IMG-20240314-WA0013

ಯಶಸ್ವಿನಿ ಟ್ರಸ್ಟ್ ನೇತೃತ್ವದಲ್ಲಿ, ಕುಡಿಯುವ ನೀರಿನ ಕೇಂದ್ರ ಪ್ರಾರಂಭ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,14- ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಬೇಸಿಗೆಯಲ್ಲಿ, ಜನರ ಅನುಕೂಲಕ್ಕಾಗಿ ಕುಡಿಯುವ ನೀರಿನ ಕೇಂದ್ರ ಪ್ರಾರಂಭಿಸಿ ಬೇಸಿಗೆ ಕಾಲದಲ್ಲಿ ತಣ್ಣನ ಕುಡಿಯುವ ನೀರಿನ ಸೇವೆ ಮಾಡುತ್ತಿರುವುದಾಗಿ, ಟ್ರಸ್ಟಿನ ಕಾರ್ಯದರ್ಶಿ, ನೋಸಂ ಶ್ರೀನಿವಾಸ್ ತಿಳಿಸಿದರು.

ನಗರದ 13ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಗಂಗಪ್ಪ ಜಿನ್ನಾ ಏರಿಯಾದಲ್ಲಿ ಸೋಮವಾರ ಕುಡಿಯುವ ನೀರಿನ ಕೇಂದ್ರವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜನ ಸೈನ್ಯ ರಾಜ್ಯಧ್ಯಕ್ಷರು ಕೆ ಎರಿಸ್ವಾಮಿ ಮಾತನಾಡುತ್ತಾ, ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಕಾರಣ ಇಂತಹ ಕುಡಿಯುವ ನೀರು ಘಟಕ ಸಮಾಜ ಸೇವಾ ಸಂಘಗಳು ಪ್ರಾರಂಭಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರು, ಪ್ರತಿಮಾ, ಖಜಾಂಜಿ, ಭಿ ರಮೇಶ್ ಮತ್ತು, ಸ್ಥಳೀಯ ಮುಖಂಡರು ಜನರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!