IMG-20240329-WA0012

ಯುವ ಮತದಾರರ ಆಕರ್ಷಣೆಗಾಗಿ ತಾಲೂಕ ಸ್ವೀಪ್ ಸಮಿತಿಯಿಂದ ಕ್ರಿಕೆಟ್ ಪಂದ್ಯಾವಳಿ

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ,29-  ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 80% ಮತದಾನದ ನಿರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡ್ಯೆ ಹೇಳಿದರು.

ಯಲಬುರ್ಗಾ ಕ್ಷೇತ್ರದಲ್ಲಿ 5286 ಯುವ ಮತದಾರರು ಹಾಗೂ 3249 ವಿಶೇಷ ಚೇತನರು ನೋಂದಣಿ ಯಾಗಿದೆ ಅವರಿಂದ ಕಡ್ಡಾಯ ಮತದಾನದ ಉದ್ದೇಶ ಮತ ಕೇಂದ್ರಕ್ಕೆ ಹೋಗಲು ವಿಶೇಷ ಚೇತನಿಗೆ ವಾಹನದ ವ್ಯವಸ್ತೆ ಸಕ್ಷಮ ಯಾಪ್ ಸಹಾಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ-2024 ಯಲ್ಲಿ ಯುವ ಮತದಾರರು ಹಾಗೂ ವಿಶೇಷ ಚೇತನರ ಮತದಾನದ ಪ್ರಮಾಣ ಹೆಚ್ಚಿಸಲು ಈ ಬಾರಿ ವಿಶೇಷವಾಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮುಖ್ಯಕಾಯ೯ ನಿವಾ೯ಹಕ ಅಧಿಕಾರಿಗಳು ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೆ ಹೇಳಿದರು.

ಯುವ ಮತದಾರರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರಂತರವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಮಾಡಿ ಹಮ್ಮಿಕೊಂಡಿದ್ದರಿಂದ ಶೇಕಡಾ 2% ಹೆಚ್ಚಿನ ಮತದಾನ ವಾಗಿತ್ತು. ಅದರಂತೆ ಈ ಭಾರಿಯೂ ಜಿಲ್ಲಾ ಸ್ವೀಪ್ ಸಮಿತಿ ಮನೆ ಭೇಟಿ, ಮ್ಯಾರಾಥಾನ್, ಪಂಜಿನ ಮೆರವಣಿಗೆ, ಆರೋಗ್ಯ ಶಿಬಿರ, ಮೇಣದ ಬತ್ತಿ ಹಚ್ಚುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಭಾರಿ ವಿಶೇಷವಾಗಿ ಯುವ ಮತದಾರರು ವಿಶೇಷ ಚೇತನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ರುದ್ರೇಶಪ್ಪ, ಜಿಲ್ಲಾ ಮುಖ್ಯ ಲೆಕ್ಕಾಧಿಕಾರಿಗಳಾದ ಅಮೀನ್ ಅತ್ತಾರ್, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಸಂತೋಷ ಪಾಟೀಲ್ ಬಿರಾದಾರ್, ತಾಲೂಕು ಎಇಆರ್ ಒರಾದ ಮತ್ತು ತಹಶಿಲ್ದಾರರಾದ ಬಸವರಾಜ ತೆನ್ನಳ್ಳಿ, ಕುಕನೂರ ತಹಶೀಲ್ದಾರ್ ರಾದ ಅಶೋಕ ಎಸ್. ಹಾಗೂ ತಾಲೂಕು ಮಟ್ಟದ‌ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಪ್ಲೈಯಿಂಗ್ ಸ್ವ್ಕಾಡ್, ಬಿಎಲ್ಒರವರು, ಎಲ್ಲ ಗ್ರಾಮ ಪಂಚಾಯತಿ ಪಿಡಿಒರವರು, ಗ್ರಾ.ಪಂ ಸಿಬ್ಬಂದಿ, ಮಾಧ್ಯಮ ಸ್ನೇಹಿತರು, ಯುವ ಮತದಾರರು ಸಾರ್ವಜನಿಕರು ಹಾಜರಿದ್ದರು.

ಯುವ ಮತದಾರ ಮಂಜುನಾಥ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕೊಪ್ಪಳ ರವರಿಗೆ ಬಾಲಿಂಗ್ ಮಾಡುವ ಮೂಲಕ ಖುಷಿಯ ಕ್ಷಣಗಳನ್ನು ಅನುಭವಿಸಿದರು.

ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯಲಬುರ್ಗಾ ಬಿಸಿಎಂ ವಿದ್ಯಾರ್ಥಿಗಳು ಯಲಬುರ್ಗಾ ಕ್ರಿಡಾಂಗಣದಲ್ಲಿ ಮಾನ್ಯ ಸಿಇಒ ಸರ್ ಅವರಿಗೆ ಮತದಾನ ಮಾಡುವುದಾಗಿ ಭರವಸೆ ನೀಡಿದರು.

ಮೆಟ್ರಿಕ್ ನಂತರದ ಬಿ ಸಿ ಎಮ್ ವಸತಿ ನಿಲಯದ ವಿದ್ಯಾರ್ಥಿನಿ ನೇತ್ರಾವತಿ ಮೇಟಿ ಯುವ ರವರು ಟಾಸ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!