20240212_120311 (1)

ವಿಜಯಪುರದಲ್ಲಿ ಮಹಿಳಾ ಕಾಲೇಜಿನ ವಿದ್ಯಾರ್ಥಿನೀಯರ ಚಿನ್ನದ ಸಾಧನೆ 

 

ಕರುನಾಡ ಬೆಳಗು ಸುದ್ದಿ

ಕೊಪ್ಪಳ,12- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ  ನಡೆದ 17ನೇ ಅಂತರ್ ಕಾಲೇಜು ಅಥಲೆಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನೀಯರು ಭಾಗವಹಿಸಿ ಚಿನ್ನದ ಪದಕಗಳನ್ನು ಪಡೆದುಕೊಂಡ್ಡಿದ್ದಾರೆ.

ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿದ ಜಿಲ್ಲೆಗಳ 42 ವಿವಿದ ಮಹಿಳಾ ಕಾಲೇಜುಗಳಿಂದ ಸುಮಾರು550ಕ್ಕೂಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಈ ಕ್ರೀಡಾಕೂಟದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ.ಐಶ್ವರ್ಯ ಬಿ ರಾಠೋಡ್ ಇವರು ಸರಪಳಿ ಗುಂಡು ಹೆಸೆತ  ಸ್ಪರ್ದೆಯಲ್ಲಿ ಭಾಗವಹಿಸಿ ಮೊದಲ ಎಸೆತದಲ್ಲಿಯೇ 20.65 ಮೀಟರ್ ದೂರ ಎಸೆದು ಕಳೆದ ಸಾಲಿನಲ್ಲಿ ಕುಮಾರಿ ದೀಪಾ ಕುಂದಗೋಳ ಎಸ್.ಜೆ.ಎಂ.ವಿ.ಎಸ್.ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವಿಜಯಪುರ ಇವರು 19.54 ಮೀಟರ್ ಎಸೆದು ನಿರ್ಮಿಸಿದ್ದ ಕ್ರೀಡಾ ದಾಖಲೆಯನ್ನು ಮುರಿದು ಕುಮಾರಿ ಐಶ್ವರ್ಯ ಬಿ ರಾಠೋಡ್ ಇವರು ತನ್ನ ಹೆಸರಿನ ಮೇಲೆ ಈ ಹೊಸಾ ಕ್ರೀಡಾ ದಾಖಲೆಯನ್ನು ನಿರ್ಮಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಇವರ ಈ ಕ್ರೀಡಾ ಸಾಧನೆಯನ್ನು ಮೆಚ್ಚಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯವು ಇವರನ್ನು ಸನ್ಮಾನಿಸಿ ೫೦೦೦ (ಐದು ಸಾವಿರ) ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದೆ. ಅದೇರೀತಿ ನಮ್ಮ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಕುಮಾರಿ. ದೇವಮ್ಮ ಇವರು 10000(ಹತ್ತು ಸಾವಿರ) ಮೀಟರ್ ಓಟವನ್ನು 53:36.18ನಿಮಿಷಗಳಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ ಹಾಗೂ 5000 ಮೀಟರ್ ಓಟವನ್ನು26:46.41 ನಿಮಿಷಗಳಲ್ಲಿ ಪೂರ್ಣಗೊಳಿಸಿ ನಾಲ್ಕನೇಯ ಸ್ಥಾನವನ್ನು ತನ್ನದಾಗಿಸಿಕೊಂಡ್ಡಿದ್ದಾರೆ ಹಾಗೆಯೇ ಕುಮಾರಿ. ಮಂಜುಳಾ ಉದ್ದ ಜಿಗಿತ ಸ್ಪರ್ದೆಯಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನವನ್ನುಗಳಿಸಿದ್ದಾರೆ.

