
ಯಾವುದೇ ಆಸೆ ಅಮಿಷಕ್ಕೆ ಒಳಗಾಗದೆ ನಿಮ್ಮ ಹಕ್ಕು ಚಲಾಯಿಸಿ : ಬಿ.ರಾಜೇಶ್ವರಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,29- ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳ ಮತದಾನ ಅಂಚೆ ಪತ್ರ ಚಳುವಳಿ ಕಾರ್ಯಕ್ರಮ ಯಾವುದೇ ಆಸೆ ಅಮಿಷಕ್ಕೆ ಒಳಗಾಗದೆ ನಿಮ್ಮ ಹಕ್ಕು ಚಲಾಯಿಸಿ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ. ರಾಜೇಶ್ವರಿ ಹೇಳಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಇಂದ ಲೋಕಸಭಾ ಚುನಾವಣಾ-2024 ಚುನಾವಣಾ ಪರ್ವ ದೇಶದ ಗರ್ವ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳ ವಿದ್ಯಾರ್ಥಿಗಳಿಂದ ಪತ್ರ ಚಳುವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ ಅವರು ಮಾತನಾಡುತ್ತಾ ವಸತಿ ನಿಲಯದ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿ ಗುರು ಹಿರಿಯರಿಗೆ ಅಂಚೆ ಮೂಲಕ ಪತ್ರಗಳನ್ನು ಬರೆದು ಕಡ್ಡಾಯವಾಗಿ ಮೇ 7 ರಂದು ಮತದಾನ ಮಾಡುವುದು ಎಲ್ಲರ ಆಧ್ಯ ಕರ್ತವ್ಯ ಹಾಗೂ ಜವಾಬ್ದಾರಿಯು ಆಗಿದೆ ಎಂಬುದು ಜಾಗೃತಿ ಮೂಡಿಸಿದ್ದಕ್ಕೆ ಮತ್ತು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿಮ್ಮ ಹಕ್ಕು ಚಲಾಯಿಸಿ ಬೇಕು ಎಂದು ಪತ್ರಗಳು ಬರೆದಿದ್ದಕ್ಕೆ ಅವರು ಶ್ಲಾಘಿಸಿದರು.
ತಾಲೂಕ ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ ಅವರು ಮಾತನಾಡಿ ವಿದ್ಯಾರ್ಥಿಗಳು ತಂದೆ-ತಾಯಿ ಬಂದು ಬಳಗದವರಿಗೆ ಮತದಾನ ಜಾಗೃತಿ ಅಂಚೆ ಮೂಲಕ ಪತ್ರ ಬರೆದು ಗಮನ ಸೆಳೆದುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ ವಸತಿ ಶಾಲೆಗಳ ಶಿಕ್ಷಕ ಶಿಕ್ಷಕಿಯರು ಮಕ್ಕಳು ಇದ್ದರು.