IMG-20240228-WA0022

ರಂಗಭೂಮಿ ಕಲೆಗೆ ಜೀವನ ಮುಡುಪಾಗಿಟ್ಟ ಬಾಬಣ್ಣ ಕಲ್ಮನಿಯವರ ಸೇವೆ ಅನನ್ಯ : ಸಾಹಿತಿ ಕೆ ಬಿ ಬ್ಯಾಳಿ

ಕರುನಾಡ ಬೆಳಗು ಸುದ್ದಿ 

ಕುಕನೂರ,28- ಬದುಕಿರುವವರೆಗೂ ರಂಗಭೂಮಿ ಕಲೆಗೆ ಜೀವನ ಮುಡುಪಾಗಿಟ್ಟ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿಯವರ ರಂಗ ಸೇವೆ ಅನನ್ಯ ಎಂದು ಹಿರಿಯ ಸಾಹಿತಿ ಕೆ ಬಿ ಬ್ಯಾಳಿ ಹೇಳಿದರು.

 

ಪಟ್ಟಣದ ಶ್ರೀ ಪಂಚಾಕ್ಷರಿ ಸಂಗೀತ ಪಾಠಶಾಲೆಯಲ್ಲಿ ಮಂಗಳವಾರ ದಿವಸ ಶ್ರೀ ಪಂಚಾಕ್ಷರಿ ಸಾಹಿತ್ಯ ಸಂಗೀತ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಿರಿಯ ರಂಗಭೂಮಿ ಕಲಾವಿದ ದಿವಂಗತ ಬಾಬಣ್ಣ ಕಲ್ಮನಿಯವರ ಸ್ವರ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾತಪಸ್ವಿ ರೆಹಮಾನವ್ವ ಕಲ್ಮನಿ ಹಾಗೂ ಅವರ ಕುಟುಂಬ ನಾಡಿನ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಒಂದು ಗ್ರಾಮೀಣ ಪ್ರತಿಭೆ ರಾಜ್ಯದ್ಯಂತ ಹೆಸರು ಮಾಡಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಮೇರು ಪ್ರತಿಭೆಗಳು ತಾಯಿಯ ಕರೆಯನ್ನು ಮೈಗೂಡಿಸಿಕೊಂಡ ಬಾಬಣ್ಣನವರು ಸಾವಿರಾರು ನಾಟಕಗಳನ್ನಾಡಿ ಸೈನಿಸಿಕೊಂಡಿದ್ದಾರೆ ರಂಗಭೂಮಿ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಇವರು ಜಿಲ್ಲೆಯಲ್ಲಿ ಮೊದಲಿಗರು. ಯುವ ಕಲಾವಿದರಿಗೆ ಇಂಥ ಕಲಾವಿದರು ಸ್ಪೂರ್ತಿ ಎಂದರು.

 

ಕುಕನೂರ ಡಿಪ್ಲೋಮಾ ಕಾಲೇಜಿನ ಪ್ರಾಚಾರ್ಯರಾದ ಎನ್ ಆರ್ ಕುಕನೂರ ಮಾತನಾಡಿ, ಜೀವನದಲ್ಲಿ ಎಂದೆಂದೂ ಆಡಂಬರವಾಗಿರದೆ ಸರಳ ಸಜ್ಜನಿಕೆಯಿಂದ ಜೀವನ ಸಾಗಿಸಿ ಪ್ರತಿಯೊಬ್ಬರಿಗೆ ಮಾದರಿಯಾದವರು ಕಲಾವಿದ ಬಾಬಣ್ಣ ಕಲ್ಮನಿಯವರು, ಅವರ ಅಗಲಕ್ಕೆಯಿಂದ ರಂಗಭೂಮಿ ಕಲೆಗೆ ಅಪಾರ ನಷ್ಟವಾಗಿದೆ. ಬದುಕಿದ್ದಕ್ಕೂ ಕಷ್ಟ ಕಾರ್ಪಣ್ಯಗಳ ಜೊತೆ ಜೊತೆಗೆ ಸದಾ ಹಸನ್ಮುಖಿಯಾಗಿ ಬದುಕಿದವರು ಎಂದರು.

ಈ ಸಂದರ್ಭದಲ್ಲಿ ಶ್ರೀ ಪಂಚಾಕ್ಷರಿ ಸಂಗೀತ ಪಾಠಶಾಲೆಯ ಅಧ್ಯಕ್ಷ ಹಾಗೂ ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಯವರಿಂದ ಸಂಗೀತ ಸೇವೆ ಜರುಗಿತು. ಕಲಾವಿದರಾದ ಖಾದಿರಸಾಬ್ ಸಿದ್ನೆಕೊಪ್ಪ, ಸುಮತಿ ಮಂಜುನಾಥ್, ಪದ್ಮಾವತಿ ಭಜಂತ್ರಿ, ಹಾಗೂ ಪಾಠಶಾಲೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಮೈಬುಬಿ ಬಾಬಣ್ಣ ಕಲ್ಮನಿ, ಜಿ ಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಸಾಹಿತಿ ಡಾ. ಪಕೀರಪ್ಪ ವಜ್ಜಲಬಂಡಿ , ಡಾ. ಬಸವರಾಜ ಬಣ್ಣದಬಾವಿ, ಪತ್ರಕರ್ತ ಅಲ್ಲಾವುದ್ದೀನ್ ಎಮ್ಮಿ, ಕುಕನೂರಿನ ಅಂಜುಮನ್ ಕಮಿಟಿಯ ಅಧ್ಯಕ್ಷ ರಶೀದಸಾಬ್ ಉಮಚಿಗಿ, ಹಿರಿಯರಾದ ಹನುಮಂತಪ್ಪ ಜಳ್ಕಿ, ಪತ್ರಕರ್ತ ಬಸವರಾಜ ಕೊಡ್ಲಿ , ಜನಪದ ಕಲಾವಿದ ಶರಣಯ್ಯ ಇಟಿಗಿ, ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯ ಕನಕಪ್ಪ ಬ್ಯಾಡಾರ್, ದಾನಮ್ಮ, ಭಾಸ್ಕರ್ ಆಚಾರ್, ಅಂಬರೀಶ್ ಬಡಿಗೇರ್, ರಾಕೇಶ್, ಸೇರಿದಂತೆ ಪಾಠಶಾಲೆಯ ವಿದ್ಯಾರ್ಥಿಗಳು ಕಲಾವಿದರು ಇತರರು ಉಪಸ್ಥಿತರಿದ್ದರು..

 

Leave a Reply

Your email address will not be published. Required fields are marked *

error: Content is protected !!