ಭೋಗಾಪುರೇಶ್ವರ ದೇವಸ್ಥಾನಕ್ಕೆ ಕ್ಯಾವಟರ್ ಭೇಟಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ನವಲಿಯ ಐತಿಹಾಸಿಕ ಭೋಗಾಪುರೇಶ್ವರ ದೇವಸ್ಥಾನಕ್ಕೆ ಸೋಮವಾರ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನವಲಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಭೋಗಾಪುರೇಶ್ವರ ದೇವಸ್ಥಾನ ಪ್ರಸಿದ್ಧ ಪಡೆದಿದೆ. ಈ ಭಾಗದ ಆರಾಧ್ಯ ದೈವ ಭೋಗಾಪುರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಬಿಜೆಪಿ ಸದಾ ಸಿದ್ದವಿದೆ ಎಂದರು.
ಇದೇ ವೇಳೆ ಭೋಗಾಪುರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ರಥಕ್ಕೆ ಉತ್ತತ್ತಿ ಎಸೆದರು.
ಈ ವೇಳೆ ಬಿಜೆಪಿಯ ಮಂಡಲದ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ, ನವಲಿ ಬಿಜೆಪಿಯ ಹಿರಿಯ ಮುಖಂಡ ಪಂಚೆಯಸ್ವಾಮಿ ಸಿದ್ದನೂರಮಠ್, ಭೀಮನಗೌಡ ಹರ್ಲಾಪುರ, ಲಿಂಗಪ್ಪ ನಾಯಕ, ವೀರೇಶ್ ನಾಗವಂಶಿ, ನವಲಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಯ್ಯಸ್ವಾಮಿ, ಗ್ರಾಪಂ ಸದಸ್ಯ ದುರ್ಗಣ್ಣ ಭಜಂತ್ರಿ, ರಮೇಶ್ ಕಂಬಳಿ, ಸಂಗಮೇಶ್, ಜಡಿಯಪ್ಪ, ರಾಮಣ್ಣ ಗಾಳಿ, ಹನುಮಂತ ಕಾರಟಗಿ, ಮಂಜು ಹರ್ಲಾಪುರ ಮತ್ತಿತರರಿದ್ದರು.
