WhatsApp Image 2024-12-17 at 9.46.45 AM

ಕೊಟ್ಟೂರೇಶ್ವರ ಕಾರ್ತೀಕೋತ್ಸವಕ್ಕೆ

ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ಚಾಲನೆ

ಕೊಟ್ಟೂರು( ವಿಜಯನಗರ ಜಿಲ್ಲೆ )ಡಿ.17: ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಕಾರ್ತಿಕೋತ್ಸವ ಪ್ರಯುಕ್ತ ಸೋಮವಾರ ಸಂಜೆ ಕ್ರಿಯಾಮೂರ್ತಿಗಳಾದ ಶಿವಪ್ರಕಾಶ ಕೊಟ್ಟೂರು ದೇವರು, ಉತ್ತಂಗಿ ಮಠದ ಶ್ರೀ ಸೋಮಶಂಕರ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಎ.ಎಸ್.ಪಿ. ಸಲೀಂಪಾಷ, ದೇವಸ್ಥಾನದ ಇಒ ಹನುಮಂತಪ್ಪ, ಧರ್ಮಕರ್ತ ಎಎಚ್‌ಎಂ ಶೇಖರಯ್ಯ ಸ್ವಾಮೀಜಿಗಳೊಂದಿಗೆ ಸಂಜೆ 6ಗಂಟೆ ಹೊತ್ತಿಗೆ ಪ್ರಣತಿಗಳಲ್ಲಿ ಎಣ್ಣೆ ಹಾಕಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಲಕ್ಷ ದೀಪೋತ್ಸವ: ಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ಶ್ರೀ ಕೊಟ್ಟೂರೇಶ್ವರ ಕಲ್ಯಾಣ ಮಂಟಪ ಸಮಿತಿಯವರು ಲಕ್ಷ ದೀಪೋತ್ಸವ ಆಯೋಜಿಸಿದ್ದರು. ತೇರುಗಡ್ಡೆಯಿಂದ ತೇರುಬೀದಿಯಲ್ಲಿ ದೀಪಗಳನ್ನು ಇರಿಸಿದ್ದರು.

ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಭಕ್ತರು ಎಣ್ಣೆ, ಬತ್ತಿ ಹಾಕಿ ದೀಪ ಬೆಳಗಿಸಿ, ಜೀವನದ ಕೆಟ್ಟ ದಿನಗಳು ಇನ್ನಿಲ್ಲವಾಗಲಿ ಎಂಬ ಸಂಕೇತ ಎಂಬಂತೆ ಬೆಂಕಿಗೆ ಕೊಬ್ಬರಿ ಹಾಕಿ ಸುಟ್ಟು ಭಕ್ತಿ ಸಮರ್ಪಿ

Leave a Reply

Your email address will not be published. Required fields are marked *

error: Content is protected !!