ಯುವಕರಲ್ಲಿ ತಂಬಾಕಿನಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 31- ಯುವಕರು ಹೆಚ್ಚಿನ ರೀತಿಯಲ್ಲಿ ಬೀಡಿ ಸಿಗರೇಟ್ ಗುಟಗಾ ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳು ಬರುತ್ತವೆ. ಇದರ ಬಗ್ಗೆ ಯುವಕರಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸಿದಾಗ ಮಾತ್ರ ತಂಬಾಕು ವ್ಯಸನವನ್ನು ದೂರವಾಗಬಹುದು ಎಂದು ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಮಜೀದ್ ಹೇಳಿದರು.
ಪಟ್ಟಣದ ಗವಿಸಿದ್ದೇಶ್ವರ ಪ್ಯಾರ ಮಡಿಕಲ್ ಕಾಲೇಜ್ ಸಭಾಂಗಣದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಯಲಬುರ್ಗಾ, ತಾಲ್ಲೂಕ ಆರೋಗ್ಯ ಇಲಾಖೆ, ಜನನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ತರಲಕಟ್ಟಿ, ಪೋಲಿಸ್ ಇಲಾಖೆ, ಅಭಿಯೋಜನಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ನಿಷೇಧ ದಿನ’ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕು. ಇದರಿಂದ ತಂಬಾಕು ರಹಿತ ಸಮಾಜ ಕಟ್ಟಲು ಸಾಧ್ಯ. ತಂಬಾಕಿನಿಂದ ಮಾರಕ ರೋಗಗಳಿಗೆ ತುತ್ತಾಗಿ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ಅರಿವು ಮೂಡಿಸಿದರೆ ಭವಿಷ್ಯದಲ್ಲಿ ಅವರು ತಂಬಾಕು ಸೇವನೆಯಿಂದ ದೂರ ವಿರಬಹುದು ಎಂದರು.
ತಾಲೂಕ ಆರೋಗ್ಯಾಧಿಕಾರಿ ಡಾ.ರಚನಾ ಮಾತನಾಡಿ ತಂಬಾಕು ಬಳಕೆಯಿಂದ ಪ್ರತಿವರ್ಷ ಕೋಟ್ಯಂತರ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಪ್ರಾಣ ಮತ್ತು ಜೀವನ ಅಮೂಲ್ಯವೆಂದು ಇನ್ಯಾವಾಗ ಅರಿವಾಗುತ್ತದೆ. ಧೂಮಪಾನ ಮುಕ್ತ ವಾತಾವರಣ ವ್ಯಸನಿಗಳಿಂದ ಸಾಧ್ಯವಿದೆ. ಪ್ರತಿ ವರ್ಷ ಮೇ.31ರಂದು ವಿಶ್ವತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ತಂಬಾಕಿನ ದುಷ್ಪರಿಣಾಮ ಮತ್ತು ಸೇವನೆಯನ್ನು ಕಡಿಮೆ ಮಾಡುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಇಲಾಖೆಗಳು ಮತ್ತು ಸಂಘ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ ವಿದ್ಯಾರ್ಥಿ ದಿಸೆಯಲ್ಲೇ ತಂಬಾಕಿನ ಪದಾರ್ಥಗಳಾದ ಬೀಡಿ,ಸಿಗರೇಟ್, ಗುಟ್ಟಾ, ಗಾಂಜಾ, ಅಫೀಮು, ಮತ್ತು ಬರುವ ಪದಾರ್ಥಗಳ ಸೇವೆನೆಯಿಂದ ದೂರವಿರುವಂತೆ ಜಾಗೃತಿ ಮೂಡಿಸುವುದು ಉತ್ತಮ. ಧೂಮಪಾನ ವ್ಯಸನಿಗಳು ಯುವಕರು ದುಷ್ಚಚಟಗಳನ್ನು ಮಾಡಿ ತಮ್ಮಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ ಜೋತೆಗೆ ಇತರರ ಆರೋಗ್ಯವನ್ನು ಹಾಳು ಮಾಡುತ್ತಾರೆ ಆದದರಿಂದ ಯುವಕರು ದುಷ್ಟಚಟಗಳನ್ನು ಬಿಟ್ಟು ಒಳ್ಳೆಯ ವ್ಯಕ್ತಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೂಳ್ಳಿ.ಎಂದು ಹೇಳಿದರು.
ವಕೀಲರ ಸಂಘದ ತಾಲೂಕ ಅಧ್ಯಕ್ಷ ಪ್ರಕಾಶ ಬೇಲೇರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಶಿಮರದ ,ಅಪರ ಸರಕಾರಿ ವಕೀಲ ಮಲ್ಲನಗೌಡ ಎಸ್.ಪಾಟೀಲ್ ಮಾತನಾಡಿದರು, ತರಲಕಟ್ಟಿ ಜನನಿ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ರಂಗನಾಥ ವಲ್ಮಕೊಂಡಿ ವಕೀಲರ ಸಂಘದ ಕಾರ್ಯದರ್ಶಿ ಈರಣ್ಣ ಕೋಳೂರು. ಪ್ರಾಂಶಪಾಲ ಪ್ರಾಣೇಶ ವಲ್ಮಕೊಂಡಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.
