IMG-20240625-WA0095

ಯಶಸ್ವಿ ಜೀವನಕ್ಕೆ ಕಠೀಣ ಪರಿಶ್ರಮ ಅಗತ್ಯ. : ಮಹೇಶ ಪಟ್ಟೇದ

ಕರುನಾಡ ಬೆಳಗು ಸುದ್ದಿ

ಕೊಪಳ, 25- ಜೀವನದಲ್ಲಿ ಯಶಸ್ವಿಯಾಗಲು ಶಾರ್ಟ್ಕಟ್ ದಾರಿ ಇಲ್ಲ. ಸತತ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಕೊಪ್ಪಳದ ಭೂಮಿ ಸ್ಟಡಿ ಸರ್ಕಲ್‌ನ ನಿರ್ದೇಶಕ ಮಹೇಶ ಪಟ್ಟೇದ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುನಲ್ಲಿ ಮಂಗಳವಾರದAದು ಕಾಲೇಜಿನ ಐಕ್ಯೂಎಸಿ ಹಾಗೂ ಉದ್ಯೋಗ ಕೋಶ ಘಟಕಗಳ ಮತ್ತು ಕೊಪ್ಪಳದ ಭೂಮಿ ಸ್ಟಡಿ ಸರ್ಕಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಗಳನ್ನು ವಿದ್ಯಾರ್ಥಿಗಳು ಕೇಳಿ ಅವುಗಳನ್ನು ಉಪಯೋಗಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕು. ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತ ಅನ್‌ಲೈನ್ ತರಗತಿಗಳು ನಡೆಯುತ್ತಿರುತ್ತವೆ. ಅವುಗಳಳನ್ನು ನೀವು ಕೇಳಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಪ್ರತಿದಿನ ಪತ್ರಿಕೆಗಳನ್ನು ಓದಿ. ಗ್ರಂಥಾಲಯದಲ್ಲಿ ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪುಸ್ತಕಗಳನ್ನು ಓದಿ. ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮಲ್ಲಿ ಛಲವಿರಬೇಕು. ಆಗ ಮಾತ್ರ ಗುರಿ ಮುಟ್ಟುವುದಕ್ಕೆ ಸಾಧ್ಯ. ತಂದೆ ತಾಯಿಗಳಿಗೆ ಕೀರ್ತಿ ತರಬೇಕು. ಪ್ರತಿಯೊಂದು ಸರಕಾರಿ ಹುದ್ದೆಗಳಿಗೆ ಅರ್ಜಿ ಹಾಕಿದ ನಂತರ ಸತತವಾಗಿ ವಿದ್ಯಾಬ್ಯಾಸ ಮಾಡಿ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಬೆಳಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಾರತ್ಮಕ ಅಂಕಗಳುಯಿರುವುದರಿAದ ಗೊತ್ತಿರುವ ಪ್ರೆಶ್ನೆಗಳಿಗೆ ಮಾತ್ರ ಉತ್ತರಿಸಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉದ್ಯೋಗ ಕೋಶ ಘಟಕದ ಸಂಚಾಲಕರಾದ ಶ್ರೀ ವಿಠೋಬ ಅವರು ಇಂದು ಸ್ಪರ್ಧೆ ಹೆಚ್ಚು ಇದೆ. ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದರಿಂದ ಉದ್ಯೋಗಳು ಸಿಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಆಗಬೇಕು. ಸಂವಹನ ಕಲೆ ಇರಬೇಕು. ಎಲ್ಲರಲ್ಲೂ ಕೂಡ ಕಲೆಯಿರುತ್ತದೆ. ಅದನ್ನು ನಿವು ಉಪಯೋಗ ಮಾಡಿಕೊಳ್ಳಬೇಕು.

ಇಂದು ಜನ ಮತ್ತು ಸಂಸ್ಥೆಗಳು ಸಮಸ್ಯೆಗಳಿಗೆ ಬಹುಬೇಗನೆ ಪರಿಹಾರವ್ನು ಬಯುಸುತ್ತಿದ್ದಾರೆ. ಆದ್ದರಿಂದ ಈ ನಿಟ್ಟಿನಲ್ಲಿ ನೀವು ವಿಧ್ಯಾಬ್ಯಾಸ ಮಾಡಬೇಕು. ಪದವಿ ಮುಗಿದ ನಂತರ ನಿಮ್ಮ ಬದಕನ್ನು ನೀವೇ ಕಟ್ಟಿಕೊಳ್ಳಬೇಕು. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಗಣಪತಿ ಕೆ ಲಮಾಣಿಯವರು ಪದವಿಯಲ್ಲಿ ಹೆಚ್ಚು ಅಂಕಗಳು ಪಡೆದರೆ ಮಾತ್ರ ಸರಕಾರಿ ಉದ್ಯೋಗ ಸಿಗುವುದಿಲ್ಲ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಪಡೆದರೆ ಮಾತ್ರ ಸರಕಾರಿ ಉದ್ಯೋಗಳು ಸಿಗುತ್ತವೆ. ಎಲ್ಲರು ಉನ್ನತ ಶಿಕ್ಷಣ ಪಡೆಯಬೇಕು. ಓದುವುದನ್ನು ಯಾವುದೇ ಕಾರಣಕ್ಕೆ ನಿಲ್ಲಿಸಿಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಅಶೋಕ ಕುಮಾರ, ದೈಹಿಕ ಶಿಕ್ಷಣ ಭೋಧಕ ಡಾ.ಪ್ರದೀಪ್ ಕುಮಾರ ಮತ್ತು ಪತ್ರಿಕೊದ್ಯಮ ವಿಭಾಗದ ಡಾ. ನರಸಿಂಹ ಹಾಗೂ ಅತಿಥಿ ಉಪನ್ಯಾಸಕರು ಇದ್ದರು. ರೇವತಿ ಪ್ರಾರ್ಥಿಸಿದರು. ವಿಠೋಬ ಸ್ವಾಗತಿಸಿ ನಿರೂಪಿಸಿದರು. ನಿಂಗಜ್ಜ ಸೊಂಪುರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!