
ಯಲಬುರ್ಗಾ : ನಗರ ಕಲಿಕಾ ಪ್ರಾಯೋಗಿಕ ತರಬೇತಿಗೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಯಲಬುರ್ಗಾ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಡೇ ನಲ್ಮ್ ಅಭಿಯಾನ ಮತ್ತು ಪಿ.ಎಂ ಸ್ವನಿಧಿ ಯೋಜನೆ ಅಡಿಯಲ್ಲಿ ನಗರ ಕಲಿಕಾ ಮತ್ತು ಪ್ರಾಯೋಗಿಕ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಲಿಕಾ ಮತ್ತು ಪ್ರಾಯೋಗಿಕ (ಟಿ.ಯು.ಎಲ್.ಐ.ಪಿ – ದಿ ಅರ್ಬನ್ ಲರ್ನಿಂಗ್ ಇಂಟರ್ನ್ಶಿಪ್ ಪ್ರೋಗ್ರಾಂ) ತರಬೇತಿ ಕಾರ್ಯಕ್ರಮವನ್ನು 2024-25ನೇ ಸಾಲಿಗೆ ಅನುಷ್ಠಾನಗೊಳಿಸಲು ಸರಕಾರದಿಂದ 03 ಗುರಿಗಳನ್ನು ನಿಗದಿ ಪಡಿಸಲಾಗಿದ್ದು, ಬೀದಿ ಬದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡುವುದು, ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಡುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ.
ಯಲಬುರ್ಗಾ ಪಟ್ಟಣ ಪಂಚಾಯತ ವ್ಯಾಪ್ತಿಯ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳೊಂದಿಗೆ ಜುಲೈ 10 ರೊಳಗಾಗಿ ಕೇಂದ್ರ ಸರ್ಕಾರದ ವೆಬ್‌ಸೈಟ್ Ministry of Housing and Urban Affairs ನಲ್ಲಿ https://internship.aicte-india.org/module_ulb/Dashboard/TulipMain/ರ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಅರ್ಜಿ ಸಲ್ಲಿಸುವಂತೆ ಯಲಬುರ್ಗಾ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.