ವಿದ್ಯಾರ್ಥಿನೀಯರ ಈ ಸಾಧನೆಯನ್ನು ಮೆಚ್ಚಿ ಸೊಮವಾರದಂದು ಕಾಲೇಜಿನಲ್ಲಿ ಸದರಿ ವಿದ್ಯಾರ್ಥಿನೀಯರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ವಿದ್ಯಾರ್ಥಿನೀಯರಿಗೆ ಹೊಸ ಟ್ರಾಕ್‌ಸೂಟ್ ಹಾಗೂ ಕ್ರೀಡಾ ಶೂಗಳನ್ನು ನೀಡಿ ಗೌರವಿಸಲಾಯಿತು. ಇದೇರೀತಿ ಕ್ರೀಡೆಯಲ್ಲಿ ಇನ್ನುಹೆಚ್ಚು ಸಾಧನೆಯನ್ನು ಮಾಡಿ ರಾಷ್ಟೀಯ ಮಟ್ಟದಲ್ಲಿ ನಮ್ಮ ಕಾಲೇಜಿನ ಹೆಸರು ರಾರಾಜಿಸುವಂತೆ ಮಾಡಲಿ ಎಂದು ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರದೀಪ್ ಕುಮಾರ್ ಯು ಇವರು ನಮ್ಮ ಕಾಲೇಜಿನಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿನೀಯರು ವ್ಯಾಸಂಗಮಾಡುತ್ತಿದ್ದು ಸದರಿ ವಿದ್ಯಾರ್ಥಿನೀಯರು ದೈಹಿಕವಾಗಿ ಹೆಚ್ಚು ಸದೃಢರಾಗಿರುತ್ತಾರೆ ಹಾಗೂ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಇಂತಹ ವಿದ್ಯಾರ್ಥಿನೀಯರಿಗೆ ಕ್ರೀಡೆಯ ಕೌಶಲ್ಯಗಳನ್ನು ಹಾಗೂ ನೈಪುಣ್ಯತೆಗಳನ್ನು ಕಲಿಸಿಕೊಟ್ಟರೆ ಸಾಕು ಅವರು ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬಹುದು ಇದಕ್ಕೆ ನೇರ ಉದಾಹರಣೆ ಎಂದರೆ ಐಶ್ವರ್ಯ ಬಿ ರಾಠೊಡ್ ಹಾಗೂ ದೇವಮ್ಮ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣಪತಿ ಕೆ ಲಮಾಣಿ ಇವರು ವಹಿಸಿಕೊಂಡು ಮಾತನಡುತ್ತಾ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಪಾಲ್ಗೊಂಡು ಸಾದನೆ ಮಾಡಿದರೆ ಅವರಿಗೆ ಸರಕಾರಿ ನೌಕರಿಯಲ್ಲಿ ೨ ಪ್ರತೀಶತ ಕ್ರೀಡಾ ಕೋಟ ದೊರೆಯುತ್ತದೆ ಅದನ್ನು ಉಪಯೋಗಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಹುಲಿಗೆಮ್ಮ ಬಿ ಇವರು ಮಾತನಾಡುತ್ತಾ ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸೊಲು ಗೆಲುವಿನ ಅರಿವು ಅವರಿಗಾಗುತ್ತದೆ ಇದು ಅವರ ವಯಕ್ತಿಕ ಜೀವನದಲ್ಲಿಯೂ ಉಪಯೋಗಕ್ಕೆ ಬರುತ್ತದೆ. ಸೊಲು ಗೆಲುವನ್ನು ಸಮನಾಗಿ ತೆಗೆದುಕೊಳ್ಳುವ ಮಾನಸಿಕತೆ ಅವರಿಗೆ ಬರುತ್ತದೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀ.ವಿಠೋಬಾ.ಎಸ್. ಶ್ರೀಮತಿ ನಾಗರತ್ನ ಬಿ ತಮ್ಮಿನಾಳ, ಶ್ರೀ ಶ್ರೀಕಾಂತ್ ಸಿಂಗಾಪುರ, ಶ್ರೀ ಉಮೇಶ್ ಕಾತರಕಿ ಹಾಗೂ ಇತರರು ಇದ್ದರು, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ನರಸಿಂಹ ಸ್ವಾಗತಿಸಿದರು, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರದೀಪ್ ಕುಮಾರ್ ಯು ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!