗಿದ್ದು ಕೊಪ್ಪಳ ಹಾಗು ಗಂಗಾವತಿ ಡಿಪೋ ಬಸ್ ಬಸಾಪಟ್ಟಣ ಗ್ರಾಮದ ಬಸ್ ನಿಲ್ದಾಣದಲ್ಲಿ ಸ್ಟಾಪ್ ಮಾಡುವಂತೆ ಒತ್ತಾಯಿಸಿ ಇಂದು ಶನಿವಾರ ಜುಲೈ ೬ ರಂದು ಗಂಗಾವತಿ ಡಿಪೊ ಮುತ್ತಿಗೆ ಹಾಕಲಾಗುವುದು ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಮುಖಂಡರಾದ ನಿರುಪಾದಿ ಗೋಮರ್ಷಿ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಗದಗ ಇತರೆ ಡಿಪೋ ಬಸ್‌ಗಳು ಬಸಾಪಟ್ಟಣ ಗ್ರಾಮದಲ್ಲಿ ಸ್ಟಾಪ್ ಮಾಡುತ್ತಿದ್ದು, ಗಂಗಾವತಿ ಹಾಗು ಕೊಪ್ಪಳ ಡಿಪೋ ಬಸ್‌ಗಳು ಮಾತ್ರ ನಿಲ್ಲುತ್ತಿಲ್ಲ, ಪ್ರತಿಭಟನೆ ಅಥವಾ ಬಸ್ ತಡೆಮಾಡಿದ ಒಂದೆರೆಡು ದಿನ ನಿರ್ವಹಿಸಿ ಮತ್ತೆ ಹಿಂದಿನAತೆ ಆಟ ಶುರುವಿಟ್ಟುಕೊಳ್ಳುತ್ತಿದ್ದು ಇದರಿಂದ ಸಾರ್ವಜನಿಕರು ಅಕ್ರೋಶಗೊಂಡಿದ್ದಾರೆ ಕೂಡಲೆ ಕ್ರಮಕ್ಕೆ ಮುಂದಾಗಲು ಒತ್ತಾಯಿಸಿ ಕೆಆರ್‌ಎಸ್ ಹಾಗು ಬಸಾ ಪಟ್ಟಣದ ಗ್ರಾಮಸ್ಥರು ಡಿಪೋ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕೆಆರ್‌ಎಸ್ ಪಕ್ಷ ರೈತ ಮೋರ್ಚಾ ಕೊಪ್ಪಳ ಜಿಲ್ಲಾಧ್ಯಕ್ಷ ಕನಕಪ್ಪ ಹುಡೇಜಾಲಿ ಮಾತನಾಡಿ, ಉಚಿತ ವ್ಯವಸ್ಥೆಯಿಂದ ಬಸ್‌ಗಳು ತುಂಬಿತುಳುಕುತ್ತಿದ್ದು, ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ ಹೆಚ್ಚುವರಿ ಬಸ್ ಓಡಿಸಬೇಕಿದ್ದು, ಚಾಲಕರು ಜಾಗರೂಕವಾಗಿ ವಾಹನ ಚಾಲನೆ ಮಾಡುವ ಅಗತ್ಯವಿದೆ, ರಾತ್ರಿ ವೇಳೆ ಬಳ್ಳಾರಿಯಿಂದ ಗಂಗಾವತಿಗೆ ಮತ್ತು ಗಂಗಾವತಿಯಿಂದ ಬಳ್ಳಾರಿಗೆ ವಾಹನದ ವ್ಯವಸ್ಥೆ ಮಾಡಬೇಕಿದೆ, ಅದೇರೀತಿ ಕೊಪ್ಪಳ ಗಂಗಾವತಿ ಸ್ಥಿತಿಯೂ ಆಗಿದ್ದು ಕನಿಷ್ಟ ಅರ್ಧ ಗಂಟೆಗೊAದರAತೆ ಮರ‍್ನಾಲ್ಕು ವಾಹನ ಓಡಿಸಬೇಕೆಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಅಧ್ಯಕ್ಷ ಮೈನುದ್ದೀನ್, ಜಿಲ್ಲಾ ಕಾರ್ಯದರ್ಶಿ ಗಣೇಶ್ ಸಿಂಧೆ, ಬಸವರಾಜ್ ಬೀಜಕಲ್ ಹಾಗು ಗಣೇಶ್ ಅಮೃತ ಇದ್ದರು.

 

Leave a Reply

Your email address will not be published. Required fields are marked *

error: Content is protected !!