ಭೋವಿ ಕ್ಷೇಮಾಭಿವೃದ್ಧಿ ಸಂಘ
ಪರಶುರಾಮ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಭೋವಿ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ರವಿವಾರ ದಂದು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ನಿಂಗಪ್ಪ ಸುಣಗಾರ ಭೋವಿ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಭೋವಿ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಿದ್ಧರಾಮೇಶ್ವರ ಭೋವಿ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಪರಶುರಾಮ ಅಮರಾವತಿ, ಉಪಾಧ್ಯಕ್ಷರಾಗಿ ಗಾಳೆಪ್ಪ ಭೋವಿ ಗಂಗಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಭೋವಿ ಆಯ್ಕೆಯಾದರು.
ಸಂಘದ ಗೌರವಾಧ್ಯಕ್ಷರಾಗಿ ಸತ್ಯಪ್ಪಭೋವಿ ಗೌರಿಪುರ ಹಾಗೂ ರೇವಣಪ್ಪ ಮ್ಯಾಗೇರಿ , ಗುರಪ್ಪ ನಾಗನಕಲ್, ಹಳ್ಳಪ್ಪ ಭೋವಿ, ಯಮನೂರಪ್ಪ ಭೋವಿ, ಲಕ್ಷ್ಮಣ ಎನ್. ಭೋವಿ, ಸಂಗಪ್ಪ ಎಚ್.ಮಡಿಕೇರಿ, ಯಮನೂರಪ್ಪ ಜೀರಾಳ, ಯಲ್ಲಪ್ಪ ವೈ.ಗಾಣದಾಳ, ಭೀಮಜ್ಜ ಪಾಟೀಲ್ ಭೋವಿ ಜಿಲ್ಲಾ ಉಪಾಧ್ಯಕ್ಷ ರಾಗಿ, ನಿರುಪಾದಪ್ಪ ಬಿಜಕಲ್ ಸಹ ಕಾರ್ಯದರ್ಶಿಯಾಗಿ, ಹನುಮಂತಪ್ಪ ಕೋಳಿಹಾಳ ಸಂಘಟನಾ ಕಾರ್ಯದರ್ಶಿಯಾಗಿ, ತಿಮ್ಮಣ್ಣ ಭೋವಿ ಖಜಾಂಚಿಯಾಗಿ , ಬಸವರಾಜ ಭೋವಿ ಪರಶುರಾಮ ತಾವರಗೇರಿ (ಕಾನೂನು ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಿವೃತ್ತ ಪಿಎಸ್‌ಐ ಯಂಕಪ್ಪ ಭೋವಿ, ಮುತ್ತಣ್ಣ ಭೋವಿ, ಮುತ್ತಣ್ಣ ಭೈರಾನಾಯಕನಳ್ಳಿ, ಹನುಮಂತಪ್ಪ ಭೋವಿ, ಹುಲುಗಪ್ಪ ಭೋವಿ ಇಟಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
