ಮಂಗಗಳ ಆಹಾರಕ್ಕಾಗಿ ವಾನರ ವನ ನಿರ್ಮಾಣಕ್ಕೆ ಚಾಲನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 19- ತಾಲೂಕಿನ ಅಂಜನಾದ್ರಿ ಸುತ್ತಲಿನ ಬೆಟ್ಟದಲ್ಲಿ ವಾನರ ಸಂಖ್ಯೆ ಹೆಚ್ಚಿದ್ದು, ಮಂಗಗಳಿಗೆ ಆಹಾರ ಒದಗಿಸುವ ಉದ್ದೇಶದಿಂದ ವಾನರ ವನ ನಿರ್ಮಾಣ ಮಾಡಲಾಗುತ್ತಿದೆ ಎಂದು ದಂತ ವೈದ್ಯರು ಹಾಗೂ ಕಿಷ್ಕಿಂದ ಯುವ ಚಾರಣ ಬಳಗದ ಮಾರ್ಗದರ್ಶಕ ಡಾ.ಶಿವಕುಮಾರ್ ಮಾಲಿಪಾಟೀಲ್ ಹೇಳಿದರು.
ತಾಲೂಕಿನ ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತ ಬಳಿ ಕಿಷ್ಮಿಂದ ವನ ಅಭಿಯಾನದಡಿ ಆಯೋಜಿಸಿದ್ದ ವಾನರ ವನ ನಿರ್ಮಾಣ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿ ಕಿಷ್ಕಿಂದ ಗುಡ್ಡಗಾಡು ಪ್ರದೇಶದಲ್ಲಿ ಹಣ್ಣಿನ ಗಿಡಗಳು ಕಡಿಮೆ ಇದ್ದು, ವಾನರ ಸಂತತಿ ಉಳಿಸಲು ಈ ಪ್ರಯತ್ನ ಮಾಡಲಾಗುತ್ತಿದೆ.
ಎಲ್ಲರಿಂದಲೂ ಪರಿಸರ ಹಾನಿಯಾಗುತ್ತಿದ್ದು, ಪರಿಸರ ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ವಾನರ ವನ ನಿರ್ಮಾಣಕ್ಕೆ ತಾಲೂಕಿನ ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಕಿಷ್ಕಿಂದ ಯುವ ಚಾರಣ ಬಳಗದ ಪ್ರಮುಖರಾದ ಪ್ರಸನ್ನ ಮಿಶ್ರೀಕೋಟಿ ಅವರು ಮಾತನಾಡಿದರು.
ಕಿಷ್ಮಿಂದ ವನ ಅಭಿಯಾನದಡಿ ವಾನರ ವನ ನಿರ್ಮಾಣದ ಮೊದಲ ದಿನ ಬೆಳಂಬೆಳಗ್ಗೆ ಲಿವ್ ವಿತ್ ಹ್ಯುಮಾನಿಟಿ, ಕಿಷ್ಕಿಂದ ಯುವ ಚಾರಣ ಬಳಗ, ಸರ್ವೋಧಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ, ಗಂಗಾವತಿ ಚಾರಣ ಬಳಗ ಹಾಗೂ ಕಿಷ್ಕಿಂದ ಯುವ ಸೇನೆ ಸದಸ್ಯರ 50ಕ್ಕೂ ಜನರ ತಂಡದಿಂದ 226 ಗುಂಡಿಗಳನ್ನು ತೋಡಲಾಗಿದೆ. ಸತತ ಎರಡು ತಿಂಗಳು ಈ ಅಭಿಯಾನದಡಿ ಗುಂಡಿ ತೋಡಿ ಸಸಿ ನೆಡುವ ಯೋಜನೆ ರೂಪಿಸಿಕೊಂಡಿದ್ದಾರೆ.
ಕಿಷ್ಕಂದ ಟ್ರಸ್ಟ್ ಸಂಸ್ಥಾಪಕರಾದ ಶಮಾ ಪವಾರ್, ಪ್ರಮುಖರಾದ ಅರ್ಜುನ್ ಜಿ ಆರ್, ಹರನಾಯಕ, ನಾಗರಾಜ ದೇಸಾಯಿ, ರಮೇಶ ಕುಮಾರ್, ವೀರೇಶ ಹುಲಸನಟ್ಟಿ, ಪತ್ರಕರ್ತ ಮಂಜುನಾಥ ಗುಡ್ಲಾನೂರ್, ಸಂತೋಷ ಕುಂಬಾರ್, ಅಭಿಜಿತ್ ತಾಂಡೂರು, ಮಂಜುಳಾ, ಚನ್ನಬಸಪ್ಪ, ರಾಜು ಆನೆಗೊಂದಿ, ಹನುಮೇಶ, ನಾಗರಾಜ ಆನೆಗೊಂದಿ, ರಾಜಾಸಾಬ್ ಗುಮಗೇರಿ ಉಪಸ್ಥಿತರಿದ್ದರು.
