ಮಕ್ಕಳ ಸರ್ವತೋಮಖ ಬೆಳವಣಿಗೆ ಸದಾ ಸಿದ್ಧ : ಎ.ಎಸ್.ನನ್ಬಾಚ್
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 26- ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಶಿ ಸೀಡ್ಸ್ ಉಪಾಧ್ಯಕ್ಷ ಎ.ಎಸ್.ನನ್ಬಾಚ್ ಹೇಳಿದರು.
ತಾಲೂಕಿನ ಯಡ್ಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಶಿ ಸೀಡ್ಸ್ ವತಿಯಿಂದ ಸುಮಾರ ೧೭ ಲಕ್ಷ ರೂ.ವೆಚ್ಚದಲ್ಲಿ ನೂತನ ಭೋಜನಾಲಯ ಕಟ್ಟಡ ಉದ್ಘಾಟನಾ ಸಮಾರಂಭ ನೇರವೇರಿಸಿ ಸೋಮವಾರ ಮಾತನಾಡಿದರು.
ತಾಲೂಕಿನ ಹಿಂದುಳಿದ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಈ ಭಾಗದಲ್ಲಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂದ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ೬ ವರ್ಷದಿಂದ ೧೪ ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಹಿನ್ನೆಲೆ ಹಳ್ಳಿಯ ಪಾಲಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಶಾಲೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೀಡ್ಸ್ ಮುಖ್ಯ ಉತ್ಪಾದಕ ಕೆ.ಭಾಸ್ಕರ್ನ್, ರಾಶಿ ಸೀಡ್ಸ್ ಆರ್ಗನೇಜರ್ ಶರಣಪ್ಪ ಈಳಿಗೇರ್, ರಾಶಿ ಸೀಡ್ಸ್ ಡಿ.ಆರ್.ರಾಮಸ್ವಾಮಿ, ನಾರಯಣಪ್ಪ ಇರಕಲ್ಗಡ ನಿವೃತ್ತ ಮುಖ್ಯ ಶಿಕ್ಷಕ ಫಕೀರಪ್ಪಗೌಡ ನರಸಾಪೂರ, ಮುಖ್ಯ ಶಿಕ್ಷಕ ಮಹೇಶ ಟಿ., ಎಸ್ಡಿಎಂಸಿ ಅಧ್ಯಕ್ಷೆ ನಿಂಗಮ್ಮ ಧರೆಯಪ್ಪ ಗೊರ್ಲಿ, ಮುಖಂಡರಾದ ಮರಿಯಪ್ಪ ಹುಗ್ಗಿ ದಳಪತಿ, ಮಹೇಶ ಮಂಜುನಾಥ ಎಲ್.ರೊಟ್ಟಿ, ಸುಭಾಷ್ ಹುಗ್ಗಿ, ಮಂಜುನಾಥ ವಂದಾಲಿ, ಮುದಿಯಪ್ಪ ಹುಗ್ಗಿ, ಅಯ್ಯಪ್ಪ ಗುಳೇದ್, ಮುದುಕಪ್ಪ ವಂದಾಲಿ, ಶರಣಪ್ಪ ಗೂಡೂರ, ಹುಗ್ಗೇಶ ಹುಗ್ಗಿ, ಎಸ್ಡಿಎಂಸಿ ಸದಸ್ಯರು, ಗ್ರಾಮದ ಮುಖಂಡರು, ಶಾಲಾ ವಿದ್ಯಾರ್ಥಿಗಳು ಇನ್ನಿತರರು ಇದ್ದರು.
