WhatsApp Image 2024-12-17 at 3.02.08 PM

ಮಂಗಳೂರಲ್ಲಿ 12ನೇ ವರ್ಷದ ಶ್ರೀ ವೀರಭದ್ರೇಶ್ವರ ಜಾತ್ರಾ

ಮಹೋತ್ಸವ ಹಾಗೂ ಗುಗ್ಗಳ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 17 – ಜಿಲ್ಲೆಯ ಮಂಗಳೂರು ಗ್ರಾಮದ ಶ್ರೀ ವೀರಭದ್ರೇಶ್ವರ 12ನೇ ವರ್ಷದ ಜಾತ್ರಾ ಮಹೋತ್ಸವ ಬೆಳಗ್ಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ವೀರಭದ್ರೇಶ್ವರನಿಗೆ ಅಭಿಷೇಕ ದಿವ್ಯ ಸಾನಿಧ್ಯ ಹಾಗೂ ಪೂಜಾ ಕಾರ್ಯಕ್ರಮದ ನೇತೃತ್ವ ಶ್ರೀ ಷ. ಬ್ರ. 108 ಪೂಜ್ಯಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅರಳಲೇ ಹಿರೇಮಠ ಮಂಗಳೂರ ಪೂಜ್ಯರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ನಂತರ ಸುಪ್ರಸಿದ್ಧ ಸೊರಟೂರಿನ ಶ್ರೀ ಮೃತ್ಯುಂಜಯ ಪುರವಂತರ ಸಂಘದ ವೀರಗಾಸಿ ಕಲಾತಂಡದವರಿಂದ ಗುಗ್ಗಳ ಕಾರ್ಯಕ್ರಮ ಜರುಗಿತು.

ಪುರವಂತರ ನೇತೃತ್ವದಲ್ಲಿ ವಿಧಿ ವಿಧಾನದ ಮೂಲಕ ದಾರದ ಮೂಲಕ ಭಕ್ತರು ಶಸ್ತ್ರ ಹಾಕಿಸಿಕೊಂಡರು ಭಕ್ತರು ತಮ್ಮ ನಾಲಿಗೆ, ಕೆನ್ನೆ, ಕೈ ಭಾಗ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಶಸ್ತ್ರ ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದರು. 101 ಸುಮಂಗಲೆಯರಿಂದ ಕುಂಭ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ವೀರಭದ್ರೇಶ್ವರನ ಭಾವಚಿತ್ರದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಶ್ರೀ ವೀರಭದ್ರೇಶ್ವರ ಕ್ಷೇಮಾಭಿವೃದ್ಧಿ ಸಂಘದವರು ಹಾಗೂ ವೀರಭದ್ರೇಶ್ವರ ದೇವರ ಸಕಲ ಸದ್ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರ, ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ಸರ್ವ ಸದಸ್ಯರು, ಗ್ರಾಮದ ಹಿರಿಯರಾದ ರೇವಣಸಿದ್ದಯ್ಯ ಅರಳಲೆ ಹಿರೇಮಠ, ಚನ್ನವೀರಯ್ಯ ಹಿರೇಮಠ, ಮಹಾಲಿಂಗಯ್ಯ ಹಿರೇಮಠ, ಶೇಖರಗೌಡ್ರ ಮಾಲಿಪಾಟೀಲ, ಶೇಖರಗೌಡ್ರ ಪೋಲೀಸಪಾಟೀಲ, ಶಿವಪುತ್ರಪ್ಪ ಶಿವಶಿಂಪಿ, ನೀಲಕಂಠಪ್ಪ ಗಾಳಿ, ಶಶಿಧರ ಹೂಗಾರ, ಶರಣಪ್ಪ ಉಮಚಗಿ, ವೀರಭದ್ರಪ್ಪ ಕುದ್ರಿಕೋಟಗಿ, ಈರಣ್ಣ ಎಮ್ಮಿ, ಮಂಗಳಪ್ಪ ಛಟ್ಟಿ, ವಿಶ್ವನಾಥ ಮರಿಬಸಪ್ಪನವರ, ಶಂಕ್ರಪ್ಪ ನಿಂಗಾಪುರ, ಪ್ರಭು ಕೀರ್ತಗೌಡ್ರ, ಮೃತ್ಯುಂಜಯ ಪಾಟೀಲ, ಬಸಣ್ಣ ಎಮ್ಮಿ, ಕೊಟ್ರೇಶ ಉಮಚಗಿ, ಮುದಕಪ್ಪ ಉಮಚಗಿ, ಭರತೇಶ ರೇವಡಿ, ವಿರೇಶ ಗಟ್ಟೆಪ್ಪ ಉಮಚಗಿ, ಈರಣ್ಣ ಉಮಚಗಿ, ಸುರೇಶ ಮಡಿವಾಳರ ಶಿಕ್ಷಕರು, ಗುರುರಾಜ ಇಲಕಲ್ಲ, ಮಂಜುನಾಥ ಛಟ್ಟಿ, ಸಿದ್ದನಗೌಡ್ರ ಕೀರ್ತಗೌಡ್ರ,ವೀರಭದ್ರಪ್ಪ ಎಮ್ಮಿ,ಮಹೇಶ ಕುಷ್ಟಗಿ ಶೆಟ್ಟರ್, ನಾಗರಾಜ ಕುಷ್ಟಗಿ ಶೆಟ್ಟರ್, ಮಂಗಳೇಶ ಕುಷ್ಟಗಿ ಶೆಟ್ಟರ್, ಬಸವರಾಜ ಪಟ್ಟಣಶೆಟ್ಟಿ, ಮಲ್ಲಪ್ಪ ಎಮ್ಮಿ, ಶರಣಪ್ಪ ಎಮ್ಮಿ, ಶಿವು ಉಮಚಗಿ, ಮಲ್ಲಪ್ಪ ಶಿವಶಿಂಪಿ, ವಿರೂಪಾಕ್ಷಪ್ಪ ಕೊಡ್ಲಿ, ಮಲ್ಲಪ್ಪ ಮರಿಬಸಪ್ಪನವರ, ಮೊದಲಾದವರು ಉಪಸ್ಥಿತರಿದ್ದರು.
ಮೆರವಣಿಗೆ ನಂತರ ಮಹಾಪ್ರಸಾದ ವ್ಯವಸ್ಥೆಯನ್ನು ವೀರಭದ್ರೇಶ್ವರ ಕಮಿಟಿಯವರು ಅಚ್ಚುಕಟ್ಟಾಗಿ ಮಾಡಿದ್ದರು. ಸಾಯಂಕಾಲ ಕಾರ್ತಿಕೋತ್ಸವ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *

error: Content is protected !!