
ಭಾರತೀಯ ಅಂಚೆ ಇಲಾಖೆ ನಿಷ್ಠೆಗೆ ಹೆಸರಾದ ಇಲಾಖೆ – ಸಂಸದ ಸಂಗಣ್ಣ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ನಿಷ್ಠಾವಂತರಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಪ್ರಾಮಾಣಿಕರಾಗಿ ಇಲಾಖೆಯಲ್ಲಿ ನಮ್ಮ ಭಾರತೀಯ ಅಂಚೆ ಇಲಾಖೆ ನಿಷ್ಠೆಗೆ ಹೆಸರಾದ ಇಲಾಖೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಭಾರತೀಯ ಅಂಚೆ ಕಚೇರಿಯ ಕೊಪ್ಪಳ ಅಂಚೆ ವಿಭಾಗ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ನೋಡುವಂತೆ ಮಾಡಿದ್ದು ಪ್ರಧಾನಿ ಮೋದಿ ಅವರ ಕೊಡುಗೆ, ವಿಕಸಿತ ಭಾರತದ ಮೂಲಕ ದೂರ ದೃಷ್ಟಿಯಿಂದ ಸ್ವಾತಂತ್ರ್ಯ ಭಾರತ ಆರ್ಥಿಕವಾಗಿ ಬೆಳೆದು ನಿಂತಿದೆ.
ಸಂಪರ್ಕ ಸಾಧನೆಗೆ ಮೋದಿಅವರ ಕೊಡುಗೆ. ನೇಲ,ಜಲ ಮತ್ತು ವಾಯುಮಾರ್ಗ ಮೂರು ಮಾರ್ಗ ಕ್ರಾಂತಿ ಸಾಧಿಸಿ ವಿಶ್ವಕ್ಕೆ ಭಾರತ ಮಾದರಿಯಾಗಿದೆ.
ಮೋದಿಯವರ ಕಲ್ಪನೆ ಅಬ್ದುತ್ವಾಗಿದೆ ಜನ ಓಷದಿ, ಜಲ ಜೀವನ್ ಮುಖಾಂತರ ಮನೆ ಮನೆಗೆ ನೀರು , ಉಚಿತ ಗ್ಯಾಸ , ಶೌಚಾಲಯ ಸೇರಿದಂತೆ ನೂರಾರು ಯೋಜನೆ ನೀಡಿದ ದಿಮಂತ ನಾಯಕ ಎಂದರು.
ರೈತರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ರೈತರಿಗೆ ಮಾರುಕಟ್ಟೆ ಒದಗಿಸಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ರೈತ ಆರ್ಥಿಕವಾಗಿ ಸದೃಡರಾಗಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ.
ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್ , ರಾಜೇಂದ್ರ ಕುಮಾರ ಮಾತನಾಡಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಅವಿರತ ಶ್ರಮದಿಂದ ಕೊಪ್ಪಳ ವಿಭಾಗ ಆರಂಭವಾಗಿದೆ. ಅವರ ನಿರಂತರ ಪರಿಣಾಮದ ಫಲ ಜನತೆಗೆ ತಲುಪಿದೆ .
ಅಂಚೆ ಸೇವೆಯ ಜೋತೆಗೆ ವಿವಿಧ ಸೇವೆ ಜನರಿಗೆ ಹತ್ತಿರವಾಗುತಿದೆ. ಹಣಕಾಸಿನ ಸೇವೆ . ಸೌರ ಗರ್ ಯೋಜನೆ ಸದುಪಯೋಗ ಪಡೆಸಿ ಕೊಳ್ಳಿ.ಉಚಿತ ನೋಂದಣಿ , ಪ್ರತಿ ಮನೆಗೂ ವಿದ್ಯುತ್ 200 ಯುನಿಟ್ ಉತ್ಪಾದನೆ . ವಿಧ್ಯತ್ ಕೊರತೆ ಉಂಟಾಗುವುದಿಲ್ಲಾ ಕೇಂದ್ರ ಸರ್ಕಾರದ ಯೊಜನೆ ಸದುಪಯೋಗ ಪಡೆಸಿ ಕೊಳ್ಳಿ ಎಂದರು.
