WhatsApp Image 2024-02-15 at 5.14.57 PM

ಮಡಿವಾಳ ದ್ಯಾವಮ್ಮ ದೇವಿ ಕುಂಭೋತ್ಸವ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,15- ತಾಲೂಕು ತೆಕ್ಕಲಕೋಟೆ ಪಟ್ಟಣದಲ್ಲಿ ಮಡಿವಾಳ ದ್ಯಾವಮ್ಮ ದೇವಿಯ ಕುಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಐದು ವರ್ಷಗಳಿಗೊಮ್ಮೆ ಮಡಿವಾಳ ಸಮುದಾಯದವರು ದ್ಯಾವಮ್ಮ ದೇವಿಯ ಕುಂಭೋತ್ಸವವನ್ನು ಆಚರಿಸುತ್ತಾ ಬಂದಿದ್ದು ಮಡಿವಾಳ ಸಮಾಜದವರು ದ್ಯಾವಮ್ಮ ದೇವಿಗೆ 51 ಕುಂಭಗಳನ್ನು ಸಮರ್ಪಿಸಿದರು.

ಗಂಗೆ ಪೂಜೆ ನೆರವೇರಿಸಿ ಸಕಲ ಮಂಗಳ ವಾದ್ಯ ಮತ್ತು ಮುತ್ತೈದೆಯರ ಕಳಸದೊಂದಿಗೆ ತನು ಬಿಂದಿಗೆಯ ಮೆರವಣಿಗೆಯು ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು.

ಪೂಜಾರಿ ಆದ್ಯಪ್ಪ ಮನೆಯಿಂದ ಮೇಟಿ ಕುಂಭವನ್ನು ಮೆರವಣಿಗೆ ಮೂಲಕ ದೇವಿಗೆ ಕುಂಭ ಸಮರ್ಪಿಸಿ ನಂತರ ಕುಂಭಗಳನ್ನು ಮೆರವಣಿಗೆ ಮೂಲಕ ದೇವಿಗೆ ಅರ್ಪಿಸಿದರು

Leave a Reply

Your email address will not be published. Required fields are marked *

error: Content is protected !!