2c136fae-be38-4577-97e1-318669006cc9

ಮದರಸಾಗಳಿಗೆ ಔಪಚಾರಿಕ,

ಗಣಕೀಕೃತ ಶಿಕ್ಷಣ ನೀಡಲು ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ(ವಿಜಯನಗರ)ಜ.10 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ನೋಂದಾಯಿತ ಮದರಸಾಗಳಿಗೆ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣವನ್ನು ನೀಡಲು ಆಸಕ್ತ ಮದರಸಾಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮದರಸಾಗಳು ರಾಜ್ಯದಲ್ಲಿ ವಕ್ಫ್ ಅಥವಾ ಇತರೆ ಸಂಘ ಸಂಸ್ಥೆ ಕಾಯ್ದೆಯಡಿ ನೋಂದಾಯಿಸಿರಬೇಕು. ಮದರಸಾದಲ್ಲಿ 40 ಅರ್ಹ ವಿದ್ಯಾರ್ಥಿಗಳಿರಬೇಕು. ಮದರಸಾಗಳು ತರಗತಿ ಅಥವಾ ಕೊಠಡಿಗಳೊಂದಿಗೆ ವಸತಿ ಸೌಲಭ್ಯವನ್ನು ಹೊಂದಿರಬೇಕು. ಆಸಕ್ತ ಮದರಸಾ ಸಂಸ್ಥೆಯವರು ವೆಬ್ಸೈಟ್ https://dom.karnataka.gov.in ಮೂಲಕ ಅರ್ಜಿ ಸಲ್ಲಿಸಿ, ಅರ್ಜಿಯೊಂದಿಗೆ ಎಲ್ಲಾ ದಾಖಲೆಗಳೊಂದಿಗೆ ಹೊಸಪೇಟೆ ನಗರದ ಎಸ್.ಎಂ.ಎಸ್.ಕೆ ಪ್ಲಾಜ ಗುಗ್ರೀ ನರ್ಸಿಂಗ್ ಹೋಮ್ ಪಕ್ಕದಲ್ಲಿ ಅಂಬೇಡ್ಕರ್ ಸರ್ಕಲ್ ಹತ್ತಿರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಗೆ ಜನವರಿ 20ರೊಳಗಾಗಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆಯ ಅಂಬೇಡ್ಕರ್ ಸರ್ಕಲ್ ಹತ್ತಿರದ ಎಸ್‌ಎಮ್‌ಎಸ್‌ಕೆ ಪ್ಲಾಜಾದ ಜಿಲ್ಲಾ ಅಧಿಕಾರಿಗಳು/ಜಿಲ್ಲಾ ಮಾಹಿತಿ ಕೇಂದ್ರದ ಮೊ.8217355571, 8050435366 ಹಾಗೂ ಪರ್ವೇಜ್ ಪ್ಲಾಜಾ ಬಿಲ್ಡಿಂಗ್ 1ನೇ ಮಹಡಿ ಕಾಲೇಜು ರಸ್ತೆ ತಾಲ್ಲೂಕು ವಿಸ್ತರಣಾಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊ.8073250473, ಹರಪನಹಳ್ಳಿ ತಾಲ್ಲೂಕು ಪಂಚಾಯತ್ ಆವರಣ ಐ.ಬಿ. ಸರ್ಕಲ್ ಹತ್ತಿರ ತಾಲ್ಲೂಕು ವಿಸ್ತರಣಾಧಿಕಾರಿಗಳು/ತಾಲ್ಲೂಕು ಮಾಹಿತಿ ಕೇಂದ್ರದ ಮೊ.7676621339, 8494927891, ಹಡಗಲಿ ತಾಲ್ಲೂಕಿನ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಮೊ.7353696984, ಕೂಡ್ಲಿಗಿ ತಾಲ್ಲೂಕು ಪಂಚಾಯತ್ ಆವರಣದ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ.9060330060, ಹಗರಿಬೊಮ್ಮನಹಳ್ಳಿ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಮೊ.9980237242 ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!