8

ಮಕ್ಕಳು ಉತ್ತಮ ಅಭ್ಯಾಸ ಮಾಡಿ ಉತ್ತಮ‌ ಭವಿಷ್ಯ ರೂಪಿಸಿಕೊಳ್ಳಬೇಕು

ಪುರಸಭೆ ಅಧ್ಯಕ್ಷ ಮಾಹಾಂತೇಶ ಕಲಬಾವಿ

ಕರುನಾಡ ಬೆಳಗು ಸುದ್ದಿ

ಕುಷ್ಟಗಿ, 06-  ತಂದೆ ತಾಯಿ ಹಾಗೂ ವಿದ್ಯ ಕಲಿಸಿದ ಗುರುಗಳು ಮಕ್ಕಳ ಭವಿಷ್ಯದ ಕನಸು ಕಾಣುತ್ತಾರೆ. ಅದರಂತೆ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ ಅತ್ತ್ಯುತ್ತಮ ಫಲಿತಾಂಶ ಪಡೆದು ಕನಸು ನನಸು ಮಾಡುವಲ್ಲಿ ಗಮನಹರಿಸಬೇಕು ಎಂದು ಪುರಸಭೆ ಅಧ್ಯಕ್ಷ ಮಾಹಾಂತೇಶ ಕಲಬಾವಿ ಹೇಳಿದರು.

ಅವರು  ಇಲ್ಲಿನ ಸರಕಾರಿ ಬಾಲಕಿಯರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಷ್ಟಗಿ ಯಲ್ಲಿ 2024-2025ನೇ ಸಾಲಿನ ಸರಸ್ವತಿ ಪೂಜೆ ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವದ ಸಮಾರಂಭದ ಉದ್ಘಾಟನಾ ಸಮಾರಂಭ ನೆರೆವರಿಸಿ ಮಾತನಾಡಿ ವಿದ್ಯಾರ್ಥಿ ಜೀವನವು ಅಮೂಲ್ಯವಾದದ್ದು, ಆಟ ಪಾಠಗಳ ಜೊತೆಗೆ ಗುರುಗಳ ಮಾರ್ಗದರ್ಶನದಿಂದ ಉತ್ತಮ‌ ಫಲಿಗಾಂಶ ಪಡೆದು ನಿಮ್ಮ ತಂದೆ ತಾಯಿಗೆ ಹಾಗೂ ಶಾಲೆಗೆ ಗೌರವ ತಂದು ಕೊಡಬೇಕು ಎಂದು ಹೇಳಿದರು.

ನಂತರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಕುರ್ನಾಳ, ನೌಕರರ ಸಂಘದ ನಿದೇರ್ಶಕ ಶರಣಪ್ಪ ತುಮರಿಕೊಪ್ಪ, ಬಿ.ಆರ್.ಸಿ ಡಾ.ಜೀವನಸಾಬ ಬಿನ್ನಾಳ ಕಾರ್ಯಕ್ರಮ ಕುರಿತು ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಳಕಮಲ್ಲೇಶ ಭೋಗಿ, ಸಿ.ಆರ್.ಪಿ ಸಂಘದ ತಾಲೂಕು ಅಧ್ಯಕ್ಷ ಸೋಮಲಿಂಗಪ್ಪ ಗುರಿಕಾರ, ಶಾಲಾ ಮುಖ್ಯೋಪಾಧ್ಯಾಯರಾದ ಸಿದ್ರಾಮಪ್ಪ ಅಮರಾವತಿ, ಎಸ್.ಡಿ‌.ಎಂ.ಸಿ ಉಪಾಧ್ಯಕ್ಷೆ ಪ್ರೇಮಾವತಿ ಬಸಾಪೂರ, ಸದಸ್ಯರಾದ ಬೀಮವ್ವ ಕಟ್ಟಿ, ಚನ್ನವ್ವ ಕೋರಿ, ಗುರುರಾಜ ಆಗೋಲಿ, ನಿಕಟಪೂರ್ವ ಸಾಹಿತ್ಯ ಪರಿಷತ್ತು ಅಧ್ಯಕ್ಷ ಉಮೇಶ ಹಿರೇಮಠ, ಶಿಕ್ಷಕರಾದ ಹನಮಗೌಡ ಗೌಡ್ರ, ಸುನೀತಾ ಹಾವೇರಿ, ವಿಜಯಲಕ್ಷ್ಮಿ ದೊಡ್ಡಮನಿ, ರೂಪಾ ಗುಡ್ಲಾನೂರ, ಸರಸ್ವತೆಮ್ಮ,ಪಾರ್ವತವ್ವ, ಶ್ರೀಮತಿ ವೀಣಾ ಸೊನ್ನದ್, ಸಹ ಶಿಕ್ಷಕರಾದ ಆನಂದ, ರಾಜೇಶ್ವರಿ ಬಡಿಗೇರ, ದೇವಮ್ಮ, ಸವಿತಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!