WhatsApp Image 2024-02-13 at 6.49.02 PM

ಸುಸ್ತಿಸಾಲದ ಅಸಲು ಕಟ್ಟಿದರೇ ಬಡ್ಡಿ ಮನ್ನಾ :  P.L.D.ಬ್ಯಾಂಕಿನ ಅಧ್ಯಕ್ಷ ಗವಿಸಿದ್ದಪ್ಪ ಹುಳ್ಳಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 13- ರಾಜ್ಯದ ಮುಖ್ಯಮಂತ್ರಿಗಳ ಆಶಯದಂತೆ ರೈತರು ತಮ್ಮ ಸುಸ್ತಿ ಅಸಲು ಪಾವತಿಸಿದರೇ ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೆ ಬಂದಿದ್ದು, ಪಿ.ಎಲ್.ಡಿ ಬ್ಯಾಂಕ ಕೊಪ್ಪಳ ಇದರಲ್ಲಿ ಮದ್ಯಮಾವಧಿ, ದೀರ್ಘಾವಧಿ ಸಾಲ ಪಡೆದು ಸುಸ್ತಿಯಾಗಿರುವ ರೈತ ಸದಸ್ಯರುಗಳು ಈ ಸುವರ್ಣವಕಾಶವನ್ನು ಬಳಸಿಕೊಂಡು ಅಸಲನ್ನು ಪಾವತಿಸಿ ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆಯಲು ಕೊಪ್ಪಳ ತಾಲೂಕಿನ ರೈತರಲ್ಲಿ P.L.D.ಬ್ಯಾಂಕಿನ ಅಧ್ಯಕ್ಷ ಗವಿಸಿದ್ದಪ್ಪ ಹುಳ್ಳಿ ವಿನಂತಿಸಿದ್ದಾರೆ.

ಈಕುರಿತು ಪ್ರಕಟಣೆ ನೀಡಿರುವ ಅವರು ರೈತರು ಫೆಬ್ರುವರಿ 29 ಆಗಿರುತ್ತದೆ.ಆದ್ದರಿಂದ ಗಡುವಿನ ದಿನಾಂಕದೊಳಗೆ ತಾವುಗಳು ಪಡೆದಂತ ಕೃಷಿ ಆಧಾರಿತ ಮದ್ಯಮಾವಧಿ/ ದೀರ್ಘಾವಧಿಯ ಸಾಲಗಳ ಅಸಲನ್ನು ಪಾವತಿಸಿ ಬಡ್ಡಿ ಮನ್ನಾ ಅವಕಾಶವನ್ನು ಬಳಸಿಕೊಳ್ಳಲು ರೈತರಲ್ಲಿ ವಿನಂತಿಸಿದ್ದಾರೆ.

ನಮ್ಮ ಪಿಕಾರ್ಡ ಬ್ಯಾಂಕಿನ ಸಾಲ ಪಡೆದು ಸುಸ್ತಿಯಾದ ಸಾಲಗಾರರು 160 ಜನರಿಂದ ರೂ: 172.50 ಲಕ್ಷ ಸುಸ್ತಿ ಅಸಲು ಬರಬೇಕಾಗಿದೆ. ಅಸಲು ಕಟ್ಟಿದರೇ ಬಡ್ಡಿ ಮನ್ನಾ ಸೌಲಭ್ಯ ರೂ: 145.95 ಲಕ್ಷ ಇದ್ದು. ರೈತರು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ಹಾಗೂ ಈ ಬಡ್ಡಿ ಮನ್ನಾ ಸೌಲಭ್ಯವನ್ನು ಬ್ಯಾಂಕಿನ ಸಾಲಗಾರರು ಸದ್ಬಳಕೆ ಮಾಡಿಕೊಂಡು ಸಾಲದಿಂದ ರೈತರು ಋಣಮುಕ್ತರಾಗುವಂತೆ ಬ್ಯಾಂಕಿನ ಅಧ್ಯಕ್ಷ ಗವಿಸಿದ್ದಪ್ಪ ಹುಳ್ಳಿ ಕೋರಿದ್ದರೆ.

Leave a Reply

Your email address will not be published. Required fields are marked *

error: Content is protected !!