1997ರಲ್ಲಿ ಕೊಪ್ಪಳ ಸ್ವತಂತ್ರ ಜಿಲ್ಲೆಯಾಗಿದ್ದು, 2003ರಿಂದ ಗದಗ ಅಂಚೆ ವಿಭಾಗಕ್ಕೆ ಒಳಪಟ್ಟಿದೆ. ಪ್ರತ್ಯೇಕ ವಿಭಾಗ ರಚಿಸಬೇಕೆಂದು ಆಗಿನಿಂದಲೂ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂತಿಮವಾಗಿ 2024 ಜನೆವರಿ 17ರಂದು ಕೇಂದ್ರ ಸರ್ಕಾರ ಕೊಪ್ಪಳಕ್ಕೆ ಅಂಚೆ ವಿಭಾಗ ಮಂಜೂರು ಮಾಡಿದೆ. ಬರುವ ಏಪ್ರೀಲ್ 1ರಿಂದ ಅಧಿಕೃತವಾಗಿ ಕಾರ್ಯಾರಂಭವಾಗಲಿದೆ. ಈಗಾಗಲೇ ಕೊಪ್ಪಳ ತೋಟಗಾರಿಕೆ ಇಲಾಖೆ ಆವರಣದಲ್ಲಿನ ಕಟ್ಟಡ ನೀಡಿದ್ದಾರೆ.
ಕೊಪ್ಪಳ ವಿಭಾಗದಲ್ಲಿ ಒಂದು ಪ್ರಧಾನ ಅಂಚೆ ಕಚೇರಿ, 34 ಉಪ ಮತ್ತು ಗ್ರಾಮೀಣ ಭಾಗದಲ್ಲಿ 185ಶಾಖಾ ಅಂಚೆ ಕಚೇರಿಗಳಿವೆ. ಮೂರು ಉಪ ವಿಭಾಗಗಳಿವೆ. ಸಂಸದ ಸಂಗಣ್ಣ ಕರಡಿ ಸೇರಿ, ಅನೇಕ ಹೋರಾಟಗಾರರು, ಇಲಾಖೆ ನೌಕರರು, ಮಾಧ್ಯಮದವರ ಸಹಕಾರದಿಂದ ವಿಭಾಗ ಕಚೇರಿ ಮಂಜೂರಾಗಿದೆ ಎಂದರು .
ಬಿಡುಗಡೆ ; ಹುಲಿಗೆಮ್ಮ ದೇವಾಲಯದ ಅಂಚೆ ಚೀಟಿ ಬಿಡುಗಡೆ, ಸಾಧನೆ ಮಾಡಿದ ಇಲಾಖೆ ನೌಕರರಿಗೆ ಸನ್ಮಾನ ಇರಲಿದೆ. ಸಂಸದ ಸಂಗಣ್ಣ ಕರಡಿ, ಕರ್ನಾಟಕ ವೃತ್ತದ ಚ್ೀ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್, ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲುಮಾರ, ಅಂಚೆ ಸೇವೆ ನಿರ್ದೇಶಕಿ ವಿ.ತಾರಾ ಬಿಡುಗಡೆ ಗಿಸಿದರು.
ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ್ ಮಾತನಾಡಿ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಅಂಚೆ ಕಚೇರಿ ಸೇವೆ ಅಗತ್ಯವಾಗಿದೆ. ಆಧುನಿಕತೆ ಹಾಗೂ ಅಂಚೆ ಎರಡು ನಮ್ಮ ಜೀವನಕ್ಕೆ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಸುಶೀಲ್ ಕುಮಾರ್, ಅಂಚೆ ಸೇವೆಗಳ ನಿರ್ದೇಶಕ ಶ್ರೀಮತಿ ವಿ ತಾರ , ಗದಗ ವಿಭಾಗ ಅಂಚೆ ಅಧೀಕ್ಷಕ ನಿಂಗನಗೌಡ ಭಂಗಿಗೌಡ್ರ,ಅಂಚೆ ಅಧೀಕ್ಷಕರಾದ ನಿಂಗನಗೌಡ ಇತರರು ಇದ್ದರು.